2ನೇ ಟೆಸ್ಟ್: ಭಾರತ ವಿರುದ್ಧ 55 ರನ್‌ಗೆ ಆಲೌಟ್; ಕಳಪೆ ಇತಿಹಾಸ ಸೃಷ್ಟಿಸಿದ ದಕ್ಷಿಣ ಆಫ್ರಿಕಾ

ಸೆಂಚುರಿಯನ್ ನಲ್ಲಿ ಭಾರತದ ಬೌಲರ್ ಗಳ ಪ್ರದರ್ಶನ ನೀರಸವಾಗಿತ್ತು. ಡೀನ್ ಎಲ್ಗರ್ ದೊಡ್ಡ ಶತಕ ಬಾರಿಸಿದರೆ ಮಾರ್ಕೊ ಜಾನ್ಸೆನ್ ತಮ್ಮ ಅರ್ಧಶತಕದಿಂದ ರೋಹಿತ್ ಪಡೆಯ ಸ್ಥಿತಿಯನ್ನು ಹಾಳು ಮಾಡಿದರು.
ಭಾರತ ತಂಡ
ಭಾರತ ತಂಡ
Updated on

ಕೇಪ್ ಟೌನ್: ಸೆಂಚುರಿಯನ್ ನಲ್ಲಿ ಭಾರತದ ಬೌಲರ್ ಗಳ ಪ್ರದರ್ಶನ ನೀರಸವಾಗಿತ್ತು. ಡೀನ್ ಎಲ್ಗರ್ ದೊಡ್ಡ ಶತಕ ಬಾರಿಸಿದರೆ ಮಾರ್ಕೊ ಜಾನ್ಸೆನ್ ತಮ್ಮ ಅರ್ಧಶತಕದಿಂದ ರೋಹಿತ್ ಪಡೆಯ ಸ್ಥಿತಿಯನ್ನು ಹಾಳು ಮಾಡಿದರು. 

ಕೆಎಲ್ ರಾಹುಲ್ ಅವರ ಶತಕ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧಶತಕವನ್ನು ಹೊರತುಪಡಿಸಿ, ಭಾರತೀಯ ಆಟಗಾರರು ಕೈಬಿಟ್ಟಿದ್ದರು. ಆದರೆ ಕೇಪ್ ಟೌನ್‌ನಲ್ಲಿ ನಿಖರವಾಗಿ ವಿರುದ್ಧವಾಗಿ ಕಂಡುಬಂದಿದೆ. ಭಾರತ ತಂಡ ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್ ಅನ್ನು ಕೇವಲ 23.2 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಮಾಡಿದೆ.

ಮೊದಲ ಸ್ಪೆಲ್‌ನಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಅದ್ಭುತ ಬೌಲಿಂಗ್‌ ಮಾಡಿ 15 ರನ್‌ಗಳಿಗೆ ಆರು ವಿಕೆಟ್ ಪಡೆದರು. ಭಾರತವು ಮೊದಲ ದಿನದ ಊಟಕ್ಕೆ ಮೊದಲು ದಕ್ಷಿಣ ಆಫ್ರಿಕಾವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 55 ರನ್‌ಗಳಿಗೆ ಆಲೌಟ್ ಮಾಡಿತು. ಜಸ್ಪ್ರೀತ್ ಬುಮ್ರಾ 8 ಓವರ್‌ಗಳಲ್ಲಿ ಒಂದು ಮೇಡನ್ ಸಹಿತ 25 ರನ್ ನೀಡಿ ಎರಡು ವಿಕೆಟ್ ಪಡೆದರು. ಮುಖೇಶ್ ಕುಮಾರ್ 2.2 ಓವರ್ ಗಳಲ್ಲಿ ಎರಡು ಮೇಡನ್ ಸಹಿತ ಒಂದು ರನ್ ಬಿಟ್ಟುಕೊಡದೆ ಎರಡು ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ ಪರ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ತಲುಪಲು ಸಾಧ್ಯವಾಯಿತು. ಕೈಲ್ ವಿರೆನ್ 15 ರನ್ ಮತ್ತು ಡೇವಿಡ್ ಬೆಡಿಂಗ್ ಹ್ಯಾಮ್ 12 ರನ್ ಗಳಿಸಿದರು.

ಇದು ಭಾರತದ ವಿರುದ್ಧದ ಟೆಸ್ಟ್‌ನಲ್ಲಿ ಯಾವುದೇ ತಂಡ ಗಳಿಸಿದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಇದಕ್ಕೂ ಮೊದಲು 2021ರಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಕೇವಲ 62 ರನ್‌ಗಳಿಗೆ ಆಲೌಟ್ ಮಾಡಿತ್ತು. ಆದಾಗ್ಯೂ, ಇದು ದಕ್ಷಿಣ ಆಫ್ರಿಕಾದ ಕಡಿಮೆ ಸ್ಕೋರ್ ಅಲ್ಲ. ಇದಕ್ಕೂ ಮೊದಲು 30 ರನ್ ಗಳಿಸಿ ಔಟಾಗಿದ್ದರು. ನೋಡಿದರೆ ದಕ್ಷಿಣ ಆಫ್ರಿಕಾವನ್ನು ತನ್ನದೇ ನೆಲದಲ್ಲಿ 55 ರನ್ ಗಳಿಗೆ ಆಲೌಟ್ ಮಾಡಿದ್ದು ಭಾರತದ ಸಾಧನೆಯೂ ಕಡಿಮೆಯೇನಲ್ಲ.

ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಅತ್ಯಂತ ಕಡಿಮೆ ರನ್
55 ರನ್: ದಕ್ಷಿಣ ಆಫ್ರಿಕಾ, ಕೇಪ್ ಟೌನ್, 2024
62 ರನ್: ನ್ಯೂಜಿಲೆಂಡ್, ಮುಂಬೈ ವಾಂಖೆಡೆ ಸ್ಟೇಡಿಯಂ, 2021
79 ರನ್: ದಕ್ಷಿಣ ಆಫ್ರಿಕಾ, ನಾಗ್ಪುರ, 2015

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com