2nd T20I: ಪದಾರ್ಪಣೆ ಸರಣಿಯಲ್ಲೇ ಅಪರೂಪದ ದಾಖಲೆ ಬರೆದ Nitish Reddy, Elite ಗ್ರೂಪ್ ಸೇರ್ಪಡೆ

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ನಿತೀಶ್ ರೆಡ್ಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.
Nitish kumar Reddy
ಸ್ಫೋಟಕ ಅರ್ಧಶತಕ ಸಿಡಿಸಿದ ನಿತೀಶ್ ಕುಮಾರ್ ರೆಡ್ಡಿ
Updated on

ನವದೆಹಲಿ: ಬಾಂಗ್ಲಾದೇಶ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ಉದಯೋನ್ಮುಖ ಆಟಗಾರ ನಿತೀಶ್ ರೆಡ್ಡಿ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

ಹೌದು.. ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ನಿತೀಶ್ ರೆಡ್ಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಕೇವಲ 34 ಎಸೆತಗಳನ್ನು ಎದುರಿಸಿ 7 ಭರ್ಜರಿ ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ದಾಖಲೆಯ 217.65 ಸ್ಟ್ರೈಕ್ ರೇಟ್ ನಲ್ಲಿ 74 ರನ್ ಸಿಡಿಸಿದರು.

Nitish kumar Reddy
2nd T20I: ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ; ಸರಣಿ ಗೆಲುವಿನತ್ತ ಭಾರತ ಚಿತ್ತ; ಬಾಂಗ್ಲಾಗೆ 'ಮಾಡು ಇಲ್ಲವೇ ಮಡಿ' ಪಂದ್ಯ!

ಅಪರೂಪದ ದಾಖಲೆ

ಆ ಮೂಲಕ ಭಾರತ ತಂಡದ Nitish Reddy ಭಾರತದ ಪರ ಮೊದಲ ಅರ್ಧಶತಕ ಸಿಡಿಸಿದ 4ನೇ ಕಿರಿಯ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾದರು. ಇದಕ್ಕೂ ಮೊದಲು ಈ ಸಾಧನೆಯನ್ನು 2007ರಲ್ಲಿ ರೋಹಿತ್ ಶರ್ಮಾ ಸಾಧಿಸಿದ್ದರು. ಅವರು 2007ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ತಮ್ಮ ಚೊಚ್ಚಲ ಟಿ20 ಶತಕ ಸಿಡಿಸಿದ್ದರು.

ಅಂದು ಅವರ ವಯಸ್ಸು 20 ವರ್ಷ 143 ದಿನಗಳಾಗಿತ್ತು. ಆ ಬಳಿಕ ಈ ಪಟ್ಟಿಗೆ ತಿಲಕ್ ವರ್ಮಾ, ರಿಷಬ್ ಪಂತ್ ಸೇರ್ಪಡೆಯಾದರು. ಇದೀಗ ಇಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನಿತೀಶ್ ರೆಡ್ಡಿ ಸೇರ್ಪಡೆಯಾಗಿದ್ದಾರೆ.

ನಿತೀಶ್ ರೆಡ್ಡಿ ಅವರ ವಯಸ್ಸು ಇಂದಿಗೆ 21 ವರ್ಷ 136 ದಿನಗಳಾಗಿವೆ.

Youngest at the time of maiden T20I 50+ score (India)

  • 20y 143d Rohit Sharma 50* v SA Durban 2007

  • 20y 271d Tilak Varma 51 v WI Providence 2023

  • 21y 38d Rishabh Pant 58 v WI Chennai 2018

  • 21y 136d Nitish Reddy 50* v Ban Delhi 2024

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com