
ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದಾಖಲೆಗಳ ಸರದಾರ. ಕೊಹ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಗುರುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ 2025ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸೆಣಸಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ ಮತ್ತಷ್ಟು ದಾಖಲೆಗಳನ್ನು ಮಾಡುವ ಹಾದಿಯಲ್ಲಿದ್ದಾರೆ.
ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ 2025ನೇ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಭಾರತೀಯ ಆಟಗಾರನಾಗುವುದು ಮಾತ್ರವಲ್ಲದೆ, ಲೀಗ್‌ನಲ್ಲಿ ಪ್ರಮುಖ ಬೌಂಡರಿ-ಹಿಟರ್ ಆಗುವ ನಿರೀಕ್ಷೆಯಿದೆ.
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನು ಗಳಿಸಲು ಕೇವಲ ಒಂದು ಅರ್ಧಶತಕದ ಅಗತ್ಯವಿದೆ. ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿದರೆ, 88 ಅರ್ಧಶತಕ ಗಳಿಸಿರುವ ಆರ್‌ಸಿಬಿ ತಂಡದ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ ಅವರನ್ನು ಮೀರಿಸಲಿದ್ದಾರೆ. ಐಪಿಎಲ್ 2025ರಲ್ಲಿ, ಕೊಹ್ಲಿ ಈಗಾಗಲೇ ಎರಡು ಅರ್ಧಶತಕಗಳನ್ನು ಗಳಿಸಿದ್ದಾರೆ.
ಇದರೊಂದಿಗೆ, ಕೊಹ್ಲಿ ಐಪಿಎಲ್‌ನಲ್ಲಿ 1000 ಬೌಂಡರಿಗಳನ್ನು ಗಳಿಸಿದ ಏಕೈಕ ಆಟಗಾರನಾಗಲು ಕೇವಲ ಎರಡು ಬೌಂಡರಿಗಳ ದೂರದಲ್ಲಿದ್ದಾರೆ. ಸದ್ಯ, ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 720 ಬೌಂಡರಿಗಳು ಮತ್ತು 298 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಅವರ ನಂತರ ಶಿಖರ್ ಧವನ್, ಡೇವಿಡ್ ವಾರ್ನರ್ ಮತ್ತು ರೋಹಿತ್ ಶರ್ಮಾ ಪಟ್ಟಿಯಲ್ಲಿದ್ದಾರೆ.
Advertisement