ಮುಂಬೈನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತವು 0-3 ಅಂತರದ ಅವಮಾನಕರ ವೈಟ್‌ವಾಶ್ ಅನ್ನು ಅನುಭವಿಸಿದ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ನಾಯಕನಾಗಿ ಮತ್ತು ಬ್ಯಾಟ್ ಉತ್ತಮವಾಗಿರಲಿಲ್ಲ ಎಂದು ಒಪ್ಪಿಕೊಂಡರು. ಬೆಂಗಳೂರು ಮತ್ತು ಪುಣೆಯಲ್ಲಿ ನಡೆದ ಮೊದಲ ಎರಡು ಟೆಸ್ಟ್‌ಗಳಲ್ಲಿ ಸೋತಿದ್ದ ಭಾರತ, ಮೂರನೇ ದಿನದಲ್ಲಿ ಬ್ಯಾಟಿಂಗ್ ಕುಸಿತದ ನಂತರ ಮೂರು ದಿನಗಳೊಳಗೆ ಮೂರನೇ ಟೆಸ್ಟ್‌ನಲ್ಲಿ 25 ರನ್‌ಗಳಿಂದ ಸೋತಿದೆ.
147 ರನ್‌ಗಳ ಗುರಿಯನ್ನು ಹೊಂದಿದ್ದ ಭಾರತ, ನ್ಯೂಜಿಲ್ಯಾಂಡ್ ನ ಅಜಾಜ್ ಪಟೇಲ್ ಐದು ವಿಕೆಟ್ ಉರುಳಿಸಿದ್ದು ಪರಿಣಾಮ 121 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ 57 ಎಸೆತಗಳಲ್ಲಿ 64 ರನ್ ಬಾರಿಸುವ ಮೂಲಕ ದಿಟ್ಟ ಹೋರಾಟ ನೀಡಿದರು ಪ್ರಯೋಜನವಾಗಲಿಲ್ಲ. ರೋಹಿತ್ ಶರ್ಮಾ ಈ ಸೋಲನ್ನು ತಮ್ಮ ವೃತ್ತಿಜೀವನದ ಅತ್ಯಂತ ತಳಮಟ್ಟದ್ದು ಎಂದು ಬಣ್ಣಿಸಿದರು. ಅಲ್ಲದೆ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ ಎಂದು ಹೇಳಿದರು.
ತವರಿನಲ್ಲಿ ಈ ರೀತಿಯ ಟೆಸ್ಟ್ ಸರಣಿಯನ್ನು ಸೋತಿದ್ದು 'ಸುಲಭವಾಗಿ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ' ಎಂದು ಹೇಳಿದರು. ಸರಣಿ, ಟೆಸ್ಟ್ ಪಂದ್ಯ ಸೋಲುವುದು ಸುಲಭವಲ್ಲ... ಸುಲಭವಾಗಿ ಅರಗಿಸಿಕೊಳ್ಳಲಾಗದ ಸಂಗತಿ. ನಾವು ನಮ್ಮ ಅತ್ಯುತ್ತಮ ಕ್ರಿಕೆಟ್ ಆಡಲಿಲ್ಲ. ಸರಣಿಯುದ್ದಕ್ಕೂ ನ್ಯೂಜಿಲೆಂಡ್ ಉತ್ತಮವಾಗಿ ಆಡಿದೆ. ನಾವು ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ ಎಂದು ಭಾರತ ತಂಡದ ನಾಯಕ ಹೇಳಿದರು.
ಮೊದಲ ಎರಡು ಟೆಸ್ಟ್‌ಗಳಲ್ಲಿ ನಾವು ಮೊದಲ ಇನ್ನಿಂಗ್ಸ್‌ನಲ್ಲಿ ಸಾಕಷ್ಟು ರನ್‌ಗಳನ್ನು ಕಲೆಹಾಕಲಿಲ್ಲ. ಈ ಪಂದ್ಯದಲ್ಲಿ ನಾವು 30 ರನ್ (28) ಮುನ್ನಡೆ ಸಾಧಿಸಿದ್ದೇವು, ಆದರೆ ಗುರಿ ಮುಟ್ಟಲು ಸಾಧ್ಯವಾಗಲಿಲ್ಲ. ನಾವು ಒಂದು ತಂಡವಾಗಿ ವಿಫಲರಾಗಿದ್ದೇವೆ. ನೀವು ಅಂತಹ ಗುರಿಯನ್ನು ಬೆನ್ನಟ್ಟುತ್ತಿರುವಾಗ, ನೀವು ತಂಡದಲ್ಲಿ ರನ್ಗಳನ್ನು ಬಯಸುತ್ತೀರಿ. ಅದು ನನ್ನ ಮನಸ್ಸಿನಲ್ಲಿತ್ತು. ಆದರೆ ಅದು ಆಗಲಿಲ್ಲ ಎಂದು ಹೇಳಿದರು.
Advertisement