ಆಗಸ್ಟ್ ನಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶ ಪ್ರವಾಸ: ಏಕದಿನ, ಟಿ-20 ಸರಣಿ ವೇಳಾಪಟ್ಟಿ ಪ್ರಕಟ!

ಮೊದಲ ಏರಡು ಏಕದಿನ ಪಂದ್ಯಗಳು ಕ್ರಮವಾಗಿ ಆಗಸ್ಟ್ 17 ಮತ್ತು 20 ರಂದು ಮೀರ್ ಪುರದ ಶೇರ್- ಇ- ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ.
Rohit sharma and Bangla captain
ರೋಹಿತ್ ಶರ್ಮಾ, ಮತ್ತು ಬಾಂಗ್ಲಾದೇಶದ ನಾಯಕ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಆಗಸ್ಟ್ ನಲ್ಲಿ ಆರು ವೈಟ್ ಬಾಲ್ ಪಂದ್ಯಗಳಿಗಾಗಿ ಭಾರತ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳಲಿದೆ. ಬಾಂಗ್ಲಾದೇಶದಲ್ಲಿ ಇದೇ ಮೊದಲ ಬಾರಿಗೆ ಭಾರತ ಪ್ರಥಮ ದ್ವಿಪಕ್ಷೀಯ ಟಿ-20 ಹಾಗೂ ಮೂರು ಏಕದಿನ ಸರಣಿ ಆಡಲಿದೆ. ಇದು 2014 ರ ನಂತರ ಭಾರತ ಬಾಂಗ್ಲಾದೇಶದಲ್ಲಿ ಆಡುತ್ತಿರುವ ಮೊದಲ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿಯಾಗಿದೆ.

ಮೊದಲ ಏರಡು ಏಕದಿನ ಪಂದ್ಯಗಳು ಕ್ರಮವಾಗಿ ಆಗಸ್ಟ್ 17 ಮತ್ತು 20 ರಂದು ಮೀರ್ ಪುರದ ಶೇರ್- ಇ- ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೂರನೇ ಏಕದಿನ ಪಂದ್ಯ ಮತ್ತು ಮೊದಲ ಟಿ-20 ಪಂದ್ಯ ಛಟ್ಟೊಗ್ರಾಮ್ ನಲ್ಲಿ ಕ್ರಮವಾಗಿ ಆಗಸ್ಟ್23 ಮತ್ತು 26 ರಂದು ನಡೆಯಲಿದೆ.

ಈ ಪ್ರವಾಸ ಭಾರತಕ್ಕೆ ಏಷ್ಯಾಕಪ್ ಟಿ-20 ಚೂರ್ನಿಗೆ ಸಿದ್ಧತೆ ನಡೆಸಲು ನೆರವಾಗಲಿದೆ. ಏಷ್ಯಾಕಪ್ ಭಾರತದ ಆತಿಥ್ಯದಲ್ಲಿ ನಡೆಯಲಿದೆ.

Rohit sharma and Bangla captain
'ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದಾಗ...': 'ಇಂಪ್ಯಾಕ್ಟ್ ಪ್ಲೇಯರ್' ರೂಲ್ ಬಗ್ಗೆ ರಾಹುಲ್ ದ್ರಾವಿಡ್ ಹೇಳಿದ್ದು...

ಈ ಸರಣಿಯು ಅತ್ಯಂತ ಕುತೂಹಲಕಾರಿ ಹಾಗೂ ಅತ್ಯಂತ ನಿರೀಕ್ಷಿತ ಘಟನೆಗಳಲ್ಲಿ ಒಂದಾಗಿದೆ ಎಂದು ಬಿಸಿಬಿ ಚೀಪ್ ಎಕ್ಸಿಕ್ಯೂಟಿವ್ ನಿಜಾಂ ಉದ್ದೀನ್ ಚೌಧುರಿ ಅವರನ್ನು ಉಲ್ಲೇಖಿಸಿ ESPN CRICKINFO ವರದಿ ಮಾಡಿದೆ.

ಭಾರತ ಆಗಸ್ಟ್ 13 ರಂದು ಢಾಕಾಗೆ ಆಗಮಿಸಲಿದೆ. ಅವರು ಆಗಸ್ಟ್ 17 ಮತ್ತು 20 ರಂದು ಮೊದಲ ಎರಡು ಏಕದಿನ ಪಂದ್ಯಗಳನ್ನಾಡಲಿದ್ದಾರೆ. ಆಗಸ್ಟ್ 23 ಮತ್ತು 26 ರಂದು ಮೂರನೇ ODI ಮತ್ತು ಮೊದಲ T20I ಅನ್ನು ಛಟ್ಟೊಗ್ರಾಮ್ ನಲ್ಲಿ ಆಡಲಿದ್ದಾರೆ. ಆಗಸ್ಟ್ 29 ಮತ್ತು 31 ರಂದು ಕೊನೆಯ ಎರಡು ಟಿ-20 ಪಂದ್ಯ ಆಡಲು ಢಾಕಾಕ್ಕೆ ವಾಪಸ್ಸಾಗುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com