ಮುಂಬೈ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಭಾರತವನ್ನು 25 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ನ್ಯೂಜಿಲೆಂಡ್ ಆತಿಥೇಯ ಭಾರತವನ್ನು ತನ್ನದೇ ನೆಲದಲ್ಲಿ 3-0 ಅಂತರದಿಂದ ವೈಟ್ ವಾಶ್ ಮಾಡಿತು. ಮುಂಬೈನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಗೆಲುವಿಗೆ ಕೇವಲ 147 ರನ್‌ಗಳ ಗುರಿ ಹೊಂದಿತ್ತು. ಆದರೆ ಭಾರತ ತಂಡ 121 ರನ್‌ಗಳಿಗೆ ಆಲೌಟ್ ಆಗಿತ್ತು.
ಆದರೆ, ಪಂದ್ಯದ ವೇಳೆ ಭಾರತ ತಂಡ ಸಂಕಷ್ಟದಲ್ಲಿದ್ದಾಗ ರಿಷಬ್ ಪಂತ್ ಇನ್ನಿಂಗ್ಸ್ ಮುನ್ನಡೆಸಿ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರು. ಈ ಸಮಯದಲ್ಲಿ ಭಾರತ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಮತ್ತು ಪಂತ್ ವಿವಾದಾತ್ಮಕ ರೀತಿಯಲ್ಲಿ ಔಟಾದರು. ಈ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ.
ಮುಂಬೈ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 235 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತದ ಮೊದಲ ಇನಿಂಗ್ಸ್ 263 ರನ್‌ಗಳಿಗೆ ಅಂತ್ಯಗೊಂಡಿತು. ಭಾರತಕ್ಕೆ 28 ರನ್‌ಗಳ ಮುನ್ನಡೆ ಸಿಕ್ಕಿತು. ಇದರ ನಂತರ, ನ್ಯೂಜಿಲೆಂಡ್‌ನ ಎರಡನೇ ಇನ್ನಿಂಗ್ಸ್ 174 ರನ್‌ಗಳಿಗೆ ಕೊನೆಗೊಂಡಿದ್ದು ಭಾರತಕ್ಕೆ 147 ರನ್‌ಗಳ ಗುರಿ ನೀಡಿತ್ತು. ಆದರೆ ಭಾರತ ತಂಡವನ್ನು 121 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಅಗ್ರ ಕ್ರಮಾಂಕ ಸಂಪೂರ್ಣ ವಿಫಲವಾಯಿತು. ರೋಹಿತ್ ಶರ್ಮಾ (11), ಶುಭ್‌ಮನ್ ಗಿಲ್ (1), ವಿರಾಟ್ ಕೊಹ್ಲಿ (1), ಯಶಸ್ವಿ ಜೈಸ್ವಾಲ್ (5), ಮತ್ತು ಸರ್ಫರಾಜ್ ಖಾನ್ (1) ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದಾದ ಬಳಿಕ ಪಂತ್ ಆರನೇ ವಿಕೆಟ್‌ಗೆ ರವೀಂದ್ರ ಜಡೇಜಾ ಜೊತೆ 42 ರನ್‌ಗಳ ಜೊತೆಯಾಟ ನಡೆಸಿದರು. ಜಡೇಜಾ 6 ರನ್ ಗಳಿಸಿ ಔಟಾದರೆ, ಪಂತ್ 64 ರನ್ ಗಳಿಸಿ ಔಟಾದ ಬಳಿಕ ಭಾರತದ ಇನ್ನಿಂಗ್ಸ್ ಪತನಗೊಂಡಿತು.
ಭಾರತದ ಇನ್ನಿಂಗ್ಸ್ ಸಮಯದಲ್ಲಿ, ನ್ಯೂಜಿಲೆಂಡ್ ಸ್ಪಿನ್ನರ್ ಅಜಾಜ್ ಪಟೇಲ್ 22ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಪಂತ್ ಅವರನ್ನು ಔಟ್ ಮಾಡುವ ಅವಕಾಶವನ್ನು ಸೃಷ್ಟಿಸಿದರು. ಚೆಂಡು ಪಂತ್ ಅವರ ಪ್ಯಾಡ್‌ಗೆ ಬಡಿದು ವಿಕೆಟ್‌ಕೀಪರ್ ಟಾಮ್ ಬ್ಲಂಡೆಲ್ ಕ್ಯಾಚ್ ಹಿಡಿದರು. ಈ ವೇಳೆ ಔಟ್ ಗಾಗಿ ನ್ಯೂಜಿಲೆಂಡ್ ತಂಡವು ಬಲವಾಗಿ ಮನವಿ ಮಾಡಿತು. ಆದರೆ ಅಂಪೈರ್ ಪಂತ್ ನಾಟ್ ಔಟ್ ಎಂದು ಘೋಷಿಸಿದರು. ಇದಾದ ನಂತರ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ರಿವ್ಯೂ ತೆಗೆದುಕೊಂಡರು. ಥರ್ಡ್ ಅಂಪೈರ್ ಬಹಳ ಹೊತ್ತು ತಪಾಸಣೆ ನಡೆಸಿದ ಬಳಿಕ ಮೈದಾನದ ಅಂಪೈರ್ ಅವರಿಗೆ ಔಟ್ ನೀಡುವಂತೆ ಸೂಚಿಸಿದರು. ಈ ನಿರ್ಧಾರದಿಂದ ಪಂತ್ ಸೇರಿದಂತೆ ಭಾರತೀಯ ಅಭಿಮಾನಿಗಳು ಅಚ್ಚರಿಗೊಂಡರು.
ಈ ನಿರ್ಧಾರದಿಂದ ಭಾರತ ತಂಡವಷ್ಟೇ ಅಲ್ಲ, ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದು Xನಲ್ಲಿ ಪೋಸ್ಟ್ ಮಾಡಿದ್ದಾರೆ. ವಿವಾದ! ಪಂತ್ ಚೆಂಡನ್ನು ಬ್ಯಾಟ್‌ನಿಂದ ಹೊಡೆದನೋ ಇಲ್ಲವೋ? UltraEdge ಪಂತ್ ಅವರ ಬ್ಯಾಟ್ ಮತ್ತು ಪ್ಯಾಡ್‌ನಿಂದ ಸ್ಪೈಕ್‌ಗಳನ್ನು ತೋರಿಸಿತು. ಇದು ಗೊಂದಲಕ್ಕೆ ಕಾರಣವಾಯಿತು. ಈ ರೀತಿಯ ಪ್ರಕರಣದಲ್ಲಿ ಹಾಟ್‌ಸ್ಪಾಟ್‌ಗಳು ಏಕೆ ಅಗತ್ಯವಿಲ್ಲ ಎಂದು ಡಿವಿಲಿಯರ್ಸ್ ಪ್ರಶ್ನಿಸಿದ್ದಾರೆ.
Advertisement