ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ, ತಮ್ಮ ಅಮೋಘ ಬ್ಯಾಟಿಂಗ್ ಮೂಲಕ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಮತ್ತೆರಡು ದಾಖಲೆಗಳನ್ನು ಹಿಂದಿಕ್ಕಿದ್ದಾರೆ.
ಪರ್ತ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ ಅಜೇಯ 100 ಗಳಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 30ನೇ ಶತಕ ಮತ್ತು ಒಟ್ಟಾರೆ 80ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದರು.
ಅಂತೆಯೇ ಇದು ಆಸ್ಟ್ರೇಲಿಯಾದಲ್ಲಿ ಕೊಹ್ಲಿ ಎಲ್ಲ ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್ ಗಳಲ್ಲಿ 10ನೇ ಶತಕವಾಗಿದೆ.
ಈ ಶತಕದ ಮೂಲಕ ಕೊಹ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಮತ್ತೆ ಎರಡು ವಿಶ್ವ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.
ವಿದೇಶದಲ್ಲಿ ಗರಿಷ್ಠ ಟೆಸ್ಟ್ ಶತಕ
ಇನ್ನು ಕೊಹ್ಲಿ ಇಂದಿನ ಶತಕದ ಮೂಲಕ ವಿದೇಶದಲ್ಲಿ ಭಾರತದ ಪರ ಗರಿಷ್ಠ ಟೆಸ್ಟ್ ಶತಕ ಗಳಿಸಿದ ಜಂಟಿ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 6 ಶತಕಗಳ ಗಳ ಮೂಲಕ ಜಂಟಿ 2ನೇ ಸ್ಥಾನದಲ್ಲಿದ್ದರು. ಇದೀಗ ಕೊಹ್ಲಿ ವಿದೇಶದಲ್ಲಿ ತಮ್ಮ ಶತಕಗಳ ಸಂಖ್ಯೆಯನ್ನು 7ಕ್ಕೆ ಏರಿಕೆ ಮಾಡಿಕೊಂಡು ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ರ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಥ 7 ಶತಕ ಸಿಡಿಸಿರುವ ಗವಾಸ್ಕರ್ ರೊಂದಿಗೆ ಕೊಹ್ಲಿ ಜಂಟಿ ಅಗ್ರ ಸ್ಥಾನಿಯಾಗಿದ್ದಾರೆ. ಅಂತೆಯೇ ರಾಹುಲ್ ದ್ರಾವಿಡ್ ಇಂಗ್ಲೆಂಡ್ ನಲ್ಲಿ 6 ಮತ್ತು ಸಚಿನ್ ಆಸ್ಟ್ರೇಲಿಯಾದಲ್ಲಿ 6 ಶತಕ ಸಿಡಿಸಿದ್ದಾರೆ.
Most Test hundreds in an away country for India
7 - Sunil Gavaskar in West Indies
7 - Virat Kohli in Australia
6 - Rahul Dravid in England
6 - Sachin Tendulkar in Australia
ಆಸಿಸ್ ನೆಲದಲ್ಲಿ ಗರಿಷ್ಟ ಶತಕ, ಕೊಹ್ಲಿ ಜಂಟಿ 2ನೇ ಸ್ಥಾನ
ಅಂತೆಯೇ ಆಸ್ಟ್ರೇಲಿಯಾದಲ್ಲಿ ಮತ್ತೊಂದು ಶತಕದ ಮೂಲಕ ಕೊಹ್ಲಿ ಆಸಿಸ್ ನೆಲದಲ್ಲಿ ತಮ್ಮ ಶತಕಗಳ ಸಂಖ್ಯೆಯನ್ನು 7ಕ್ಕೆ ಏರಿಕೆ ಮಾಡಿಕೊಂಡಿದ್ದು, ಆ ಮೂಲಕ ಆಸಿಸ್ ನೆಲದಲ್ಲಿ ಗರಿಷ್ಠ ಶತಕ ಸಡಿಸಿರುವ ಜಂಟಿ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 9 ಶತಕ ಸಡಿಸಿರುವ ಇಂಗ್ಲೆಂಡ್ ಆಟಗಾರ ಜಾಕ್ ಹಾಬ್ಸ್ ಅಗ್ರ ಸ್ಥಾನದಲ್ಲಿದ್ದು, ತಲಾ 7 ಶತಕಗಳನ್ನು ಸಿಡಿಸಿರುವ ಇಂಗ್ಲೆಂಡ್ ಆಟಗಾರ ವ್ಯಾಲಿ ಹ್ಯಾಮಂಡ್ ಮತ್ತು ಭಾರತದ ವಿರಾಟ್ ಕೊಹ್ಲಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಭಾರತದ ಸಚಿನ್ 6 ಶತಕಗಳೊಂದಿಗೆ ಜಂಟಿ ಮೂರನೇ ಸ್ಥಾನದಲ್ಲಿದ್ದಾರೆ.
Visiting batters with most Test hundreds in Australia
9 - Jack Hobbs
7 - Wally Hammond
7 - Virat Kohli
6 - Herbert Sutcliffe
6 - Sachin Tendulkar
Advertisement