IPL 2015: 'ವಿರಾಟ್ ಕೊಹ್ಲಿ ನೋಡಿ ಕಲಿಯಿರಿ'; ಸೋತ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ ಸಿಡಿಮಿಡಿ

ವಿಕೆಟ್ ಉತ್ತಮವಾಗಿತ್ತು ಎಂದು ನಾನು ಭಾವಿಸುತ್ತೇನೆ. ಆರಂಭಿಕರಾಗಿ ಬಂದ ನಮ್ಮ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭವನ್ನೇನೋ ನೀಡಿದರು. ಆದರೆ, ಅದನ್ನು ಮುಂದುವರಿಸಲಿಲ್ಲ. ಅದು T20 ಕ್ರಿಕೆಟ್‌ನಲ್ಲಿ ನಿರ್ಣಾಯಕವಾಗಿದೆ.
ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್
Updated on

ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮುಖ್ಯ ಕೋಚ್ ರಿಕಿ ಪಾಂಟಿಂಗ್ ನಿರಾಶೆ ವ್ಯಕ್ತಪಡಿಸಿದ್ದಾರೆ. ತಂಡ 157 ರನ್‌ಗಳಿಸಿತು. ಆದರೆ, ಪಿಚ್ ಅದಕ್ಕಿಂತ ಉತ್ತಮವಾಗಿತ್ತು ಎಂದಿದ್ದಾರೆ. ಪಂಜಾಬ್ ನೀಡಿದ 158 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅಜೇಯ 73 ರನ್ ಗಳಿಸಿದರೆ, ದೇವದತ್ ಪಡಿಕ್ಕಲ್ 61 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇನ್ನೂ ಏಳು ಎಸೆತಗಳು ಬಾಕಿ ಇರುವಾಗಲೇ ಈ ಗೆಲುವು ಸಾಧಿಸಿತು.

'ವಿಕೆಟ್ ಉತ್ತಮವಾಗಿತ್ತು ಎಂದು ನಾನು ಭಾವಿಸುತ್ತೇನೆ. ಆರಂಭಿಕರಾಗಿ ಬಂದ ನಮ್ಮ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭವನ್ನೇನೋ ನೀಡಿದರು. ಆದರೆ, ಅದನ್ನು ಮುಂದುವರಿಸಲಿಲ್ಲ. ಅದು T20 ಕ್ರಿಕೆಟ್‌ನಲ್ಲಿ ನಿರ್ಣಾಯಕವಾಗಿದೆ. ವಿಶೇಷವಾಗಿ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ರನ್ ಗಳಿಸಬೇಕಿರುತ್ತದೆ. ಅದುವೇ ವ್ಯತ್ಯಾಸವಾಯಿತು' ಎಂದು ಪಾಂಟಿಂಗ್ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೊಹ್ಲಿ ಅವರು ಆರಂಭವನ್ನು ಹೇಗೆ ಸದುಪಯೋಗಪಡಿಸಿಕೊಂಡರು ಎಂಬುದನ್ನು ತಿಳಿದುಕೊಳ್ಳಲು ಪಾಂಟಿಂಗ್ ತಮ್ಮ ತಂಡವನ್ನು ಒತ್ತಾಯಿಸಿದರು.

'ವಿರಾಟ್ ಇಂದು ಬ್ಯಾಟಿಂಗ್ ಮಾಡುವ ಮೂಲಕ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ದರು ಮತ್ತು ನಾವು ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಷ್ಟು ಉತ್ತಮವಾಗಿರಲಿಲ್ಲ. ಪವರ್ ಪ್ಲೇ ಅಂತ್ಯದ ವೇಳೆಗೆ ನಾವು 1 ವಿಕೆಟ್‌ಗೆ 62 ರನ್ ಗಳಿಸಿದ್ದೆವು. ಆದರೆ, ಅದು ಮುಂದುವರಿಯಲಿಲ್ಲ' ಎಂದರು.

ರಿಕಿ ಪಾಂಟಿಂಗ್
IPL 2025: PBKS ವಿರುದ್ಧ RCBಗೆ ದಾಖಲೆಯ ಜಯ, ಹೊರಗೆ ಸತತ 5ನೇ ಗೆಲುವು!

'ತಂಡವು 180ಕ್ಕಿಂತ ಹೆಚ್ಚಿನ ಸ್ಕೋರ್ ಮಾಡಬೇಕಿತ್ತು. ಮಧ್ಯಮ ಕ್ರಮಾಂಕವು ಚೆನ್ನಾಗಿ ಬ್ಯಾಟ್ ಮಾಡಿದ್ದರೆ 200ಕ್ಕೆ ಕೊಂಡೊಯ್ಯಬಹುದಿತ್ತು. ಆದರೆ, ನಾವು ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ. ಇದು ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಅಲ್ಲ' ಎಂದು ಹೇಳಿದರು.

ಆರ್‌ಸಿಬಿ ಸ್ಪಿನ್ನರ್‌ಗಳಾದ ಸುಯಾಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ಅವರನ್ನು ಶ್ಲಾಘಿಸಿದ ಪಾಂಟಿಂಗ್, ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ 17 ರಿಂದ 20 ಓವರ್‌ಗಳ ನಡುವೆ ಅದ್ಭುತ ಬೌಲಿಂಗ್ ಮಾಡಿದರು ಎಂದರು.

'ಅವರ ಸ್ಪಿನ್ನರ್‌ಗಳು ಚೆನ್ನಾಗಿ ಬೌಲಿಂಗ್ ಮಾಡಿದರು ಮತ್ತು ಕೊನೆಯಲ್ಲಿ ಅವರ ಡೆತ್ ಬೌಲಿಂಗ್ ಅಸಾಧಾರಣವಾಗಿತ್ತು. ಭುವಿ ಮತ್ತು ಹೇಜಲ್‌ವುಡ್ ಕೊನೆಯಲ್ಲಿ ಅವರು ಬೌಲ್ ಮಾಡಿದ ನಾಲ್ಕು ಓವರ್‌ಗಳಲ್ಲಿ ರನ್ ನೀಡಲಿಲ್ಲ. ಮೊದಲಿಗೆ ನಾವು 180ರ ಸಮೀಪಕ್ಕೆ ತಲುಪಬಹುದೆಂದು ಭಾವಿಸಿದ್ದೆವು. ಆದರೆ, ಅವರ ಡೆತ್ ಬೌಲಿಂಗ್ ತುಂಬಾ ಚೆನ್ನಾಗಿತ್ತು ಮತ್ತು ನಾವು 157 ರನ್ ಗಳಿಸಲು ಹೆಣಗಾಡಿದೆವು' ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com