
ಲಖನೌ: ಲಖನೌ ನಲ್ಲಿ ನಡೆದ ಐಪಿಎಲ್ 2025 ರ ಟೂರ್ನಿಯ 16 ನೇ ಪಂದ್ಯದಲ್ಲಿ ಲಖನೌ ತಂಡದ ಬ್ಯಾಟರ್ ರಿಷಭ್ ಪಂತ್ ಕಳಪೆ ಪ್ರದರ್ಶನ ಮುಂದುವರೆದಿದೆ.
ಮುಂಬೈ ಇಂಡಿಯನ್ಸ್- ಲಖನೌ ಜೈಂಟ್ಸ್ ಪಂದ್ಯದಲ್ಲಿ ರಿಷಭ್ ಪಂತ್ ಎದುರಾಳಿ ತಂಡದ ವಿರುದ್ಧ 6 ಎಸೆತಗಳಲ್ಲಿ 2 ರನ್ ಗಳಿಸಿ ಔಟ್ ಆದರು. ಈ ಸೀಸನ್ ನಲ್ಲಿ ರಿಷಭ್ ಪಂತ್ ಅವರ ಸತತ ಎರಡನೇ ಒಂದಂಕಿ ಸ್ಕೋರ್ ಇದಾಗಿದ್ದು, ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.
ಇಲ್ಲಿಯವರೆಗೆ, ಅವರ ಸ್ಕೋರ್‌ಗಳು ಇಂತಿವೆ 0, 15, 2, ಮತ್ತು 2 - LSG ಮತ್ತು ಅವರ ಅಭಿಮಾನಿಗಳು ಸ್ಟಾರ್ ಕೀಪರ್-ಬ್ಯಾಟರ್ ನಿಂದ ಭಾರಿ ನಿರೀಕ್ಷೆ ಹೊಂದಿದ್ದರು.
ರಿಷಭ್ ಪಂತ್ ಪ್ರದರ್ಶನಕ್ಕೆ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಆದರೆ ಮೈದಾನದಲ್ಲಿ ಮಾತ್ರ ಪ್ರತಿಕ್ರಿಯೆಗಳು ಸ್ಪಷ್ಟವಾಗಿರಲಿಲ್ಲ. ಪಂತ್ ವಿಕೆಟ್ ಒಪ್ಪಿಸಿ ಹಿಂತಿರುಗುತ್ತಿದ್ದಂತೆ, ಕ್ಯಾಮೆರಾಗಳು LSG ಮಾಲೀಕ ಸಂಜೀವ್ ಗೋಯೆಂಕಾ ಅವರ ಭಾವನೆಯನ್ನು ತ್ವರಿತವಾಗಿ ಸೆರೆಹಿಡಿದವು. VIP ಬಾಕ್ಸ್‌ನಿಂದ ಅವರ ವಕ್ರ (ವ್ಯಂಗ್ಯ) ನಗು ಮಾತುಗಳಿಗಿಂತ ಹೆಚ್ಚಿನದನ್ನು ಹೇಳುತ್ತಿತ್ತು. ಇವ್ನ್ ಬದ್ಲಾಗಲ್ಲಾ ಗುರೂ ಎಂಬಂತೆ ಅವರ ನಗು ಇತ್ತು ಎಂದು ನೆಟ್ಟಿಗರು ವ್ಯಾಖ್ಯಾನಿಸುತ್ತಿದ್ದಾರೆ.
ಹಿಂದಿನ ಸೋಲುಗಳ ನಂತರ ಈಗಾಗಲೇ ಊಹಾಪೋಹಗಳು ಹರಿದಾಡುತ್ತಿರುವಾಗ, LSG ನಾಯಕ ಮತ್ತು ಫ್ರಾಂಚೈಸಿಯ ಉನ್ನತ ಮುಖ್ಯಸ್ಥನ ನಡುವೆ ಮತ್ತೊಂದು ಉದ್ವಿಗ್ನ ಸಂಭಾಷಣೆ ನಡೆಯಲಿದೆ ಎಂದು ನೆಟಿಜನ್‌ಗಳು ಹೇಳುತ್ತಿದ್ದಾರೆ.
Advertisement