ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದು ಭಾರತ 135 ರನ್ ಗಳ ಬೃಹತ್ ಮೊತ್ತದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆಫ್ರಿಕಾದ ಬೌಲರ್‌ಗಳನ್ನು ಸದೆಬಡಿಯಿತು. ಭಾರತೀಯ ಇನ್ನಿಂಗ್ಸ್‌ನ ವೇಳೆ, ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಹೊಡೆದ ಸಿಕ್ಸರ್‌ನಿಂದ ಕ್ರೀಡಾಂಗಣದಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ಗಂಭೀರವಾಗಿ ಗಾಯಗೊಂಡರು. ಆಕೆ ನೋವಿನಿಂದ ಅತ್ತಿದ್ದರು. ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಂಜು ಕಳೆದೆರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದರೂ ಕೊನೆಯ ಪಂದ್ಯದಲ್ಲಿ ಮತ್ತೊಮ್ಮೆ ತಿರುಗೇಟು ನೀಡಿದರು.
ಭಾರತೀಯ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಟ್ರಿಸ್ಟಾನ್ ಸ್ಟಬ್ಸ್ ವಿರುದ್ಧ ಸತತ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು. ಆದರೆ, ಈ ವೇಳೆ ಎರಡನೇ ಸಿಕ್ಸರ್ ಸೆಕ್ಯುರಿಟಿ ಗಾರ್ಡ್ ದೇಹಕ್ಕೆ ಬಡಿದು ಮಹಿಳಾ ಅಭಿಮಾನಿಯ ಮುಖಕ್ಕೆ ಬಡಿದಿದ್ದು ತೀವ್ರ ನೋವು ತಂದಿದೆ. ಬಳಿಕ ಆಕೆ ನೋವಿನಿಂದ ಅಳುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆಕೆಯ ನೋವನ್ನು ಕಂಡು ಮರುಗಿದ ಸ್ಯಾಮ್ಸನ್ ಕ್ಷಮೆಯನ್ನೂ ಕೇಳಿದ್ದಾರೆ.
ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಪರಿಣಾಮ 4 ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 135 ರನ್ ಗಳ ಜಯ ಗಳಿಸಿದ್ದು, 3-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತು.
Advertisement