'ಆಟ ಕಡಿಮೆ, ಮಾತು ಜಾಸ್ತಿ': Virat Kohli ನೋಡಿ ಕಲಿ ಎಂದು ಬಾಬರ್ ಅಜಂಗೆ ಯೂನಿಸ್ ಖಾನ್ ಬುದ್ಧಿಮಾತು!

ಬಾಬರ್ ಅಜಂ ಅವರ ಪ್ರಸ್ತುತ ಫಾರ್ಮ್ ಕೆಟ್ಟದಾಗಿದೆ. ಕಳೆದ 16 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಅವರು ಇನ್ನೂ ಅರ್ಧಶತಕ ಗಳಿಸಿಲ್ಲ. ಈ ಬಗ್ಗೆ, ಯೂನಿಸ್ ಬಾಬರ್ ಅಜಮ್ ಮೇಲೆ ಆಕ್ರೋಶ ಹೊರಹಾಕಿದರು.
ಬಾಬರ್ ಅಜಂ-ವಿರಾಟ್ ಕೊಹ್ಲಿ
ಬಾಬರ್ ಅಜಂ-ವಿರಾಟ್ ಕೊಹ್ಲಿ
Updated on

ಪಾಕಿಸ್ತಾನ ತಂಡದ ಮಾಜಿ ನಾಯಕ ಯೂನಿಸ್ ಖಾನ್ ಅವರು ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ 0-2 ಅಂತರದಲ್ಲಿ ಸೋಲು ಕಂಡಿತ್ತು. ಈ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನ ಕಳಪೆಯಾಗಿತ್ತು.

ಇದೀಗ ಪಾಕಿಸ್ತಾನ ತಂಡದ ಮಾಜಿ ನಾಯಕ ಯೂನಿಸ್ ಖಾನ್ ಎ ತಂಡದ ಆಟಗಾರರು ಮತ್ತು ಬಾಬರ್ ಅಜಮ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಯನ್ನು ನೋಡಿ ಕಲಿಯುವಂತೆ ಬಾಬರ್ ಗೆ ಯೂನಿಸ್ ಸಲಹೆ ನೀಡಿದ್ದಾರೆ.

ಬಾಬರ್ ಅಜಂ ಅವರ ಪ್ರಸ್ತುತ ಫಾರ್ಮ್ ಕೆಟ್ಟದಾಗಿದೆ. ಕಳೆದ 16 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಅವರು ಇನ್ನೂ ಅರ್ಧಶತಕ ಗಳಿಸಿಲ್ಲ. ಈ ಬಗ್ಗೆ, ಯೂನಿಸ್ ಬಾಬರ್ ಅಜಮ್ ಮೇಲೆ ಆಕ್ರೋಶ ಹೊರಹಾಕಿದರು. ಬಾಬರ್ ಮತ್ತು ಇತರ ಅಗ್ರ ಆಟಗಾರರು ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಫಲಿತಾಂಶವು ಎಲ್ಲರಿಗೂ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ವಾಸ್ತವವಾಗಿ, ಕರಾಚಿ ಪ್ರೀಮಿಯರ್ ಲೀಗ್‌ನ ಪತ್ರಿಕಾಗೋಷ್ಠಿಯಲ್ಲಿ ಯೂನಿಸ್ ಖಾನ್ ಬಾಬರ್ ಅಜಮ್ ಅವರನ್ನು ಟೀಕಿಸಿದರು. ಬಾಬರ್‌ಗೆ ತಂಡದ ನಾಯಕತ್ವ ನೀಡಿದಾಗ, ಆ ಸಮಯದಲ್ಲಿ ಅವರು ನಮ್ಮ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದರು ಎಂದು ಯೂನಿಸ್ ಹೇಳಿದರು. ಅವರನ್ನು ನಾಯಕನನ್ನಾಗಿ ಮಾಡುವ ನಿರ್ಧಾರ ಕೈಗೊಂಡಾಗ ನಾನೂ ಅಲ್ಲಿ ಹಾಜರಿದ್ದೆ, ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ, ಹೀಗಾಗಿ ಅವರೇ ಈ ಬಗ್ಗೆ ಯೋಚಿಸಬೇಕು ಎಂದರು.

ಬಾಬರ್ ಅಜಂ-ವಿರಾಟ್ ಕೊಹ್ಲಿ
ಐಸಿಸಿ ಟೆಸ್ಟ್ ಶ್ರೇಯಾಂಕ: 5ನೇ ಸ್ಥಾನಕ್ಕೆ ಏರಿದ ರೋಹಿತ್ ಶರ್ಮಾ

ಬಾಬರ್ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಾಧಿಸಿದ್ದಾರೆ. ಆದರೆ ಈಗ ಅವರು ಭವಿಷ್ಯದಲ್ಲಿ ಏನು ಸಾಧಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು. ದೇಶಕ್ಕಾಗಿ ಮತ್ತೊಮ್ಮೆ ಆಡುವ ಅವಕಾಶ ಸಿಗದಿರಬಹುದು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.

ವಿರಾಟ್ ಕೊಹ್ಲಿಯನ್ನು ನೋಡಿ, ಅವರೇ ನಾಯಕತ್ವವನ್ನು ತೊರೆದರು. ಈಗ ನೀವು ಅವರ ಬ್ಯಾಟಿಂಗ್ ಅನ್ನು ಸಂಪೂರ್ಣವಾಗಿ ವಿಭಿನ್ನ ಮಟ್ಟದಲ್ಲಿ ನೋಡುತ್ತೀರಿ ಮತ್ತು ಅವರು ನಿರಂತರವಾಗಿ ಹೊಸ ದಾಖಲೆಗಳನ್ನು ಮಾಡುತ್ತಿದ್ದಾರೆ ಎಂದು ಯೂನಿಸ್ ಹೇಳಿದರು. ಆಟಗಾರನಿಗೆ ಮೊದಲ ಆದ್ಯತೆ ಯಾವಾಗಲೂ ದೇಶಕ್ಕಾಗಿ ಆಡಬೇಕೇ ಹೊರತು ನಾಯಕತ್ವವಲ್ಲ ಎಂಬುದನ್ನು ಇದು ನಮಗೆ ತೋರಿಸುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com