
ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯಲ್ಲಿ ಇಂದಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ ಐಪಿಎಲ್ ಇತಿಹಾಸದಲ್ಲೇ ತನ್ನ 2ನೇ ಅತೀ ದೊಡ್ಡ ಗೆಲುವು ಸಾಧಿಸಿದೆ.
ಹೌದು.. ಇಂದು ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ನೀಡಿದ್ದ 160ರನ್ ಗಳ ಗುರಿಯನ್ನು ಕೋಲ್ಕತಾ ನೈಟ್ ರೈಡರ್ಸ್ ತಂಡ 13.4 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಇನ್ನೂ 38 ಎಸೆತಗಳು ಇರುವಂತೆಯೇ 164 ರನ್ ಗಳಿಸಿ ಗುರಿ ಮುಟ್ಟಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ತನ್ನ 2ನೇ ಅತೀ ದೊಡ್ಡ ಗೆಲುವನ್ನು ಕೋಲ್ಕತಾ ತಂಡ ದಾಖಲಿಸಿದೆ.
ಇದಕ್ಕೂ ಮೊದಲು ಇದೇ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಲಕ್ನೋ ಸೂಪರ್ ಜೈಂಟ್ಸ್ ನೀಡಿದ್ದ 166ರನ್ ಗಳ ಗುರಿಯನ್ನು ಕೇವಲ 9.4 ಓವರ್ ನಲ್ಲೇ ಇನ್ನೂ 62 ಎಸೆತಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿತ್ತು. ಇದು ಐಪಿಎಲ್ ಇತಿಹಾಸದ ತಂಡವೊಂದರ ಅತೀ ದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು ಈ ದಾಖಲೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಹೆಸರಿನಲ್ಲಿತ್ತು. 2014ರಲ್ಲಿ ಇದೇ ಸನ್ ರೈಸರ್ಸ್ ಹೈದರಾಬಾದ್ ನೀಡಿದ್ದ 161ರನ್ ಗಳ ಗುರಿಯನ್ನು ಕೋಲ್ಕತಾ ತಂಡ 15.2 ಓವರ್ ನಲ್ಲಿ ಇನ್ನೂ 34 ಎಸೆತಗಳು ಬಾಕಿ ಇರುವಂತೆ ಗುರಿ ಮುಟ್ಟಿತ್ತು.
Winning with the most balls to spare in IPL (160+ targets)
62 - SRH vs LSG, Hyderabad, 2024 (Target: 166)
38 - KKR vs SRH, Ahmedabad, 2024 (Target: 160)
34 - KKR vs SRH, Kolkata, 2014 (Target: 161)
32 - MI vs RR, Wankhede, 2014 (Target: 190)
ಅತೀ ಹೆಚ್ಚು ಬಾರಿ ಐಪಿಎಲ್ ಫೈನಲ್; 3ನೇ ಸ್ಥಾನಕ್ಕೆ ಜಿಗಿದ ಕೋಲ್ಕತಾ
ಇನ್ನು ಇದೇ ಪಂದ್ಯದ ಮೂಲಕ ಕೋಲ್ಕತಾ ಮತ್ತೊಂದು ದಾಖಲೆ ಮಾಡಿದ್ದು ಅತೀ ಹೆಚ್ಚು ಬಾರಿ ಐಪಿಎಲ್ ಫೈನಲ್ ಗೇರಿದ 3ನೇ ತಂಡ ಎಂಬ ಕೀರ್ತಿಗೂ ಭಾಜನವಾಗಿದೆ. ಈ ಪಟ್ಟಿಯಲ್ಲಿ 10 ಬಾರಿ ಫೈನಲ್ ಆಡಿರುವ ಚೆನ್ನೈ ಸೂಪರ್ ಕಿಂಗ್ಸ್ ಅಗ್ರ ಸ್ಥಾನದಲ್ಲಿದ್ದು, 6 ಬಾರಿ ಫೈನಲ್ ಆಡಿರುವ ಮುಂಬೈ ಇಂಡಿಯನ್ಸ್ 2ನೇ ಸ್ಥಾನದಲ್ಲಿದೆ. 4ನೇ ಬಾರಿಗೆ ಫೈನಲ್ ಗೇರಿರುವ ಕೋಲ್ಕತಾ 3ನೇ ಸ್ಥಾನದಲ್ಲಿದ್ದು, 3 ಬಾರಿ ಫೈನಲ್ ಆಡಿ ಜಂಟಿ ಮೂರನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
Most appearances in the IPL final
10 - CSK
6 - MI
4 - KKR*
3 - RCB
Advertisement