''ಕರೆ ಕಟ್ ಮಾಡ್ತಾನೆ.. ಇದೇನಾ ಹಿರಿಯರಿಗೆ ನೀಡುವ ಗೌರವ'': ಅಶ್ವಿನ್ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಆಕ್ರೋಶ

ಇಂಗ್ಲೆಂಡ್ ವಿರುದ್ಧ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳೆ 100ನೇ ಟೆಸ್ಟ್ ಆಡುತ್ತಿರುವ ಭಾರತ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ವಿರುದ್ಧ ಟೀಂ ಇಂಡಿಯಾದ ಮಾಜಿ ಆಟಗಾರೊಬ್ಬರು ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.
ಆರ್ ಅಶ್ವಿನ್ ಮತ್ತು ಲಕ್ಷ್ಮಣ್ ಶಿವರಾಮಕೃಷ್ಣನ್
ಆರ್ ಅಶ್ವಿನ್ ಮತ್ತು ಲಕ್ಷ್ಮಣ್ ಶಿವರಾಮಕೃಷ್ಣನ್

ಚೆನ್ನೈ: ಇಂಗ್ಲೆಂಡ್ ವಿರುದ್ಧ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ವೇಳೆ 100ನೇ ಟೆಸ್ಟ್ ಆಡುತ್ತಿರುವ ಭಾರತ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ವಿರುದ್ಧ ಟೀಂ ಇಂಡಿಯಾದ ಮಾಜಿ ಆಟಗಾರೊಬ್ಬರು ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.

ಹೌದು.. 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಅಶ್ವಿನ್ ವಿರುದ್ಧ ಟಿಂ ಇಂಡಿಯಾದ ಮಾಜಿ ಆಟಗಾರ ಮತ್ತು ತಮಿಳುನಾಡು ಮೂಲದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಕಿಡಿಕಾರಿದ್ದು, ಹಿರಿಯರಿಗೆ ಗೌರವ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಆರ್ ಅಶ್ವಿನ್ ಮತ್ತು ಲಕ್ಷ್ಮಣ್ ಶಿವರಾಮಕೃಷ್ಣನ್
ಭಾರತದ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ಆರ್ ಅಶ್ವಿನ್, ಅನಿಲ್ ಕುಂಬ್ಳೆ ಹಿಂದಿಕ್ಕಿದ ಸ್ಪಿನ್ನರ್!

100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಅಶ್ವಿನ್ ಗೆ ಶುಭ ಕೋರಲು ಲಕ್ಷ್ಮಣ್ ಶಿವರಾಮಕೃಷ್ಣನ್ ಕರೆ ಮಾಡಿದ್ದು, ಆದರೆ ಈ ಕರೆಯನ್ನು ಅಶ್ವಿನ್ ಸ್ವೀಕರಿಸಿಲ್ಲ ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಆರೋಪಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಆರ್.ಅಶ್ವಿನ್ ಗೆ ಶುಭ ಕೋರಲು ನಾನು ಕೆಲವು ಬಾರಿ ಕರೆ ಮಾಡಲು ಯತ್ನಿಸಿದ್ದೆ. ಆಗ ಅಶ್ವಿನ್ ನನ್ನ ಕರೆ ಕಟ್ ಮಾಡಿದರು. ಬಳಿಕ ಅವನಿಗೆ ಸಂದೇಶ ಕಳುಹಿಸಿದೆ, ಅದಕ್ಕೂ ಯಾವುದೇ ಉತ್ತರವಿಲ್ಲ. ಇದು ನಮ್ಮಂತಹ ಮಾಜಿ ಕ್ರಿಕೆಟಿಗರು ಪಡೆಯುತ್ತಿರುವ ಗೌರವ” ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

ಲಕ್ಷ್ಮಣ್ ಶಿವರಾಮಕೃಷ್ಣನ್ ಟ್ವೀಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಶ್ವಿನ್ ನಡೆ ಕೂಡ ಟೀಕೆಗೆ ಗುರಿಯಾಗಿದೆ.

