ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಒಂದೂ ಎಸೆತ ಕಾಣದೇ ರದ್ದಾಗಿದೆ.
ಕಾನ್ಪುರದ ಗ್ರೀನ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಮಳೆಕಾಟದಿಂದ ರದ್ದಾಗಿದೆ.
ಶುಕ್ರವಾರ ರಾತ್ರಿಯಿಂದ ಶುರುವಾದ ಮಳೆಯು ಶನಿವಾರ ಮಧ್ಯಾಹ್ನದವರೆಗೂ ಮುಂದುವರೆದಿದ್ದು, ದರಿಂದ ಮೈದಾನವು ಸಂಪೂರ್ಣ ತೇವಾಂಶದಿಂದ ಕೂಡಿದ್ದು, ಹೀಗಾಗಿ 2ನೇ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.
ಇದಕ್ಕೂ ಮುನ್ನ ಮೊದಲ ದಿನದಾಟ ಕೂಡ ಮಳೆಯ ಕಾರಣ ತಡವಾಗಿ ಶುರುವಾಗಿತ್ತು. ಈ ವೇಳೆ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವು 35 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿತು. ಈ ವೇಳೆ ಕಾರ್ಮೋಡ ಆವರಿಸಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಇದೀಗ 2ನೇ ದಿನದಾಟ ಕೂಡ ಒಂದೂ ಎಸೆತ ಕಾಣದೇ ರದ್ದಾಗಿದ್ದು, ಇನ್ನುಳಿದಿರುವುದು ಕೇವಲ ಮೂರು ದಿನದಾಟಗಳು ಮಾತ್ರ. ಆದರೆ ಹವಾಮಾನ ಇಲಾಖೆಯ ವರದಿಯ ಪ್ರಕಾರ ಭಾನುವಾರ ಕೂಡ ಮಳೆ ಮುಂದವರೆಯಲಿದ್ದು, ಹೀಗಾಗಿ 3ನೇ ದಿನದಾಟ ಕೂಡ ಸಂಪೂರ್ಣವಾಗಿ ನಡೆಯುವುದು ಅನುಮಾನ ಎನ್ನಲಾಗಿದೆ.
ನಿನ್ನೆ ಮಳೆಯಿಂದಾಗಿ ಆಟ ನಿಂತಾಗ ಬಾಂಗ್ಲಾದೇಶ ತಂಡ 3 ವಿಕೆಟ್ ನಷ್ಟಕ್ಕೆ 107ರನ್ ಗಳಿಸಿತ್ತು.
Advertisement