
ನವದೆಹಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅರ್ಧದಲ್ಲೇ ಮೈದಾನದಿಂದ ಹೊರಗೆ ಹೋದರು.
ರಾಜಸ್ಥಾನ ನೀಡಿದ 189 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ರಾಜಸ್ಥಾನ್ ಪರ ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಪಡೆದಿದ್ದರು. ಕೇವಲ 19 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್, 2 ಬೌಂಡರಿ ಹಾಗೂ 3 ಅಮೋಘವಾದ ಸಿಕ್ಸರ್ಗಳಿಂದ 31 ರನ್ಗಳನ್ನು ಗಳಿಸಿದ್ದರು.
ಆದರೆ ಸಂಜು ಬ್ಯಾಟಿಂಗ್ ಮಾಡುವಾಗ ಗಾಯಕ್ಕೆ ತುತ್ತಾಗಿದ್ದಾರೆ. ಪಕ್ಕೆಲುಬಿನ ಗಾಯದಿಂದ ಬ್ಯಾಟಿಂಗ್ ಮಾಡಲು ಆಗಿಲ್ಲ. ಹೀಗಾಗಿ ಬ್ಯಾಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು, ಅಂಪೈರ್ನಿಂದ ಮನವಿ ಪಡೆದು ಮೈದಾನದಿಂದ ಹೊರ ನಡೆದಿದ್ದಾರೆ.
ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಅವರೊಂದಿಗೆ 5.3 ಓವರ್‌ಗಳಲ್ಲಿ 61 ರನ್ ಗಳಿಸಿದಾಗ ಸ್ಯಾಮ್ಸನ್ ಗಾಯಗೊಂಡರು. ನಂತರ ಅವರ ಬದಲಿಗೆ ರಿಯಾನ್ ಪರಾಗ್ ಬಂದು ಬ್ಯಾಟಿಂಗ್ ಮುಂದುವರೆಸಿದರು.
Advertisement