BGT 2025: 1967ರ ಬಳಿಕ ವಿದೇಶಿ ನೆಲದಲ್ಲಿ ಭಾರತ ತಂಡ ಅತಿದೊಡ್ಡ ಚೇತರಿಕೆ; ಇತಿಹಾಸ ಇಲ್ಲಿದೆ!

1967ರ ಬಳಿಕ ವಿದೇಶಿ ನೆಲದಲ್ಲಿ ಆಡಿದ ಟೆಸ್ಟ್ ಪಂದ್ಯವೊಂದರಲ್ಲಿ ಮೊದಲ ಇನ್ನಿಂಗ್ಸ್ ಗಿಂತ 2ನೇ ಇನ್ನಿಂಗ್ಸ್ ನಲ್ಲಿ ಗರಿಷ್ಠ ರನ್ ಪೇರಿಸಿದ ಪಂದ್ಯಗಳ ಪಟ್ಟಿಯಲ್ಲಿ ಪರ್ತ್ ಟೆಸ್ಟ್ ಪಂದ್ಯ 2ನೇ ಸ್ಥಾನದಲ್ಲಿದೆ.
Highest improvement from 1st inns to 2nd for India in away Tests
ಭಾರತ ಕ್ರಿಕೆಟ್ ತಂಡ
Updated on

ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮೊದಲ ಇನ್ನಿಂಗ್ಸ್ ನ ನಿರಾಶೆಯ ಹೊರತಾಗಿಯೂ 2ನೇ ಇನ್ನಿಂಗ್ಸ್ ನಲ್ಲಿ ಗರಿಷ್ಠ ರನ್ ಗಳಿಸುವ ಮೂಲಕ ಭಾರತ ತಂಡ ಆಸಿಸ್ ನೆಲದಲ್ಲಿ ಇತಿಹಾಸ ಬರೆದಿದೆ.

ಹೌದು.. 1967ರ ಬಳಿಕ ವಿದೇಶಿ ನೆಲದಲ್ಲಿ ಆಡಿದ ಟೆಸ್ಟ್ ಪಂದ್ಯವೊಂದರಲ್ಲಿ ಮೊದಲ ಇನ್ನಿಂಗ್ಸ್ ಗಿಂತ 2ನೇ ಇನ್ನಿಂಗ್ಸ್ ನಲ್ಲಿ ಗರಿಷ್ಠ ರನ್ ಪೇರಿಸಿದ ಪಂದ್ಯಗಳ ಪಟ್ಟಿಯಲ್ಲಿ ಪರ್ತ್ ಟೆಸ್ಟ್ ಪಂದ್ಯ 2ನೇ ಸ್ಥಾನದಲ್ಲಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 150ರನ್ ಗಳಿಗೆ ಆಲೌಟ್ ಆಗಿದ್ದ ಭಾರತ 2ನೇ ಇನ್ನಿಂಗ್ಸ್ ಫೀನಿಕ್ಸ್ ನಂತೆ ಎದ್ದು ನಿಂತು ಬರೊಬ್ಬರಿ 487 ರನ್ ಪೇರಿಸಿತು. ಆ ಮೂಲಕ ಮೊದಲ ಇನ್ನಿಂಗ್ಸ್ ಗಿಂತ 337 ರನ್ ಹೆಚ್ಚುವರಿ ರನ್ ಸಿಡಿಸಿತು.

Highest improvement from 1st inns to 2nd for India in away Tests
BGT 2025: 3ನೇ ದಿನದಾಟ ಅಂತ್ಯ; ಆಸ್ಟ್ರೇಲಿಯಾಗೆ ಮರ್ಮಾಘಾತ, ಗೆಲುವಿನತ್ತ ಭಾರತ ದಾಪುಗಾಲು!

ಇದು 1967ರ ಬಳಿಕ ವಿದೇಶಿ ನೆಲದಲ್ಲಿ ಭಾರತ ತಂಡ ಕಂಡ ಅತೀ ದೊಡ್ಡ ಚೇತರಿಕೆಯಾಗಿದೆ. 1967ರಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಹೆಡಿಂಗ್ಲೆಯಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 164ರನ್ ಗೆ ಆಲೌಟ್ ಆಗಿತ್ತು. ಬಳಿಕ 2ನೇ ಇನ್ನಿಂಗ್ಸ್ ನಲ್ಲಿ 510ರನ್ ಗಳಿಸಿತ್ತು.

ಆ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ಗಿಂತ 346 ರನ್ ಹೆಚ್ಚುವರಿ ರನ್ ಗಳಿಸಿತ್ತು. ಇದು ಭಾರತ ಕ್ರಿಕೆಟ್ ತಂಡದ ಇತಿಹಾಸದಲ್ಲಿ ವಿದೇಶಿ ನೆಲದಲ್ಲಿ ಕಂಡ ಅತೀ ದೊಡ್ಡ ಚೇತರಿಕೆಯಾಗಿದೆ. ಇದಾದ ಬಳಿಕ ಪರ್ತ್ ಪಂದ್ಯದಲ್ಲಿ ಭಾರತ 2ನೇ ಅತೀ ದೊಡ್ಡ ಚೇತರಿಕೆ ಕಂಡಿದೆ.

ಉಳಿದಂತೆ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ 3ನೇ ಸ್ಥಾನದಲ್ಲಿದ್ದು, 2006ರಲ್ಲಿ ಸೆಂಟ್ ಜಾನ್ಸ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ 5ನೇ ಸ್ಥಾನದಲ್ಲಿದೆ.

Highest improvement from 1st inns to 2nd for India in away Tests

  • 346 - 164 & 510 - vs ENG, Headingley, 1967

  • 337 - 150 & 487/6d vs AUS, Perth (Optus), 2024

  • 323 - 136 & 459 - vs SA, Centurion, 2010

  • 294 - 175 & 469/7 - vs WI, Port of Spain, 1983

  • 280 - 241 & 521/6d - vs WI, St. John’s, 2006

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com