ನೀವೇ ಅಶ್ವಿನ್‌ಗೆ ಅಗೌರವ ತೋರಿದ್ದೀರಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಿಯೊಬ್ಬರು ಆರೋಪಿಸಿದ್ದಕ್ಕೆ ಸ್ಪಷ್ಟನೆ ನೀಡಿದ ಶಿವರಾಮಕೃಷ್ಣನ್, ಇದು ತಾಂತ್ರಿಕತೆಗೆ ಸಂಬಂಧಿಸಿದ ಸಲಹೆಯಾಗಿದೆ. ಇದು ಟೀಕೆಯೂ ಅಲ್ಲ. ಅಗೌರವವೂ ಅಲ್ಲ. ಇದರಲ್ಲಿ ಉತ್ತಮ ಉದ್ದೇಶವಿದೆ. ಸಲಹೆಗಳನ್ನು ನೀಡುವುದು ಅವಮಾನ ಅಥವಾ ಅಪರಾಧ ಎಂದು ನೀವು ಭಾವಿಸಿದರೆ ದೇವರೇ ನಿಮ್ಮನ್ನು ಕ್ಷಮಿಸಲಿ. ನಾನು 43 ವರ್ಷಗಳಿಂದ ಕ್ರಿಕೆಟ್ ಜೊತೆಗಿದ್ದೇನೆ. ಹಾಗಾಗಿ ನನಗೆ ಆಟದ ಬಗ್ಗೆ ಸ್ವಲ್ಪ ಜ್ಞಾನವಿದೆ ಎಂದು ಬರೆದಿದ್ದಾರೆ.

ಆರ್ ಅಶ್ವಿನ್ ಮತ್ತು ಲಕ್ಷ್ಮಣ್ ಶಿವರಾಮಕೃಷ್ಣನ್
Ashwin's 500 Wickets: 500 ವಿಕೆಟ್ ಮೈಲುಗಲ್ಲು ದಾಟಿದ ಆರ್. ಅಶ್ವಿನ್; ಇತಿಹಾಸ ಸೃಷ್ಟಿಸಿದ 2ನೇ ಭಾರತೀಯ!

ಅಶ್ವಿನ್ ಗೆ ಮಹತ್ವದ ಪಂದ್ಯ

ಅಂದಹಾಗೆ ಗುರುವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯ ಅಶ್ವಿನ್ ಗೆ ಮಹತ್ವದ ಪಂದ್ಯವಾಗಿದ್ದು, ಇದು ಅವರ 100ನೇ ಟೆಸ್ಟ್ ಪಂದ್ಯವಾಗಿದೆ. ಭಾರತದ ಪ್ರಮುಖ ಸ್ಪಿನ್ನರ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ಮಾ.7 ರಿಂದ ಆರಂವಾಗಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 100ನೇ ಟೆಸ್ಟ್ ಮೈಲಿಗಲ್ಲು ತಲುಪಲು ಎದುರು ನೋಡುತ್ತಿದ್ದಾರೆ.

ಅಶ್ವಿನ್ ಇತ್ತೀಚೆಗೆ ರಾಜ್ಕೋಟ್ ನಲ್ಲಿ ನಡೆದ 3ನೇ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅನಿಲ್ ಕುಂಬ್ಳೆ ನಂತರ 500 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಇದೀಗ 35ನೇ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿ ಕುಂಬ್ಳೆ ಅವರ ದಾಖಲೆಯನ್ನು ಮುರಿಯುವತ್ತ ಚಿತ್ತಹರಿಸಿದ್ದಾರೆ. ಅಶ್ವಿನ್ ಸದ್ಯ ಟೆಸ್ಟ್ ಕ್ರಿಕೆಟ್ ನಲ್ಲಿ 35 ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದ್ದಾರೆ.

ಧರ್ಮಶಾಲಾದಲ್ಲಿ ಇನ್ನೊಮ್ಮೆ ಐದು ವಿಕೆಟ್ ಕಬಳಿಸಿದರೆ ಕುಂಬ್ಳೆ ದಾಖಲೆಯನ್ನು ಮುರಿಯಬಹುದು. ಟೆಸ್ಟ್ ಕ್ರಿಕೆಟ್ ನಲ್ಲಿ ಮುತ್ತಯ್ಯ ಮುರಳೀಧರನ್(67), ಶೇನ್ ವಾರ್ನ್(37) ಹಾಗೂ ರಿಚರ್ಡ್ ಹ್ಯಾಡ್ಲಿ(36)ಅತ್ಯಂತ ಹೆಚ್ಚು ಬಾರಿ ಐದು ವಿಕೆಟ್ ಗೊಂಚಲನ್ನು ಕಬಳಿಸಿದ್ದಾರೆ.

ಇನ್ನು ಶಿವರಾಮಕೃಷ್ಣನ್ ಅವರು 1983 ಹಾಗೂ 1987ರ ನಡುವೆ ಭಾರತದ ಪರ 9 ಟೆಸ್ಟ್ ಹಾಗೂ 16 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com