ಪರ್ತ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಭರ್ಜರಿ ಶತಕ ಸಿಡಿಸುವ ಭಾರತದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.
ಪರ್ತ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ 2ನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ 297 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 15 ಬೌಂಡರಿ ಸಹಿತ 161 ರನ್ ಸಿಡಿಸಿದರು.
ಆ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ 4ನೇ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಮೊದಲ ಸರಣಿಯಲ್ಲೇ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.
ಅಂತೆಯೇ ಆಸಿಸ್ ನೆಲದಲ್ಲಿ ಮೊದಲ ಸರಣಿಯಲ್ಲೇ ಶತಕ ಸಿಡಿಸಿದ 4ನೇ ಮತ್ತು ಭಾರತದ 3ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಇದಕ್ಕೂ ಮೊದಲು 1967-68ರಲ್ಲಿ ಭಾರತದ ಎಂ ಎಲ್ ಜೈಸಿಂಹ, 1977-78ರಲ್ಲಿ ಸುನಿಲ್ ಗವಾಸ್ಕರ್ ತಮ್ಮ ಮೊದಲ ಆಸಿಸ್ ಪ್ರವಾಸದಲ್ಲೇ ಶತಕ ಸಿಡಿಸಿದ್ದರು.
ಅಂತೆಯೇ ಭಾರತಕ್ಕಾಗಿ 23 ವರ್ಷಗಳನ್ನು ಪೂರೈಸುವ ಮೊದಲು ಹಾಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ 100 ರನ್ ಗಳಿಸಿದ ದಾಖಲೆಗೂ ಪಾತ್ರರಾದರು. ಜೈಸ್ವಾಲ್ ಇದೇ ಡಿಸೆಂಬರ್ 28 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದು, 2024 ರಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿರುವಂತೆಯೇ ಬ್ಯಾಟರ್ ಪ್ರಸ್ತುತ 3 ಶತಕ ಹೊಂದಿದ್ದಾರೆ.
ಅಂತೆಯೇ ಹಾಲಿ ಕ್ಯಾಲೆಂಡರ್ ವರ್ಷದಲ್ಲಿ ಅತೀ ಹೆಚ್ಚು ಟೆಸ್ಟ್ ಶತಕ ಗಳಿಸಿದ ಕ್ರಿಕೆಟಿಗರ ಪೈಕಿ ಜೈಸ್ವಾಲ್ ಜಂಟಿ 2ನೇ ಸ್ಥಾನದಲ್ಲಿದ್ದಾರೆ. 1971 ರಲ್ಲಿ ಸುನಿಲ್ ಗವಾಸ್ಕರ್ (4), 1993 ರಲ್ಲಿ ವಿನೋದ್ ಕಾಂಬ್ಳಿ (4), ಶತಕ ಸಿಡಿಸಿದ್ದರು.
1984 ರಲ್ಲಿ ರವಿಶಾಸ್ತ್ರಿ (3), ಮತ್ತು 1992 ರಲ್ಲಿ ಸಚಿನ್ ತೆಂಡೂಲ್ಕರ್ (3) ಶತಕ ಸಿಡಿಸಿದ್ದಾರೆ. 2014-15ರಲ್ಲಿ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಕೆಎಲ್ ರಾಹುಲ್ (110) ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ ಗಳಿಸಿದ ಕೊನೆಯ ಭಾರತೀಯ ಆರಂಭಿಕ ಆಟಗಾರರಾಗಿದ್ದರು.
Advertisement