2nd Test: ಕಿವೀಸ್ ವಿರುದ್ಧ ಭರ್ಜರಿ ಬೌಲಿಂಗ್, ವಾಷಿಂಗ್ಟನ್ ಸುಂದರ್ ದಾಖಲೆ, ಅಶ್ವಿನ್ ರೆಕಾರ್ಡ್ ಸರಿಗಟ್ಟಿದ ಭಾರತದ ಯುವ ಸ್ಪಿನ್ನರ್!

2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡ 259 ರನ್ ಗೆ ಆಲೌಟ್ ಆಗಿದ್ದು, ಭಾರತದ ಯುವ ಬೌಲರ್ ವಾಷಿಂಗ್ಟನ್ ಸುಂದರ್ 7 ವಿಕೆಟ್ ಪಡೆದು ಕಿವೀಸ್ ಪತನಕ್ಕೆ ಕಾರಣರಾದರು.
Washington Sundar
ವಾಷಿಂಗ್ಟನ್ ಸುಂದರ್
Updated on

ಪುಣೆ: ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿರುವ ಭಾರತದ ಯುವ ಆಟಗಾರ ವಾಷಿಂಗ್ಟನ್ ಸುಂದರ್ ಹಲವು ದಾಖಲೆಗಳನ್ನು ನಿರ್ಮಾಣ ಮಾಡಿದ್ದಾರೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡ 259 ರನ್ ಗೆ ಆಲೌಟ್ ಆಗಿದ್ದು, ಭಾರತದ ಯುವ ಬೌಲರ್ ವಾಷಿಂಗ್ಟನ್ ಸುಂದರ್ 7 ವಿಕೆಟ್ ಪಡೆದು ಕಿವೀಸ್ ಪತನಕ್ಕೆ ಕಾರಣರಾದರು.

ಅಂತೆಯೇ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ವಾಷಿಂಗ್ಟನ್ ಸುಂದರ್ ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳನ್ನು ಮತ್ತೆ ಪರಿಷ್ಕರಿಸಿದ್ದಾರೆ.

Washington Sundar
2nd Test: Washington Sunder ಮಾರಕ ಬೌಲಿಂಗ್, ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ 259 ರನ್ ಗೆ ಆಲೌಟ್!

ಒಂದೇ ಇನ್ನಿಂಗ್ಸ್ ನಲ್ಲಿ ಬ್ಯಾಟರ್ ಗಳ ವಿಕೆಟ್

ಇಂದಿನ ಇನ್ನಿಂಗ್ಸ್ ನಲ್ಲಿ ವಾಷಿಂಗ್ಟನ್ ಸುಂದರ್ ಒಟ್ಟು 7 ವಿಕೆಟ್ ಪಡೆದಿದ್ದು, ಈ ಪೈಕಿ ನ್ಯೂಜಿಲೆಂಡ್ ನ 5 ಬ್ಯಾಟರ್ ಗಳು ಸೇರಿದ್ದಾರೆ. ಆ ಮೂಲಕ ವಾಷಿಂಗ್ಟನ್ ಸುಂದರ್ ಒಂದೇ ಇನ್ನಿಂಗ್ಸ್ ನಲ್ಲಿ ಅತೀ ಹೆಚ್ಚು ಬ್ಯಾಟರ್ ಗಳನ್ನು ಔಟ್ ಮಾಡಿದ ಅಪರೂಪದ ಪಟ್ಟಿಗೆ ಸೇರಿದ್ದಾರೆ. ಈ ಹಿಂದೆ ಈ ಸಾಧನೆಯನ್ನು ಜಸೂ ಭಾಯ್ ಪಟೇಲ್, ಬಾಪು ನಡ್ಕರ್ನಿ, ಅನಿಲ್ ಕುಂಬ್ಳೆ ಮತ್ತು ರವೀಂದ್ರ ಜಡೇಜಾ ಮಾಡಿದ್ದರು.

Dismissing most batters bowled in an inngs (India)

  • 5 Jasubhai Patel vs Aus Kanpur 1959

  • 5 Bapu Nadkarni vs Aus Brabourne 1960

  • 5 Anil Kumble vs SA Joburg 1992

  • 5 Ravindra Jadeja vs Aus Delhi 2023

  • 5 Washington Sundar vs NZ Pune 2024

ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶನ

ಇಂದಿನ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ಶ್ರೇಷ್ಠ ಪ್ರದರ್ಶನ ಮಾತ್ರವಲ್ಲದೇ ನ್ಯೂಜಿಲೆಂಡ್ ವಿರುದ್ಧ 2ನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಈ ಹಿಂದೆ 1965ರಲ್ಲಿ ಭಾರತದ ವೆಂಕಟರಾಘವನ್ 72ರನ್ ಗೆ 8 ವಿಕೆಟ್ ಕಬಳಿಸಿದ್ದರು. ಭಾರತದ ಪರ ನ್ಯೂಜಿಲೆಂಡ್ ವಿರುದ್ಧ ದಾಖಲಾಗಿರುವ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

Best figures for India vs NZ in Tests

  • 8/72 S Venkatraghavan Delhi 1965

  • 8/76 EAS Prasanna Auckland 1975

  • 7/59 R Ashwin Indore 2017

  • 7/59 Washington Sundar Pune 2024

Washington Sundar
2nd Test: ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ, ಭೋಜನ ವಿರಾಮದ ವೇಳೆ 92/2

ಎಲ್ಲ 10 ವಿಕೆಟ್ ಸ್ಪಿನ್ನರ್ ಗಳಿಗೆ

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಎಲ್ಲ 10 ವಿಕೆಟ್ ಗಳೂ ಸ್ಪಿನ್ನರ್ ಗಳೇ ಪಡೆದಿದ್ದು, ಇದು ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಇಂತಹ 6ನೇ ಪರಿಸ್ಥಿತಿಯಾಗಿದೆ. ಈ ಹಿಂದೆ ಇದೇ ವರ್ಷ ಧರ್ಮಶಾಲಾದಲ್ಲಿ ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೂ ಎಲ್ಲ 10 ವಿಕೆಟ್ ಗಳು ಸ್ಪಿನ್ನರ್ ಗಳಿಗೇ ದಕ್ಕಿತ್ತು.

Spinners taking all ten 1st inngs wickets on day 1 of a Test in India

  • Ind vs NZ Pune 2024

  • Ind vs Eng Dharamsala 2024

  • Ind vs Eng Chennai 1973

  • Ind vs Aus Chennai 1964

  • Ind vs Aus Kolkata 1956

  • Eng vs Ind Kanpur 1952

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com