IPL 2025: RCB vs RR ಪಂದ್ಯ; ಶಾಟ್ ನತ್ತ ಗಮನ ಕೇಂದ್ರೀಕರಿಸಲು RCB ಬ್ಯಾಟರ್ ಗಳಿಗೆ ರಜತ್ ಪಾಟಿದಾರ್ ತಾಕೀತು!

ಈ ಬಾರಿ RCB ಮಾತ್ರ ತವರಿನಲ್ಲಿ ಗೆಲುವು ಸಾಧಿಸದ ಏಕೈಕ ತಂಡವಾಗಿದೆ. ತವರಿನಾಚೆ ಐದು ಪಂದ್ಯಗಳನ್ನು ಗೆದ್ದರೂ ಬೆಂಗಳೂರಿನಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಸೋತಿದೆ.
 Rajat Patidar
ರಜತ್ ಪಾಟೀದಾರ್
Updated on

ಬೆಂಗಳೂರು: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಸೋತಿದ್ದು, ಅದರಿಂದ ಹೊರಬರಲು ಇಂದಿನ ಪಂದ್ಯ ಮಹತ್ವದ್ದಾಗಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ರಜತ್ ಪಾಟೀದರ್, ಅದನ್ನು ತ್ವರಿತವಾಗಿ ಮಾಡಬೇಕಾಗಿದೆ ಎಂದರು.

ಈ ಬಾರಿ RCB ಮಾತ್ರ ತವರಿನಲ್ಲಿ ಗೆಲುವು ಸಾಧಿಸದ ಏಕೈಕ ತಂಡವಾಗಿದೆ. ತವರಿನಾಚೆ ಐದು ಪಂದ್ಯಗಳನ್ನು ಗೆದ್ದರೂ ಬೆಂಗಳೂರಿನಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಸೋತಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಟಿಮ್ ಡೇವಿಡ್ ಅರ್ಧಶತಕ ಬಾರಿಸಿದ ಬ್ಯಾಟ್ಸ್ ಮನ್ ಗಳಾಗಿದ್ದಾರೆ.

ತವರಿನಲ್ಲಿ ಆರ್ ಸಿಬಿಯ ಟಾಪ್ ಸಿಕ್ಸ್ ಬ್ಯಾಟ್ಸ್ ಮನ್ ಗಳ ಸರಾಸರಿ ಕೇವಲ 13. 94 ಇದೆ. ಇದು ಬೇರೆ ತಂಡಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆಯಾಗಿದೆ. ಪವರ್‌ಪ್ಲೇಯಲ್ಲಿ ಸರಾಸರಿ ಪ್ರತಿ 12 ಬಾಲ್ ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದಾರೆ. ಬೇರೆ ಕಡೆ ಪ್ರತಿ 60 ಬಾಲ್ ಗಳಿಗೆ ಒಂದು ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ.

 Rajat Patidar
IPL 2025: ಬೆಂಗಳೂರಿನಲ್ಲಿ ಇಂದು RCB vs RR ಪಂದ್ಯ; ಉಭಯ ತಂಡಗಳ ಹೆಡ್ ಟು ಹೆಡ್ ದಾಖಲೆಗಳು!

ಶಾಟ್ ಆಯ್ಕೆ ವಿಚಾರ ಕುರಿತು ಮಾತನಾಡಿದ ಪಾಟೀದಾರ್, ಈ ಬಾರಿ ಬಾಲ್ ವೇಗ ಹಾಗೂ ಬೌನ್ಸ್ ಅನಿರೀಕ್ಷಿತವಾಗಿ ಬದಲಾಗುತ್ತಿದ್ದು, ಫಿಚ್ ಬೌಲರ್ ಗಳಿಗೆ ನೆರವಾಗುತ್ತಿದೆ. ಹಾಗಾಗಿ ಶಾಟ್ ನತ್ತ ಬ್ಯಾಟರ್ ಗಳು ಗಮನ ಹರಿಸಿದರೆ ಹೆಚ್ಚು ಅನುಕೂಲವಾಗಬಹುದು ಎಂದರು.

ಡೇವಿಡ್ ತವರಿನಲ್ಲಿ ಆಡಿದ ಪಂದ್ಯಗಳಲ್ಲಿ 32, 37, ಮತ್ತು ಅಜೇಯ 50 ರನ್ ಗಳೊಂದಿಗೆ 185.93 ರಲ್ಲಿ ಸ್ಟ್ರೈಕಿಂಗ್ ಹೊಂದಿದ್ದಾರೆ. ನಮ್ಮದು ಅತ್ಯುತ್ತಮ ತಂಡವಾಗಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಟಾಸ್ ಗೆಲುವು ರಾಜಸ್ಥಾನ ರಾಯಲ್ಸ್ ವಿರುದ್ಧದ ಗೆಲ್ಲಲು ನೆರವಾಗಬಹುದು ಆದರೆ. ಟಾಸ್ ನಿಮ್ಮ ನಿಯಂತ್ರಣದಲ್ಲಿಲ್ಲ ಎಂದು ಪಾಟೀದಾರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com