
ಐಪಿಎಲ್ 2025ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿ ಆರ್ ಸಿಬಿಗೆ ಆರಂಭಿಕ ಆಘಾತ ಎದುರಾಗಿದೆ. ವಿರಾಟ್ ಕೊಹ್ಲಿ 7 ರನ್ ಮತ್ತು ದೇವದತ್ ಪಡಿಕಲ್ 4 ರನ್ ಗಳಿಸಿ ಔಟಾಗಿದ್ದಾರೆ. ಪಿಲ್ ಸಾಲ್ಟ್ ಸಹ ಮೊದಲ ಓವರ್ ನಲ್ಲಿ ಔಟಾಗಬೇಕಿತ್ತು. ಸ್ಫೋಟಕ ಬ್ಯಾಟಿಂಗ್ ಗೆ ಮುಂದಾಗಿದ್ದ ಪಿಲ್ ಸಾಲ್ಟ್ ಐದನೇ ಎಸೆತವನ್ನು ಬೌಂಡರಿಗೆ ಹೊಡೆಯಲು ಮುಂದಾದರು. ಆದರೆ ಚೆಂಡು ಬ್ಯಾಟ್ ಗೆ ಟಚ್ ಆಗಿ ಕೀಪರ್ ಕಡೆ ಹೋಯಿತು. ಸುಲಭವಾಗಿ ಬಂದ ಕ್ಯಾಚ್ ಅನ್ನು ಜೋಸ್ ಬಟ್ಲರ್ ಕೈಚೆಲ್ಲಿದರು. ನಂತರ ಎರಡನೇ ಓವರ್ ನಲ್ಲಿ ಸಲ್ಮಾನ್ ಬೌಲಿಂಗ್ ವಿರಾಟ್ ಕೊಹ್ಲಿ ಔಟಾಗಿ ಪೆವಿಲಿಯನ್ ಸೇರಿದರು. ಇನ್ನು ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದ್ದ ಪಡಿಕಲ್ ಮೂರನೇ ಓವರ್ ಎರಡನೇ ಎಸೆತದಲ್ಲಿ ಬೌಲ್ಡ್ ಆದರು. ಇನ್ನು ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಪಿಲ್ ಸಾಲ್ಟ್ 14 ರನ್ ಗಳಿಸಿ ಔಟಾದರು. ಸದ್ಯ ಐದು ಓವರ್ ಮುಕ್ತಾಯಕ್ಕೆ ಆರ್ ಸಿಬಿ 3 ವಿಕೆಟ್ ಕಳೆದುಕೊಂಡು 35 ರನ್ ಬಾರಿಸಿದೆ.
Advertisement