
ಇಸ್ಲಾಮಾಬಾದ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿ ಕೈ ಸುಟ್ಟುಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಪದೇ ಪದೇ ಮುಖಭಂಗ ಎದುರಾಗುತ್ತಿದ್ದು, ಇದೀಗ ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲು PCBಗೆ ಜಾಗತಿಕವಾಗಿ ತೀವ್ರ ಮುಜುಗರ ತಂದಿದೆ.
ಹೌದು.. ಚಾಂಪಿಯನ್ಸ್ ಟ್ರೋಫಿ ಬಳಿಕ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡ ಬಲಿಷ್ಛ ತಂಡ ಕಳುಹಿಸಿದ್ದೇವೆ ಎಂದು ಬೀಗುತ್ತಿತ್ತು. ಆದರೆ ಅಲ್ಲಿ ನ್ಯೂಜಿಲೆಂಡ್ ನ ಸ್ಟಾರ್ ಆಟಗಾರರು ಅಂದರೆ ಕೇನ್ ವಿಲಿಯಮ್ಸ್, ಸ್ಯಾಂಥನರ್, ರಚಿನ್ ರವೀಂದ್ರ ಸೇರಿದಂತೆ ಬಹುತೇಕ ಸ್ಟಾರ್ ಆಟಗಾರರು ಐಪಿಎಲ್ ನಲ್ಲಿ ಬಿಸಿಯಾಗಿದ್ದು, ನ್ಯೂಜಿಲೆಂಡ್ ಎ ತಂಡ ಪಾಕಿಸ್ತಾನ ವಿರುದ್ಧದ ಸರಣಿ ಆಡುತ್ತಿದೆ.
ಇಂತಹ ತಂಡದ ಎದರೂ ಕೂಡ ಪಾಕಿಸ್ತಾನ ಗೆಲುವಿಗೆ ಪರದಾಡುತ್ತಿದ್ದು, ಈಗಾಗಲೇ 4-1 ಅಂತರದಲ್ಲಿ ಟಿ20 ಸರಣಿ ಸೋತಿರುವ ಪಾಕಿಸ್ತಾನ ಇದೀಗ 3 ಪಂದ್ಯಗಳ ಏಕದಿನ ಸರಣಿಯನ್ನೂ 2-0 ಅಂತರದಲ್ಲಿ ಸೋತು ಸುಣ್ಣವಾಗಿದೆ. ಈ ಹಿಂದೆ ಮೊದಲ ಏಕದಿನ ಪಂದ್ಯ ಸೋತಿದ್ದ ಪಾಕಿಸ್ತಾನ ನಿನ್ನೆ ನಡೆದ 2ನೇ ಪಂದ್ಯದಲ್ಲೂ ಬರೊಬ್ಬರಿ 84 ರನ್ ಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಸೋಲು ಕಂಡಿದೆ. ಏಪ್ರಿಲ್ 5ರಂದು ಅಂತಿಮ ಹಾಗೂ 3ನೇ ಏಕದಿನ ಪಂದ್ಯ ನಡೆಯಲಿದೆ.
ಪಿಸಿಬಿ ವಿರುದ್ಧ ಮಾಜಿ ಆಟಗಾರರ ವ್ಯಾಪಕ ಆಕ್ರೋಶ
ಇನ್ನು ಈಗಾಗಲೇ ಚಾಂಪಿಯನ್ಸ್ ಟ್ರೋಫಿಗೆ ತಂಡದ ಆಯ್ಕೆ ವಿಚಾರವಾಗಿ ಪಿಸಿಬಿ ವಿರುದ್ಧ ಆಕ್ರೋಶಗೊಂಡಿದ್ದ ಪಾಕಿಸ್ತಾನ ಮಾಜಿ ಆಟಗಾರರು ಇದೀಗ ನ್ಯೂಜಿಲೆಂಡ್ ಪ್ರವಾಸಕ್ಕೂ ಬಲಿಷ್ಟ ತಂಡ ಆಯ್ಕೆ ಮಾಡಿಲ್ಲ ಎಂದು ಪಿಸಿಬಿ ವಿರುದ್ಧ ಕೆಂಡಕಾರುತ್ತಿದ್ದಾರೆ.
