WPL 2024: ಮುಂಬೈನ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟ RCB

ಡಬ್ಲ್ಯುಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡವನ್ನು ಐದು ರನ್ ಗಳಿಂದ ಮಣಿಸಿ RCB ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.
ಆರ್ ಸಿಬಿ ತಂಡ
ಆರ್ ಸಿಬಿ ತಂಡ

ನವದೆಹಲಿ: ಡಬ್ಲ್ಯುಪಿಎಲ್ 2024ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡವನ್ನು ಐದು ರನ್ ಗಳಿಂದ ಮಣಿಸಿ RCB ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.

ದೆಹಲಿಯಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 5 ರನ್​ಗಳಿಂದ ಮಣಿಸಿದ ಸ್ಮೃತಿ ಮಂಧಾನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಮಹಿಳೆಯರ ಪ್ರೀಮಿಯರ್ ಲೀಗ್ ಫೈನಲ್​ ತಲುಪಿದೆ.

ಮೊದಲು ಬ್ಯಾಟ್ ಮಾಡಿದ ಬೆಂಗಳೂರು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿತು. ಇನ್ನು 136 ರನ್ ಗುರಿ ಬೆನ್ನಟ್ಟಿದ ಮುಂಬೈ 6 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರ್ ಸಿಬಿ ತಂಡ
IPL 2024: ಶೀಘ್ರದಲ್ಲೇ RCB ಅಭ್ಯಾಸ ಶಿಬಿರಕ್ಕೆ ಕಿಂಗ್ ಕೊಹ್ಲಿ!

ಗುರಿ ಬೆನ್ನಟ್ಟಿದ ಮುಂಬೈ ಉತ್ತಮ ಆರಂಭ ಪಡೆದಿತ್ತು. ಆರ್‌ಸಿಬಿಗೆ ಮೊದಲ ಯಶಸ್ಸು ತಂದುಕೊಟ್ಟ ಶ್ರೇಯಾಂಕಾ ಪಾಟೀಲ್. ಹೇಲಿ ಮ್ಯಾಥ್ಯೂಸ್ ಔಟಾಗಿ ಮುಂಬೈಗೆ ಮೊದಲ ಪೆಟ್ಟು ನೀಡಿದರು. ಇದಾದ ನಂತರ ಯಾಸ್ತಿಕಾ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಎಲಿಸ್ ಪೆರ್ರಿ ಮತ್ತೊಂದು ಹೊಡೆತ ನೀಡಿದರು.

ನೇಟ್ ಸಿವರ್ ಬ್ರಂಟ್ 23 ರನ್ ಗಳ ಇನಿಂಗ್ಸ್ ಆಡಿದರು. ಅದೇ ಸಮಯದಲ್ಲಿ ಅಮೆಲಿಯಾ ಕೆರ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ನಡುವೆ ಅರ್ಧಶತಕದ ಜೊತೆಯಾಟವಿತ್ತು. ಆದಾಗ್ಯೂ, ಹರ್ಮನ್‌ಪ್ರೀತ್ ಕೌರ್ ಅವರನ್ನು ಔಟ್ ಮಾಡುವ ಮೂಲಕ ಶ್ರೇಯಾಂಕಾ ಈ ಜೊತೆಯಾಟವನ್ನು ಮುರಿದು RCB ಅನ್ನು ಪಂದ್ಯಕ್ಕೆ ಮರಳಿ ತಂದರು. ಅಮೆಲಿಯಾ ಕೆರ್ 27 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಇದಕ್ಕೂ ಮುನ್ನ ಆರ್‌ಸಿಬಿ ಪರ ಎಲ್ಲಿಸ್ ಪೆರ್ರಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 66 ರನ್ ಗಳಿಸಿದ್ದರು. ಆದರೆ, ಬೌಲಿಂಗ್‌ನಲ್ಲಿ ಮುಂಬೈ ಪರ ಹ್ಯಾಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಸಿವರ್ ಬ್ರಂಟ್ ತಲಾ ಎರಡು ವಿಕೆಟ್ ಪಡೆದರು.

ಟೂರ್ನಿಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಗೆ ಲಗ್ಗೆ ಇಟ್ಟಿದ್ದು ಇದೀಗ ಆರ್ ಸಿಬಿಮತ್ತು ಡೆಲ್ಲಿ ಕ್ಯಾಪಿಟಲ್ಸ್ ಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com