ಎಂಎಸ್ ಧೋನಿ-ಯುವರಾಜ್ ಸಿಂಗ್-ಯೋಗರಾಜ್ ಸಿಂಗ್
ಎಂಎಸ್ ಧೋನಿ-ಯುವರಾಜ್ ಸಿಂಗ್-ಯೋಗರಾಜ್ ಸಿಂಗ್

'ಧೋನಿ ಈಗ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ', ನಾನು ಎಂದಿಗೂ ಕ್ಷಮಿಸುವುದಿಲ್ಲ: ಮತ್ತೆ MS Dhoni ವಿರುದ್ಧ ಯುವಿ ತಂದೆ ವಾಗ್ದಾಳಿ!

ಯೋಗರಾಜ್ ಸಿಂಗ್ ಈ ಹಿಂದೆ ಹಲವು ಬಾರಿ ಧೋನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರೂ, ಧೋನಿ ಈ ಆರೋಪಗಳಿಗೆ ಎಂದಿಗೂ ಪ್ರತಿಕ್ರಿಯಿಸಲಿಲ್ಲ.
Published on

ಮುಂಬೈ: ಭಾರತದ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಝೀ ಸ್ವಿಚ್‌ಗೆ ನೀಡಿದ ಸಂದರ್ಶನದಲ್ಲಿ ವೇಳೆ ಯೋಗರಾಜ್ ಸಿಂಗ್, ಧೋನಿ ಯುವರಾಜ್ ಅವರ ವೃತ್ತಿಜೀವನವನ್ನು ಹಾಳುಮಾಡಿದರು. ಧೋನಿಯ ಪ್ರಭಾವವಿಲ್ಲದಿದ್ದರೆ, ಯುವರಾಜ್ ಅವರ ವೃತ್ತಿಜೀವನವು ಇನ್ನೂ ನಾಲ್ಕೈದು ವರ್ಷಗಳವರೆಗೆ ಇರುತ್ತದೆ ಎಂದು ಹೇಳಿದರು.

ನಾನು ಧೋನಿಯನ್ನು ಎಂದಿಗೂ ಕ್ಷಮಿಸುವುದಿಲ್ಲ. ಈಗ ಧೋನಿ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಬೇಕು. ಧೋನಿ ಮಹಾನ್ ಕ್ರಿಕೆಟಿಗರಾಗಿರಬಹುದು. ಆದರೆ ಅವರು ನನ್ನ ಮಗನಿಗೆ ಮಾಡಿದ್ದನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ. ನಾನು ಜೀವನದಲ್ಲಿ ಎರಡು ಕೆಲಸಗಳನ್ನು ಮಾಡುವುದಿಲ್ಲ. ಮೊದಲನೆಯದಾಗಿ, ನನಗೆ ಅನ್ಯಾಯ ಮಾಡಿದವರನ್ನು ಕ್ಷಮಿಸಲ್ಲ. ಎರಡನೆಯದಾಗಿ, ನಾನು ಅವರನ್ನು ಭೇಟಿಯಾದಾಗ ಎಂದಿಗೂ ಅವರನ್ನು ತಬ್ಬಿಕೊಳ್ಳುವುದಿಲ್ಲ ಎಂದು ಹೇಳಿದರು.

ಎಂಎಸ್ ಧೋನಿ-ಯುವರಾಜ್ ಸಿಂಗ್-ಯೋಗರಾಜ್ ಸಿಂಗ್
Maharaja Trophy 2024: ಮೈಸೂರು ವಾರಿಯರ್ಸ್ ಚಾಂಪಿಯನ್, ಬೆಂಗಳೂರು ವಿರುದ್ಧ 45 ರನ್ ಭರ್ಜರಿ ಜಯ

ಯೋಗರಾಜ್ ಸಿಂಗ್ ಈ ಹಿಂದೆ ಹಲವು ಬಾರಿ ಧೋನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರೂ, ಧೋನಿ ಈ ಆರೋಪಗಳಿಗೆ ಎಂದಿಗೂ ಪ್ರತಿಕ್ರಿಯಿಸಲಿಲ್ಲ. ಯುವರಾಜ್ 2019ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಇನ್ನು ಧೋನಿ 2020 ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಯುವರಾಜ್ ಜೂನಿಯರ್ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಧೋನಿ ಇನ್ನೂ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com