3rd Test: ನ್ಯೂಜಿಲೆಂಡ್ ಗೆ ಐತಿಹಾಸಿಕ ಸರಣಿ ಜಯ, ಭಾರತದಲ್ಲಿ ವೈಟ್ ವಾಶ್ ಮಾಡಿದ ಮೊದಲ ತಂಡ!

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು 25ರನ್ ಗಳ ಅಂತರದಲ್ಲಿ ಮಣಿಸುವ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಬೀಗಿತು.
whitewash on India in India
ನ್ಯೂಜಿಲೆಂಡ್ ಗೆ ಭರ್ಜರಿ ಜಯ
Updated on

ಮುಂಬೈ: ಭಾರತದ ವಿರುದ್ಧ 3ನೇ ಟೆಸ್ಟ್ ಪಂದ್ಯವನ್ನೂ ಗೆದ್ದ ನ್ಯೂಜಿಲೆಂಡ್ ತಂಡ ಭಾರತದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ಭಾರತದಲ್ಲಿ ವೈಟ್ ವಾಶ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು 25ರನ್ ಗಳ ಅಂತರದಲ್ಲಿ ಮಣಿಸುವ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಗೆದ್ದು ಬೀಗಿತು.

ಆ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ತಂಡದ ವಿರುದ್ಧ ಭಾರತದಲ್ಲೇ ವೈಟ್ ವಾಶ್ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ನ್ಯೂಜಿಲೆಂಡ್ ಭಾಜನವಾಗಿದೆ.

whitewash on India in India
3rd Test: ಭಾರತಕ್ಕೆ ಮತ್ತೊಂದು ಹೀನಾಯ ಸೋಲು, ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್!

ನ್ಯೂಜಿಲೆಂಡ್ ತಂಡ ತವರು ಅಥವಾ ವಿದೇಶದಲ್ಲಿ ಮೂರು ಟೆಸ್ಟ್‌ಗಳನ್ನು ಗೆದ್ದ ಮೊದಲ ನಿದರ್ಶನ ಇದಾಗಿದ್ದು, ಮಾತ್ರವಲ್ಲದೇ ಸತತ ಮೂರು ವಿದೇಶಿ ಟೆಸ್ಟ್‌ಗಳನ್ನು ಗೆದ್ದ ಮೊದಲ ತಂಡ ಕೂಡ ಇದಾಗಿದೆ.

ಇನ್ನು ಈ ವೈಟ್ ವಾಶ್ ಮೂಲಕ ಭಾರತವನ್ನು ವೈಟ್ ವಾಶ್ ಮಾಡಿದ ತಂಡಗಳ ಪಟ್ಟಿಗೆ ನ್ಯೂಜಿಲೆಂಡ್ ಸೇರ್ಪಡೆಯಾಗಿದ್ದು, ಈ ಹಿಂದೆ ಇಂಗ್ಲೆಂಡ್ (4), ಆಸ್ಟ್ರೇಲಿಯಾ (3), ಮತ್ತು ವೆಸ್ಟ್ ಇಂಡೀಸ್ (ಒಮ್ಮೆ) ನಂತರ 3+ ಟೆಸ್ಟ್‌ಗಳ ಸರಣಿಯಲ್ಲಿ ಭಾರತವನ್ನು ವೈಟ್‌ವಾಶ್ ಮಾಡಿದ್ದವು. ಇದೀಗ ನಾಲ್ಕನೇ ತಂಡವಾಗಿ ನ್ಯೂಜಿಲೆಂಡ್ ಸೇರ್ಪಡೆಯಾಗಿದೆ.

ಕಡಿಮೆ ಗುರಿಯೂ ಯಶಸ್ವಿ ಡಿಫೆಂಡ್

ಇನ್ನು ಇಂದಿನ ಪಂದ್ಯದ ಗೆಲುವಿನ ಮೂಲಕ ನ್ಯೂಜಿಲೆಂಡ್ ತಂಡ ಮತ್ತೊಂದು ಸಾಧನೆ ಮಾಡಿದ್ದು, 2ನೇ ಬಾರಿಗೆ 150ಕ್ಕಿಂತ ಕಡಿಮೆ ಗುರಿಯನ್ನು ಯಶಸ್ವಿಯಾಗಿ ಡಿಫೆಂಡ್ ಮಾಡಿದೆ. ಈ ಹಿಂದೆ 1978ರಲ್ಲಿ ಇಂಗ್ಲೆಂಡ್ ವಿರುದ್ಧ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ 137ರನ್ ಅನ್ನು ಡಿಫೆಂಡ್ ಮಾಡಿ ಗೆದ್ದಿತ್ತು.

Lowest target successfully defended by NZ

  • 137 vs Eng Wellington 1978

  • 147 vs Ind Wankhede 2024 (Ajaz 6/57)

  • 176 vs Pak Abu Dhabi 2018 (Ajaz 5/59 on debut)

  • 241 vs Aus Hobart 2011

  • 246 vs Eng The Oval 1999

whitewash on India in India
Champions Trophy: ಭಾರತೀಯ ಅಭಿಮಾನಿಗಳ ಮೇಲೆ PCB ಕಣ್ಣು; ಭಾರತ ಓಲೈಸಲು ಪಾಕ್‌ ವಿಭಿನ್ನ ತಂತ್ರ!

200ಕ್ಕೂ ಅಧಿಕ ರನ್ ಗುರಿ ಮುಟ್ಟಲು ವಿಫಲವಾದ ಭಾರತ

ಇನ್ನು ಇದೇ ಪಂದ್ಯದಲ್ಲಿ ಭಾರತ ಕೂಡ ಮತ್ತೊಂದು ಹೀನಾಯ ಸೋಲು ದಾಖಲಿಸಿದ್ದು, ಈ ಹಿಂದೆ 1997ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬ್ರಿಡ್ಜ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ 120 ರನ್ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾಗಿತ್ತು.

India failing to chase target under 200 in a Test

  • 120 vs WI Bridgetown 1997

  • 147 vs NZ Wankhede 2024

  • 176 vs SL Galle 2015

  • 194 vs Eng Edgbaston 2018

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com