1st T20I: ಬಾಂಗ್ಲಾದೇಶ ವಿರುದ್ಧ ಗೆಲುವಿನ ಮೂಲಕ ದಾಖಲೆ ಬರೆದ ಭಾರತ!

ಗ್ವಾಲಿಯರ್ ನ ನ್ಯೂ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 7 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತ್ತು.
Team India Recreates records
ಭಾರತಕ್ಕೆ ದಾಖಲೆ ಜಯ
Updated on

ಗ್ವಾಲಿಯರ್: ಬಾಂಗ್ಲಾದೇಶದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿದ ಭಾರತ ತಂಡ ಅಪರೂಪದ ದಾಖಲೆ ನಿರ್ಮಿಸಿದೆ.

ಹೌದು.. ನಿನ್ನೆ ಗ್ವಾಲಿಯರ್ ನ ನ್ಯೂ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 7 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತ್ತು. ಬಾಂಗ್ಲಾದೇಶ ನೀಡಿದ್ದ 128ರನ್ ಗುರಿಯನ್ನು ಭಾರತ ತಂಡ ಕೇವಲ 11.5 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು 132ರನ್ ಗಳಿಸಿ ಗುರಿ ತಲುಪಿತು.

ಈ ಗೆಲುವಿನ ಮೂಲಕ ಭಾರತ ತಂಡ 2 ದಾಖಲೆಗಳನ್ನು ನಿರ್ಮಿಸಿದ್ದು, ಟಿ20ಐನಲ್ಲಿ ತನ್ನ ಅಜೇಯ ಜೈತ್ರಯಾತ್ರೆಯನ್ನು ಮುಂದುವರೆಸಿದೆ.

Team India Recreates records
1st T20I: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 7 ವಿಕೆಟ್ ಭರ್ಜರಿ ಜಯ, ಸರಣಿಯಲ್ಲಿ 1-0 ಮುನ್ನಡೆ

ಟಿ20ಯಲ್ಲಿ ಸತತ ಜಯ

ಇನ್ನು ಹಾಲಿ ಟಿ20 ಕ್ರಿಕೆಟ್ ಋತುವಿನಲ್ಲೂ ಭಾರತ ಕ್ರಿಕೆಟ್ ತಂಡದ ಜೈತ್ರಯಾತ್ರೆ ಮುಂದುವರೆದಿದ್ದು, ಈ ವರ್ಷದ ಜುಲೈ ತಿಂಗಳಿನಿಂದ ಈ ವರೆಗೂ ಭಾರತ ಕ್ರಿಕೆಟ್ ತಂಡ ಸತತ 8 ಟಿ20ಪಂದ್ಯಗಳನ್ನು ಆಡಿದ್ದು, 8ರಲ್ಲೂ ಜಯ ಗಳಿಸಿದೆ. ಅಂತೆಯೇ ಈ ಹಿಂದೆ 2021ರ ನವೆಂಬರ್ ನಿಂದ 2022ರ ಫೆಬ್ರವರಿವರೆಗೂ ಭಾರತ ತಂಡ ಸತತ 12 ಟಿ20 ಪಂದ್ಯಗಳಲ್ಲಿ ಜಯಿಸಿತ್ತು. ಬಳಿಕ 2023ರ ಡಿಸೆಂಬರ್ ನಿಂದ 2024ರ ಜೂನ್ ವರೆಗೂ 12 ಪಂದ್ಯಗಳಲ್ಲಿ ಜಯಿಸಿತ್ತು. ಇದು ಭಾರತದ ಗರಿಷ್ಠ ಸತತ ಜಯದ ದಾಖಲೆಯಾಗಿದೆ.

Most successive T20I wins for India (including Super Over wins)

  • 12 wins bw Nov 2021 - Feb 2022

  • 12 wins bw Dec 2023 - Jun 2024

  • 9 wins bw Jan - Dec 2020

  • 8 wins bw Jul 2024 - present*

ಟಿ20ಯಲ್ಲಿ ಭಾರತಕ್ಕೆ ಅತೀ ದೊಡ್ಡ ಜಯ (ಎಸೆತಗಳ ಬಾಕಿ ಲೆಕ್ಕಾಚಾರದಲ್ಲಿ)

ಇನ್ನು ನಿನ್ನೆ ಭಾರತ ಕೇವಲ 11.5 ಓವರ್ ನಲ್ಲಿ 3 ವಿಕೆಟ್ ಕಳೆದುಕೊಂಡು ಇನ್ನೂ 49 ಎಸೆತಗಳು ಬಾಕಿ ಇರುವಂತೆಯೇ ಬಾಂಗ್ಲಾದೇಶ ವಿರುದ್ಧ ಜಯ ದಾಖಲಿಸಿತ್ತು. ಇದು ಎಸೆತಗಳ ಬಾಕಿ ಲೆಕ್ಕಾಚಾರದಲ್ಲಿ ಭಾರತ ತಂಡಕ್ಕೆ ದೊರೆತ ಅತೀ ದೊಡ್ಡ ಜಯ ಎನ್ನಲಾಗಿದೆ. ಈ ಹಿಂದೆ 2016ರಲ್ಲಿ ಭಾರತ ತಂಡ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ 41 ಎಸೆತಗಳು ಬಾಕಿ ಇರುವಂತೆ ಪಂದ್ಯ ಜಯಿಸಿತ್ತು.

India winning with most balls to spare in T20Is (Target: 100+)

  • 49 vs Ban Gwalior 2024 (Tar: 128)

  • 41 vs Zim Harare 2016 (Tar: 100)

  • 31 vs Afg Gros Islet 2010 (Tar: 116)

  • 30 vs Zim Harare 2010 (Tar: 112)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com