ರಾಜಿನಾಮೆ ಕೊಟ್ಟು ತೊಲಗಿ.. ದೇಶದ ಕ್ರಿಕೆಟ್ ಭವಿಷ್ಯ ಹಾಳು ಮಾಡಬೇಡಿ
ಇದೇ ವಿಚಾರವಾಗಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಕೆಂಡಕಾರಿರುವ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್, 'ಪಾಕಿಸ್ತಾನ ತಂಡದ ಪ್ರಸ್ತುತ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗದಿದ್ದರೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ. ದೇಶದ ಕ್ರಿಕೆಟ್ ಭವಿಷ್ಯ ಹಾಳು ಮಾಡಬೇಡಿ. ಇದು ನಾಚಿಕೆಗೇಡಿನ ಸಂಗತಿ. ಪಿಸಿಬಿ ಅಧ್ಯಕ್ಷರು ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅವರು ರಾಜೀನಾಮೆ ನೀಡಿ ಹೊರಡಬೇಕು. ದೇಶ ಕ್ರಿಕೆಟ್ ಖ್ಯಾತಿಯನ್ನು ಹಾಳು ಮಾಡಬೇಡಿ. ನೀವು ಹಾಗೆ ಮಾಡಲು ಬಯಸದಿದ್ದರೆ, ಪ್ರಸ್ತುತ ತಂಡದ ಸ್ಥಿತಿಯನ್ನು ಸುಧಾರಿಸಿ" ಎಂದು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಕಮ್ರಾನ್ ಪಾಕಿಸ್ತಾನ ಬೌಲರ್‌ಗಳ ಅಶಿಸ್ತಿನ ಲೈನ್ ಮತ್ತು ಲೆಂತ್‌ಗಳನ್ನು ಬಹಿರಂಗಪಡಿಸಿದ್ದು, ಹೆಚ್ಚು ಅಗತ್ಯವಿರುವ ಕೂಲಂಕುಷ ಪರೀಕ್ಷೆಯ ಭಾಗವಾಗಿ ತಂಡಕ್ಕೆ ಹೊಸ ಮುಖಗಳನ್ನು ಸೇರಿಸುವ ಮೂಲಕ ಆಯಾ ವಿಭಾಗಗಳನ್ನು ಬಲಪಡಿಸುವ ಸಮಯ ಬಂದಿದೆ ಎಂದು ಅವರು ಸೂಚಿಸಿದರು.
"ಪಾಕಿಸ್ತಾನ ಬೌಲರ್‌ಗಳು ಅಂತಹ ಟರ್ಫ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ, ಅವರು ಇನ್ನೆಲ್ಲಿ ಪ್ರದರ್ಶನ ನೀಡುತ್ತಾರೆ? ಏಷ್ಯಾದಲ್ಲಿ, ಬೌಲರ್‌ಗಳ ಸ್ನೇಹಿ ಪಿಚ್ ಗಳೇ ಇಲ್ಲ. ಏನಾದರೂ ಲಭ್ಯವಿರುವ ಸ್ಥಳಗಳಲ್ಲೇ ಸಾಧಿಸಬೇಕು. ಅಲ್ಲಿಯೂ ಅವರು ಏನನ್ನೂ ಮಾಡುವುದಿಲ್ಲ. ಅವರು ನಮ್ಮ ವಿರುದ್ಧ ಅಂಗವಿಕಲ ಆಟಗಾರರನ್ನು ಆಡಿಸಬೇಕೇ? ಎಂದು ಯೋಚಿಸುತ್ತಿದ್ದಾರೆಯೇ? ಎಲ್ಲಿ ಬೌಲಿಂಗ್ ಮಾಡಬೇಕೆಂದು ನಮಗೆ ತಿಳಿದಿಲ್ಲ. ಇದರರ್ಥ ಬದಲಾವಣೆ ಇರಬೇಕು" ಎಂದು ಅವರು ಹೇಳಿದರು.
ಇದ್ದವರಲ್ಲಿ "ಫಹೀಮ್ ಅಶ್ರಫ್ ನಮ್ಮನ್ನು ಉಳಿಸಿದರು. ನಮಗೆ ನಸೀಮ್‌ನಿಂದ ರನ್‌ಗಳು ಬೇಕಾಗಿಲ್ಲ; ನಮಗೆ ಅವರಿಂದ ವಿಕೆಟ್‌ಗಳು ಬೇಕು. ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಯಾವುದೇ ಕಲ್ಪನೆ ಇಲ್ಲ. ಬಾಬರ್ ಔಟಾದಾಗ, ಬ್ಯಾಟಿಂಗ್ ಲೈನ್‌ಅಪ್ ಸಾಮರ್ಥ್ಯ ಬಹಿರಂಗವಾಯಿತು. ಕೋಚ್ ಹೊರತುಪಡಿಸಿ ಬೇರೆ ಯಾರೂ ಫಲಿತಾಂಶದ ಬಗ್ಗೆ ವಿಷಾದಿಸಲಿಲ್ಲ. ನೀವು ಪಾಕಿಸ್ತಾನದ ಕ್ರಿಕೆಟ್ ಅನ್ನು ನಾಶಪಡಿಸುತ್ತಿದ್ದೀರಿ" ಎಂದು ಕಮ್ರಾನ್ ಅಕ್ಮಲ್ ಹೇಳಿದರು.
Advertisement