ಐಪಿಎಲ್ ನಿಯಮ ಉಲ್ಲಂಘನೆ: ಹೆಟ್ಮೆಯರ್ ಗೆ ಪಂದ್ಯ ಶುಲ್ಕದ ಶೇ.10 ರಷ್ಟು ದಂಡ!
ಚೆನ್ನೈ: ಚೆನ್ನೈನಲ್ಲಿ ಶುಕ್ರವಾರ ರಾತ್ರಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದ ವೇಳೆ ಐಪಿಎಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್‌ನ ಶಿಮ್ರಾನ್ ಹೆಟ್ಮೆಯರ್ ಅವರಿಗೆ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ. ಸನ್ ರೈಸರ್ಸ್ ಹೈದ್ರಾಬಾದ್ 36 ರನ್ ಗಳಿಂದ ಪಂದ್ಯ ಗೆದ್ದುಕೊಂಡಿತ್ತು.
ಹೆಟ್ಮೆಯರ್‌ಗೆ ಏಕೆ ದಂಡ ವಿಧಿಸಲಾಯಿತು ಎಂಬುದನ್ನು ಆಯೋಜಕರು ನಿರ್ದಿಷ್ಟಪಡಿಸದಿದ್ದರೂ, ಅವರು ಔಟಾದ ನಂತರ ತೋರಿದ ವರ್ತನೆಗೆ ದಂಡ ವಿಧಿಸಬರಹುದು ಎನ್ನಲಾಗಿದೆ. 14 ನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಬೌಲ್ಡ್ ಮಾಡಿದ ನಂತರ, ಹೆಟ್ಮೆಯರ್ ಹತಾಶೆಯಿಂದ ಸ್ಟಂಪ್‌ಗಳನ್ನು ಚೂರು ಮಾಡಲು ಪ್ರಯತ್ನಿಸಿದರು.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್‌ನ ಶಿಮ್ರಾನ್ ಹೆಟ್ಮೆಯರ್ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.
"Hetmyer IPL ನೀತಿ ಸಂಹಿತೆಯ ಆರ್ಟಿಕಲ್ 2.2 ಅಡಿಯಲ್ಲಿ ಲೆವೆಲ್ 1 ಅಪರಾಧವೆಸಗಿದ್ದಾರೆ. ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪಂದ್ಯದ ರೆಫರಿಯ ನಿರ್ಧಾರ ಅಂತಿಮ ಮತ್ತು ಬದ್ಧವಾಗಿರುವುದಾಗಿ ಅವರು ಹೇಳಿರುವುದಾಗಿ ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