ಇಂಡಿಯನ್ ಪ್ರಿಮಿಯರ್ ಲೀಗ್ (IPL) 2025ರ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ರಿಷಬ್ ಪಂತ್ 27 ಕೋಟಿ ರೂಪಾಯಿಗೆ ಲಖನೌ ತಂಡದ ಪಾಲಾಗಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತದ ಖರೀದಿಯಾಗಿದೆ.
ಮತ್ತೊಂದೆಡೆ ನಿನ್ನೆ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್ ಸಹ ದಾಖಲೆಯ ಮೊತ್ತಕ್ಕೆ ಬೀಕರಿಯಾಗಿದ್ದಾರೆ. 26.75 ಕೋಟಿ ರೂ. ಮೊತ್ತಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಪಂಜಾಬ್ ತಂಡ ಖರೀದಿಸಿದೆ.
ಹರಾಜು ಪ್ರಕ್ರಿಯೆಯಲ್ಲಿ ಮೊದಲಿಗೆ ಟೀಂ ಇಂಡಿಯಾದ ವೇಗಿ ಅರ್ಷದೀಪ್ ಸಿಂಗ್ರನ್ನು ಪಂಜಾಬ್ ಕಿಂಗ್ಸ್ ತಂಡ 18 ಕೋಟಿ ರೂ ಗೆ ಖರೀದಿಸಿತು. ನಂತರ ಗುಜರಾತ್ ಟೈಟಾನ್ಸ್ ತಂಡ ಕಗಿಸೊ ರಬಾಡಾರನ್ನು 10.75 ಕೋಟಿ ರೂಪಾಯಿಗೆ ಖರೀದಿಸಿದ್ದರೆ, ಜೋಸ್ ಬಟ್ಲರ್ ಅವರಿಗೆ 15.75 ಕೋಟಿ ರೂಪಾಯಿಗೆ ಖರೀದಿಸಿದತು. ಇನ್ನು ಮಿಚೆಲ್ ಸ್ಟಾರ್ಕ್ 11.75 ಕೋಟಿಗೆ ದೆಹಲಿ ತಂಡದ ಪಾಲಾದರು. ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 10 ಕೋಟಿ ಕೊಟ್ಟು ಮೊಹಮ್ಮದ್ ಶಮಿಯನ್ನು ಖರೀದಿಸಿದೆ.
Advertisement