WPL 2024: ಮುಂಬೈ ವಿರುದ್ಧ ಗೆದ್ದು RCB ಪ್ಲೇಆಫ್‌ಗೆ ​ ಪ್ರವೇಶ!

ಆರ್​ಸಿಬಿ ಆಟಗಾರ್ತಿ ಎಲ್ಲಿಸ್ ಪೆರಿಯ ಸ್ಮರಣೀಯ ಆಲ್‌ರೌಂಡ್ ಪ್ರದರ್ಶನದಿಂದಾಗಿ RCB ಮುಂಬೈ ಇಂಡಿಯನ್ಸ್ ಅನ್ನು 30 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳಿಂದ ಸೋಲಿಸಿ ಪ್ಲೇಆಫ್‌ಗೆ ಪ್ರವೇಶಿಸಿದೆ.
ಎಲ್ಲಿಸ್ ಪೆರಿ
ಎಲ್ಲಿಸ್ ಪೆರಿ

ನವದೆಹಲಿ: ಆರ್​ಸಿಬಿ ಆಟಗಾರ್ತಿ ಎಲ್ಲಿಸ್ ಪೆರಿಯ ಸ್ಮರಣೀಯ ಆಲ್‌ರೌಂಡ್ ಪ್ರದರ್ಶನದಿಂದಾಗಿ RCB ಮುಂಬೈ ಇಂಡಿಯನ್ಸ್ ಅನ್ನು 30 ಎಸೆತಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳಿಂದ ಸೋಲಿಸಿ ಪ್ಲೇಆಫ್‌ಗೆ ಪ್ರವೇಶಿಸಿದೆ.

ಪೆರ್ರಿ ಮೊದಲ 15 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಪಡೆಯುವ ಮೂಲಕ ಮಹಿಳಾ ಪ್ರೀಮಿಯರ್ ಲೀಗ್‌ನ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಆ ಬಳಿಕ ಅವರು ಅಜೇಯ 40 ರನ್ ಗಳಿಸಿದರು.

ಪೆರಿ-ರಿಚಾ 76 ರನ್‌ಗಳ ಜೊತೆಯಾಟ

114 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ 39 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ನಾಯಕಿ ಸ್ಮೃತಿ ಮಂಧಾನ (11), ಮೊಲಿನಿಯಕ್ಸ್ (9), ಡಿವೈನ್ (4) ವಿಕೆಟ್ ಪತನದ ನಂತರ ಪೆರ್ರಿಗೆ ರಿಚಾ ಘೋಷ್ ಉತ್ತಮ ಬೆಂಬಲ ನೀಡಿದರು. ಇವರಿಬ್ಬರೂ 53 ಎಸೆತಗಳಲ್ಲಿ 76 ರನ್‌ಗಳ ಮುರಿಯದ ಜೊತೆಯಾಟ ನೀಡಿದರು. ಪೆರ್ರಿ 38 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 40 ರನ್ ಗಳಿಸಿದರೆ, ರಿಚಾ 28 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 36 ರನ್ ಗಳಿಸಿದರು. ಮುಂಬೈ ಮತ್ತು ದೆಹಲಿ ತಂಡಗಳು ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದಿವೆ.

ಎಲ್ಲಿಸ್ ಪೆರಿ
IPL 2024: ಕೀಪರ್-ಬ್ಯಾಟರ್ ರಿಷಬ್ ಪಂತ್ ಫಿಟ್; ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ ಔಟ್!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com