RCB vs PBKS: ತವರಿನಲ್ಲಿ ಗೆಲುವಿನ ಅಧ್ಯಾಯ ಆರಂಭಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜು!

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ನಡೆಯಲಿರುವ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸಿದ್ಧವಾಗಿದ್ದು, ನಾಯಕ ಫಾಫ್ ಡು ಪ್ಲೆಸಿಸ್, ಎಂ ಚಿನ್ನಸ್ವಾಮಿ ಕ್ರೀಡಾಂಗಣ 'ಬ್ಯಾಟಿಂಗ್ ಮಾಡಲು ಉತ್ತಮ ಸ್ಥಳ'ವಾಗಿದೆ ಎಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ನಡೆಯಲಿರುವ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಸಿದ್ಧವಾಗಿದ್ದು, ನಾಯಕ ಫಾಫ್ ಡು ಪ್ಲೆಸಿಸ್, ಎಂ ಚಿನ್ನಸ್ವಾಮಿ ಕ್ರೀಡಾಂಗಣ 'ಬ್ಯಾಟಿಂಗ್ ಮಾಡಲು ಉತ್ತಮ ಸ್ಥಳ'ವಾಗಿದೆ ಎಂದಿದ್ದಾರೆ.

ಆರ್‌ಸಿಬಿಯಿಂದ ಗೇಮ್ ಡೇ ಹೊಸ ಸಂಚಿಕೆಯಲ್ಲಿ ಮಾತನಾಡಿದ ಅವರು, ಮುಂಬರುವ ಪಂದ್ಯದಲ್ಲಿ ಭಾಗವಹಿಸಲು ತಮ್ಮ ತಂಡ ಸಿದ್ಧವಾಗಿದೆ. ಮೊದಲ ಪಂದ್ಯ ಚೆನ್ನೈನಲ್ಲಿತ್ತು ಮತ್ತು ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ನೆರೆದಿದ್ದರು. ಇದೀಗ, ಮತ್ತೆ ಇಲ್ಲಿ ಬ್ಯಾಟಿಂಗ್ ಮಾಡಲು ಎದುರು ನೋಡುತ್ತಿದ್ದೇನೆ. ಬೆಂಗಳೂರಿನ ಪಿಚ್ ಬ್ಯಾಟಿಂಗ್ ಮಾಡಲು ಉತ್ತಮ ಸ್ಥಳವಾಗಿದೆ ಎಂದರು.

ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ಮಾತನಾಡಿದ್ದು, ಬೆಂಗಳೂರಿನ ಪಿಚ್ ಬ್ಯಾಟಿಂಗ್‌ಗೆ 'ಸುಂದರವಾಗಿದೆ'. ಔಟ್‌ಫೀಲ್ಡ್ ಕೂಡ ತ್ವರಿತವಾಗಿದೆ ಎಂದು ಅವರು ಹೇಳಿದರು.

'ಇದೊಂದು ಸುಂದರವಾದ ಬ್ಯಾಟಿಂಗ್ ವಿಕೆಟ್ ಆಗಿದೆ ಮತ್ತು ಔಟ್‌ಫೀಲ್ಡ್ ಕೂಡ ವೇಗವಾಗಿದೆ. ಮೊದಲ ಬಾರಿಗೆ RCB ಆಟಗಾರನಾಗಿರುವುದು ಹೊಸ ಅನುಭವವಾಗಿದೆ ಮತ್ತು ನಾನು ತುಂಬಾ ಉತ್ಸುಕನಾಗಿದ್ದೇನೆ. ಅಭಿಮಾನಿಗಳ ಕಿರುಚಾಟ ಮತ್ತು ಕೂಗುಗಳಿಗೆ ಎದುರು ನೋಡುತ್ತಿದ್ದೇನೆ ಎಂದು ಗ್ರೀನ್ ಹೇಳಿದರು.

ಬೆಂಗಳೂರು ತಂಡಕ್ಕೆ ಮೊದಲ ಸೋಲಾಗಿದೆ. ಆದರೆ, ಪಂಜಾಬ್ ತಂಡವನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಅನುಜ್ ರಾವತ್ ಹೇಳಿದರು.

ಶುಕ್ರವಾರ (ಮಾ.22) ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್‌ಗಳ ಸೋಲನ್ನು ಎದುರಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ಎರಡನೇ ಪಂದ್ಯವನ್ನು ಆಡಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
RCB ವಿಕೆಟ್- ಕೀಪರ್ ಸ್ಥಾನದ ಮೇಲೆ ಅನುಜ್ ರಾವತ್ ಕಣ್ಣು!

ಭಾರತದ ಬ್ಯಾಟರ್ ರಜತ್ ಪಾಟಿದಾರ್ ಮಾತನಾಡಿ, ನಾನು ಲಾಯಲ್ ಅಭಿಮಾನಿಗಳ ಮುಂದೆ ಆಡಲು ಉತ್ಸುಕನಾಗಿದ್ದೇನೆ. ಆದ್ದರಿಂದ, ತಂಡದ ಮೇಲೆ ನಿಮ್ಮ ಬೆಂಬಲ ಮತ್ತು ಪ್ರೀತಿ ಸದಾ ಹೀಗೆ ಇರಲಿ. ಅತ್ಯಂತ ಅನುಭವಿ ಆಟಗಾರರ ಜೊತೆ ಆಡುವುದು ಒಂದು ವಿಶೇಷ ಅನುಭವವಾಗಿದೆ. ಅವರು ತಮ್ಮ ದೇಶದಲ್ಲಿ ಸುದೀರ್ಘ ಕ್ರಿಕೆಟ್ ಆಡಿದ್ದಾರೆ. ಇದು ನನಗೆ ಉತ್ತಮ ಕಲಿಕೆಯಾಗಿದೆ ಎಂದರು.

ಆರ್‌ಸಿಬಿ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯೇಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೂನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರಣ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್ ಮತ್ತು ಸೌರವ್ ಚೌಹಾಣ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com