IPL 2025: 5 ಬಾರಿ ಚಾಂಪಿಯನ್ ತಂಡದ ನಾಯಕ Rohit Sharma ರನ್ನೇ ಕಡೆಗಣಿಸಿದ Hardik Pandya?

ಮೊಣಕಾಲಿನ ಗಾಯದಿಂದಾಗಿ ಈ ಪಂದ್ಯವನ್ನು ಆಡದ ರೋಹಿತ್ ಶರ್ಮಾ, ಪಂದ್ಯದ ಸ್ಟ್ರಾಟೆಜಿಕ್ ಟೈಮ್ ಔಟ್ ಸಂದರ್ಭದಲ್ಲಿ ಮೈದಾನಕ್ಕೆ ಬಂದು ಆಟಗಾರರೊಂದಿಗೆ ಮಾತನಾಡುತ್ತಿದ್ದರು.
hardik pandya ignores Rohit sharma
ಹಾರ್ದಿಕ್ ಪಾಂಡ್ಯ-ರೋಹಿತ್ ಶರ್ಮಾ
Updated on

ಲಖನೌ: ಐಪಿಎಲ್ ಟೂರ್ನಿಯ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಾ (Hardik Pandya) ಮಾಜಿ ನಾಯಕ ಹಾಗೂ ತಂಡದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ (Rohit Sharma)ರನ್ನು ಕಡೆಗಣಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಐಪಿಎಲ್ 2025 ರ 16ನೇ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಟಾಸ್ ಸೋತ ಮುಂಬೈ ತಂಡದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿದರು.

ಟಾಸ್ ಸೋತರೂ ಭರ್ಜರಿ ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿತು.

hardik pandya ignores Rohit sharma
IPL 2025: Rohit Sharma ಗೆ ಗಾಯ, ಅಂಡರ್ 19 ವಿಶ್ವಕಪ್ ಫೈನಲ್ ಹೀರೋ Raj Angad Bawa ಗೆ ಖುಲಾಯಿಸಿದ ಅದೃಷ್ಟ!

ಲಕ್ನೋ ಭರ್ಜರಿ ಬ್ಯಾಟಿಂಗ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೋ ಸೂಪರ್ ಜೈಂಟ್ಸ್ ಈ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡರು. ಮಿಚೆಲ್ ಮಾರ್ಷ್ ಮತ್ತು ಐಡೆನ್ ಮಾರ್ಕ್ರಾಮ್ ಇಬ್ಬರೂ ಅರ್ಧಶತಕಗಳನ್ನು ಗಳಿಸಿ ತಮ್ಮ ತಂಡ ದೊಡ್ಡ ಮೊತ್ತವನ್ನು ತಲುಪಲು ಸಹಾಯ ಮಾಡಿದರು.

ರೋಹಿತ್ ಶರ್ಮಾ ಕಡೆಗಣಿಸಿದ್ರಾ ಹಾರ್ದಿಕ್ ಪಾಂಡ್ಯ

ಇನ್ನು ಈ ಪಂದ್ಯದಲ್ಲಿ ಮೈದಾನದಲ್ಲಿ ಒಂದು ಆಸಕ್ತಿದಾಯಕ ಘಟನೆ ನಡೆಯಿತು. ಮೊಣಕಾಲಿನ ಗಾಯದಿಂದಾಗಿ ಈ ಪಂದ್ಯವನ್ನು ಆಡದ ರೋಹಿತ್ ಶರ್ಮಾ, ಪಂದ್ಯದ ಸ್ಟ್ರಾಟೆಜಿಕ್ ಟೈಮ್ ಔಟ್ ಸಂದರ್ಭದಲ್ಲಿ ಮೈದಾನಕ್ಕೆ ಬಂದು ಆಟಗಾರರೊಂದಿಗೆ ಮಾತನಾಡುತ್ತಿದ್ದರು. ಹಾರ್ದಿಕ್ ಪಾಂಡ್ಯಾ ಸೇರಿದಂತೆ ಹಲವು ಆಟಗಾರರು ಕಾರ್ಯತಂತ್ರದ ಸಮಯದಲ್ಲಿ ಮುಂದಿನ ನಡೆ ಕುರಿತು ಚರ್ಚಿಸುತ್ತಿದ್ದರು.

ಆದರೆ ಸಮಯ ಮೀರುವ ಸಮಯದಲ್ಲಿ ರೋಹಿತ್ ಶರ್ಮಾ ಮಾತನಾಡುತ್ತಿದ್ದಾಗಲೇ ಹಾರ್ದಿಕ್ ಪಾಂಡ್ಯಾ ಹೊರಟು ಹೋಗುತ್ತಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಹಾರ್ದಿಕ್ ವಿರುದ್ಧ ಅಭಿಮಾನಿಗಳ ಅಸಮಾಧಾನ

ಇನ್ನು ಈ ಘಟನೆ ಅಭಿಮಾನಿಗಳ ಕಣ್ಣು ಕೆಂಪಾಗಿಸಿದ್ದು, ಹಾರ್ದಿಕ್ ಪಾಂಡ್ಯಾ ಉದ್ದೇಶ ಪೂರ್ವಕವಾಗಿಯೇ ರೋಹಿತ್ ಶರ್ಮಾರನ್ನು ಕಡೆಗಣಿಸಿದರು. ಪಾಂಡ್ಯ ರೋಹಿತ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತೆ ತೋರುತ್ತಿತ್ತು. ಇಬ್ಬರೂ ಮಾತನಾಡಲಿಲ್ಲ, ಅಥವಾ ಕಣ್ಣುಗಳನ್ನು ನೋಡಲಿಲ್ಲ ಎಂದು ಅಭಿಮಾನಿಗಳು ಹಾರ್ದಿಕ್ ವಿರುದ್ಧ ಕಿಡಿಕಾರಿದ್ದಾರೆ.

ಐಪಿಎಲ್ 2025 ಕ್ಕೂ ಮೊದಲು ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾದಾಗಿನಿಂದ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಸಂಭಾವ್ಯ ಘರ್ಷಣೆಯ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಬಾರಿ ಪ್ರಶಸ್ತಿ ತಂದು ಕೊಟ್ಟ ನಾಯಕರಾಗಿದ್ದು, ಈಗಲೂ ಅಭಿಮಾನಿಗಳು ಅವರನ್ನೇ ಮುಂಬೈ ತಂಡದ ನಿಜವಾದ ನಾಯಕ ಎಂದು ಹೇಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com