
ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯ ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟರ್ ಗ್ಲೇನ್ ಮ್ಯಾಕ್ಸ್ ವೆಲ್ ಹೀನಾಯ ದಾಖಲೆಯೊಂದನ್ನು ಬರೆದಿದ್ದಾರೆ.
ಇಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ತಾನ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್ ಸಿಬಿಯ ಗ್ಲೇನ್ ಮ್ಯಾಕ್ಸ್ ಶೂನ್ಯಕ್ಕೆ ಔಟಾಗುವ ಮೂಲಕ ಈ ಹೀನಾಯ ದಾಖಲೆ ಬರೆದಿದ್ದು, ಆ ಮೂಲಕ ಮತ್ತೋರ್ವ ಆರ್ ಸಿಬಿ ಆಟಗಾರ ದಿನೇಶ್ ಕಾರ್ತಿಕ್ ರ ಬೇಡದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇಂದಿನ ಪಂದ್ಯದಲ್ಲಿ ಡಕೌಟ್ ಆಗುವ ಮೂಲಕ ಗ್ಲೇನ್ ಮ್ಯಾಕ್ಸ್ ವೆಲ್ ಐಪಿಎಲ್ ನಲ್ಲಿ 18ನೇ ಬಾರಿಗೆ ಡಕೌಟ್ ಆದರು. ಆ ಮೂಲಕ ಐಪಿಎಲ್ ಅತೀ ಹೆಚ್ಚು ಬಾರಿ ಡಕೌಟ್ ಆದ ಆಟಗಾರರ ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ರೊಂದಿಗೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ ದಿನೇಶ್ ಕಾರ್ತಿಕ್ ಕೂಡ ಡಕೌಟ್ ಆಗಿ ಈ ಹೀನಾಯ ದಾಖಲೆಗೆ ಪಾತ್ರರಾಗಿದ್ದರು.
ಈ ಪಟ್ಟಿಯಲ್ಲಿ 17 ಬಾರಿ ಶೂನ್ಯಕ್ಕೆ ಔಟಾಗಿರುವ ಮುಂಬೈ ಇಂಡಿಯನ್ಸ್ ತಂಡದ ರೋಹಿತ್ ಶರ್ಮಾ 2ನೇ ಸ್ಥಾನದಲ್ಲಿದ್ದು, 16 ಬಾರಿ ಡಕೌಟ್ ಆಗಿರುವ ಪಿಯೂಶ್ ಚಾವ್ಲಾ ಮತ್ತು ಸುನಿಲ್ ನರೇನ್ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
Most ducks in the IPL
18 - Dinesh Karthik
18 - Glenn Maxwell
17 - Rohit Sharma
16 - Piyush Chawla
16 - Sunil Narine
ಟಿ20ಯಲ್ಲಿ ಅತೀ ಹೆಚ್ಚು ಡಕೌಟ್, ಜಂಟಿ ಮೂರನೇ ಸ್ಥಾನ
ಇನ್ನು ಇಂದಿನ ಪಂದ್ಯದ ಡಕೌಟ್ ಸೇರಿದಂತೆ ಟಿ20 ಕ್ರಿಕೆಟ್ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಆಟಗಾರರ ಪಟ್ಟಿಯಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಇದೀಗ ಜಂಟಿ 4ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಸುನಿಲ್ ನರೇನ್ ಅಗ್ರಸ್ಥಾನದಲ್ಲಿದ್ದು, ಅವರು ಒಟ್ಟು 44 ಬಾರಿ ಶೂನ್ಯ ಸುತ್ತಿದ್ದಾರೆ. 2ನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ಅಲೆಕ್ಸ್ ಹೇಲ್ಸ್ ಇದ್ದು ಅವರು 43ಬಾರಿ ಡಕೌಟ್ ಆಗಿದ್ದಾರೆ. ಅಫ್ಘಾನಿಸ್ತಾನದ ರಷೀದ್ ಖಾನ್ 42 ಬಾರಿ ಡಕೌಟ್ ಆಗಿ 3ನೇ ಸ್ಥಾನದಲ್ಲಿದ್ದು, ತಲಾ 32 ಬಾರಿ ಶೂನ್ಯ ಸುತ್ತಿರುವ ಮ್ಯಾಕ್ಸ್ ವೆಲ್ ಮತ್ತು ಪಾಲ್ ಸ್ಟರ್ಲಿಂಗ್ ಜಂಟಿ 4ನೇ ಸ್ಥಾನದಲ್ಲಿದ್ದಾರೆ.
Most ducks in Men’s T20 cricket
44 - Sunil Narine
43 - Alex Hales
42 - Rashid Khan
32 - Glenn Maxwell
32 - Paul Stirling
ಒಂದೇ ಸೀಸನ್ ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್: ಮ್ಯಾಕ್ಸಿಗೆ ಜಂಟಿ 2ನೇ ಸ್ಥಾನ
ಇನ್ನು ಐಪಿಎಲ್ ನ ಒಂದೇ ಸೀಸನ್ ನಲ್ಲಿ ಅತೀ ಹೆಚ್ಚು ಬಾರಿ ಡಕೌಟ್ ಆದ ಆಟಗಾರರ ಪಟ್ಟಿಯಲ್ಲೂ ಗ್ಲೇನ್ ಮ್ಯಾಕ್ಸ್ ವೆಲ್ ಜಂಟಿ 2ನೇ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ರಾಜಸ್ಥಾನ ತಂಡದ ಜಾಸ್ ಬಟ್ಲರ್ ಅಗ್ರ ಸ್ಥಾನದಲ್ಲಿದ್ದಾರೆ. ಜಾಸ್ 2023ರ ಐಪಿಎಲ್ ಟೂರ್ನಿಯಲ್ಲಿ ಬರೊಬ್ಬರಿ 5 ಬಾರಿ ಡಕೌಟ್ ಆಗಿದ್ದರು. ಅದೇ ಟೂರ್ನಿಯಲ್ಲಿ ಆರ್ ಸಿಬಿಯ ದಿನೇಶ್ ಕಾರ್ತಿಕ್ 4 ಬಾರಿ ಶೂನ್ಯ ಸುತ್ತಿದ್ದರು.
Most ducks in an IPL season
5 - Jos Buttler (RR, 2023)
4 - Herschelle Gibbs (Deccan Chargers, 2009)
4 - Mithun Manhas (PWI, 2011)
4 - Manish Pandey (PWI, 2012)
4 - Shikhar Dhawan (DC, 2020)
4 - Eoin Morgan (KKR, 2021)
4 - Nicholas Pooran (PBKS, 2021)
4 - Dinesh Karthik (RCB, 2023)
4 - Glenn Maxwell (RCB, 2024)
Advertisement