
ಲಂಡನ್: ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಿರ್ಣಾಯಕ ಘಟದತ್ತ ಸಾಗಿದ್ದು, 2ನೇ ದಿನದಾಟದ ಅಂತ್ಯದ ವೇಳೆಗೆ ಮೈದಾನದಲ್ಲಿ ಹಲವು ನಾಟಕೀಯ ಬೆಳವಣಿಗೆಗಳು ನಡೆದವು.
ಒಂದೆಡೆ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಮಹಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿ 247ರನ್ ಗೆ ಆಲೌಟ್ ಆದರೆ, ಇತ್ತ ಭಾರತ ಕೂಡ 75 ರನ್ ಗೆ 2 ವಿಕೆಟ್ ಕಳೆದುಕೊಂಡು ಅಲ್ಪ ಮುನ್ನಡೆ ಸಾಧಿಸಿದೆ. ಇದೇ ವೇಳೆ ಎರಡನೇ ದಿನ ಬೆನ್ ಡಕೆಟ್ (Ben Duckett) ಮತ್ತು ಆಕಾಶ್ ದೀಪ್ (Akash Deep) ನಡುವೆ ಅಚ್ಚರಿ ಘಟನೆಯೊಂದು ಘಟನೆ ನಡೆಯಿತು.
ಬೆನ್ ಡಕೆಟ್ ಅವರನ್ನು ಔಟ್ ಮಾಡಿದ ಬಳಿಕ ಆಕಾಶ್ ದೀಪ್, ಪೆವಿಲಿಯನ್‌ಗೆ ಮರಳುತ್ತಿದ್ದ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಅನ್ನು ಕೆಣಕಿದರು. ನಂತರ ಆಕಾಶ್ ದೀಪ್, ಡಕೆಟ್‌ಗೆ ಏನೋ ಹೇಳುತ್ತಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಬೌಂಡರಿ ಬಾರಿಸಿ ಇಲ್ಲಿ ನನ್ನ ಔಟ್ ಮಾಡಲಾರೆ ಎಂದಿದ್ದ ಡಕೆಟ್
ಈ ಘಟನೆಗೂ ಮೊದಲು ಕ್ರೀಸ್ ನಲ್ಲಿದ್ದ ಡಕೆಟ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರು. ಒಂದು ಹಂತದಲ್ಲಿ ಆಕಾಶ್ ದೀಪ್ ಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಡಕೆಟ್ ಇಲ್ಲಿ ನನ್ನ ಔಟ್ ಮಾಡಲು ಸಾಧ್ಯವಿಲ್ಲ (You cannot get me out in here) ಎಂದು ಗರ್ವದಿಂದ ಹೇಳಿದರು. ಇದಕ್ಕೆ ಆಗ ಉತ್ತರಿಸಿದ್ದ ಆಕಾಶ್ ದೀಪ್ ನಾನು ನಿಮಗೆ ಏನೂ ಹೇಳಲಿಲ್ಲ ಎಂದರು.
ಈ ವೇಳೆ ಕೊಂಚ ವಿಚಲಿತರಾದ ಆಕಾಶ್ ದೀಪ್ 38 ಎಸೆತಗಳಲ್ಲಿ 43 ರನ್ ಸಿಡಿಸಿದ್ದ ಡಕೆಟ್ ರನ್ನು ಔಟ್ ಮಾಡಿದರು. ಆಕಾಶ್ ದೀಪ್ ಎಸೆದ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಹೋಗಿ ಡಕೆಟ್ ಎಡವಟ್ಟು ಮಾಡಿಕೊಂಡರು. ಬ್ಯಾಟ್ ಅಂಚನ್ನು ಸವರಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ದ್ರುವ್ ಜುರೆಲ್ ಕೈ ಸೇರಿತ್ತು.. ಈ ವೇಳೆ ಡಕೆಟ್ ತೀವ್ರ ನಿರಾಶೆಯಿಂದ ತಲೆ ತಗ್ಗಿಸಿಕೊಂಡು ಬರುತ್ತಿದ್ದರು.
ಡಕೆಟ್ ಭುಜದ ಮೇಲೆ ಕೈಹಾಕಿದ ಆಕಾಶ್ ದೀಪ್
ಇನ್ನು ಈ ವೇಳೆ ಪೆವಿಲಿಯನ್ ನತ್ತ ಹೋಗುತ್ತಿದ್ದ ಡಕೆಟ್ ರ ಬಲಿ ಹೋದ ಆಕಾಶ್ ದೀಪ್ ಅವರ ಹೆಗಲ ಮೇಲೆ ಕೈ ಹಾಕಿ 'ಯಾಕಪ್ಪಾ ತಲೆ ತಗ್ಗಿಸಿದ್ದೀಯಾ' ಎಂಬರ್ಥದಲ್ಲಿ ನೋಡಿದರು. ಆ ಮೂಲಕ ಈ ವಿಕೆಟ್ ನಲ್ಲಿ ನನ್ನ ಔಟ್ ಮಾಡಲು ಸಾಧ್ಯವಿಲ್ಲ ಎಂದು ಗರ್ವದಿಂದ ಹೇಳಿದ್ದ ಡಕೆಟ್ ರ ಗರ್ವವನ್ನು ಆಕಾಶ್ ದೀಪ್ ಮುರಿದಿದ್ದರು.
Advertisement