ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಎಡಗೈ ಬ್ಯಾಟ್ಸ್ ಮನ್ ತಿಲಕ್ ವರ್ಮಾ ಅವರಿಗೆ ಭಾರತದ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಅವಕಾಶ ನೀಡಿದಾಗ ಅದನ್ನು ನಿರಾಸೆಗೊಳಿಸಲಿಲ್ಲ.
ಸೌತ್ ಆಫ್ರಿಕಾ ವೇಗಿಗಳನ್ನು ಮನಸೋ ಇಚ್ಛೆ ದಂಡಿಸಿ, 51 ಎಸೆತದಲ್ಲಿ ಶತಕ ಪೂರೈಸಿದ ತಿಲಕ್, 56 ಎಸೆತದಲ್ಲಿ 8 ಬೌಂಡರಿ, 7ಸಿಕರ್‌ಗಳೊಂದಿಗೆ 107 ರನ್ ಗಳಿಸಿ ಔಟಾಗದೆ ಉಳಿದರು. ಈ ಮೂಲಕ ನಾಯಕನಿಗೆ ನೀಡಿದ ಮಾತನ್ನು ಉಳಿಸಿಕೊಂಡು, ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಹರಿಣಿಗಳ ವಿರುದ್ಧ 11 ರನ್ ಗಳಿಂದ ಗೆದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಿಲಕ್ ವರ್ಮಾ, ತಾನು ಬ್ಯಾಟಿಂಗ್ ಮಾಡುವುದನ್ನು ತ್ಯಾಗ ಮಾಡಿ ನನ್ನಗೆ ಮೂರನೇ ಕ್ರಮಾಂಕದಲ್ಲಿ ಆಟವಾಡಲು ನಾಯಕ ಸೂರ್ಯ ಕುಮಾರ್ ಯಾದವ್ ಅವಕಾಶ ನೀಡಿದ್ದಾಗಿ ತಿಳಿಸಿದರು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತೇನೆ. ಆದರೆ, ಕಳೆದ ಎರಡು ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಟವಾಡಿದ್ದೆ. ಕಳೆದ ರಾತ್ರಿ ನನ್ನ ಹೋಟೆಲ್ ಕೊಠಡಿಗೆ ಬಂದ ಸೂರ್ಯ ಕುಮಾರ್, ಮೂರರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೇಳಿದರು. ಇದೊಂದು ಉತ್ತಮ ಅವಕಾಶ ನೀಡಿದ್ದು, ಮೈದಾನದಲ್ಲಿ ತನ್ನ ಸಾಮರ್ಥ್ಯ ತೋರಿಸುವುದಾಗಿ ಅವರಿಗೆ ಹೇಳಿದ್ದಾಗಿ ವರ್ಮಾ ತಿಳಿಸಿದರು.
"ನಾವು ಸೋತಾಗಲೂ ತಂಡವು ನಮಗೆ ಬೆಂಬಲ ನೀಡಿತು. ಭಾರತದ ಕ್ರಿಕೆಟ್ ಬ್ರ್ಯಾಂಡ್ ನಂತೆ ಆಡುವಂತೆ ನಾಯಕ ಹಾಗೂ ತಂಡದ ಮ್ಯಾನೇಜ್ ಮೆಂಟ್ ವಿವಿಎಸ್ ಲಕ್ಷ್ಣಣ್ ಹೇಳಿದ್ದರು. ವಿಕೆಟ್ ಹೋದರೂ ಬಿಂದಾಸ್ ಆಗಿ ಆಡಿ ಎಂದಿದ್ದರು. ಪದೇ ಪದೇ ಬೆರಳಿನ ಗಾಯದಿಂದಾಗಿ ಜಿಂಬಾಬ್ವೆ ಹಾಗೂ ಶ್ರೀಲಂಕಾ ವಿರುದ್ಧದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಆದರೆ, ನನ್ನ ಸಮಯ ಬಂದಾಗ ಯಾವಾಗಲೂ ಉತ್ತಮ ಸ್ಕೋರ್ ಮಾಡಬೇಕೆಂಬುದು ನನಗೆ ತಿಳಿದಿದೆ ಎಂದರು.
ಎರಡು ಸರಣಿ ಕೈ ತಪ್ಪಿದ್ದರಿಂದ ತುಂಬಾ ನೋವಾಗಿತ್ತು. ಆದರೆ, ತಾಳ್ಮೆಯಿಂದ ಕಾಯ್ದು, ಶ್ರಮಪಟ್ಟೆ. ನನ್ನ ಸಮಯ ಬರುತ್ತದೆ. ಆ ಸೂಕ್ತ ಸಂದರ್ಭ ಬಂದಾಗ ಉತ್ತಮ ರನ್ ಗಳಿಸುತ್ತೇನೆ ಎಂಬುದು ಗೊತಿತ್ತು. ಅದಕ್ಕಾಗಿ ಕಾಯುತ್ತಿದೆ. ಆದರೆ ದುರಾದೃಷ್ಟವಕಾಶ ಕಳೆದ ಪಂದ್ಯದಲ್ಲಿ ಅದು ಆಗಲಿಲ್ಲ. ಆದರೆ, ನಾಯಕ ಹಾಗೂ ಮ್ಯಾನೇಜ್ ಮೆಂಟ್ ನೀಡಿದ ಅಪಾರ ಪ್ರೋತ್ಸಾಹದಿಂದ ಈಗ ಫಲಿತಾಂಶ ಬಂದಿದೆ ಎಂದು ತಿಲಕ್ ವರ್ಮಾ ಹೇಳಿದರು.
Advertisement