India vs England: ಹಲವು ದಾಖಲೆ ಬರೆದ Anderson-Tendulkar Trophy 2025; ದಾಖಲಾದ ರನ್, ಶತಕ ಎಷ್ಟು ಗೊತ್ತಾ?

ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಸಮಬಲದೊಂದಿಗೆ ಟ್ರೋಫಿ ಹಂಚಿಕೊಂಡಿವೆ. ಅಂತೆಯೇ ಇದು ಭಾರತ ತಂಡವು ತವರಿನಿಂದ ಹೊರಗೆ ಟೆಸ್ಟ್ ಸರಣಿಯ 5ನೇ ಪಂದ್ಯವನ್ನು ಗೆದ್ದ ಮೊದಲ ನಿದರ್ಶನವಾಗಿದೆ.
Anderson-Tendulkar Trophy 2025 Creates Many records
ಇಂಗ್ಲೆಂಡ್ - ಭಾರತ ಟೆಸ್ಟ್ ಸರಣಿ ಸಮಬಲ
Updated on

ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ವಿರೋಚಿತ ಅಂತ್ಯಕಂಡಿದ್ದು, 2-2 ಅಂತರದಲ್ಲಿ ಸರಣಿಯಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ. ಅಂತೆಯೇ ಈ ಟೆಸ್ಟ್ ಸರಣಿ ಸಾಕಷ್ಟು ದಾಖಲೆಗಳಿಗೂ ಪಾತ್ರವಾಗಿದೆ.

ಹೌದು.. ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯ ಟೆಸ್ಟ್ ಸರಣಿ ರೋಚಕ ಅಂತ್ಯ ಕಂಡಿದ್ದು, ಭಾರತ 2 ಪಂದ್ಯಗಳಲ್ಲಿ ಮತ್ತು ಇಂಗ್ಲೆಂಡ್ 2 ಪಂದ್ಯಗಳಲ್ಲಿ ಜಯಗಳಿಸಿದ್ದರೆ, ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು.

ಅದರಂತೆ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಸಮಬಲದೊಂದಿಗೆ ಟ್ರೋಫಿ ಹಂಚಿಕೊಂಡಿವೆ. ಅಂತೆಯೇ ಇದು ಭಾರತ ತಂಡವು ತವರಿನಿಂದ ಹೊರಗೆ ಟೆಸ್ಟ್ ಸರಣಿಯ 5ನೇ ಪಂದ್ಯವನ್ನು ಗೆದ್ದ ಮೊದಲ ನಿದರ್ಶನವಾಗಿದೆ.

ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಸರಣಿಯಲ್ಲಿ ಉಭಯ ತಂಡಗಳ ಆಟಗಾರರು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಿದ್ದು, ಆ ಮೂಲಕ ಹಲವು ದಾಖಲೆಗಳ ನಿರ್ಮಾಣವಾಗಿದೆ.

Anderson-Tendulkar Trophy 2025 Creates Many records
5th Test: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 6 ರನ್‌ ವಿರೋಚಿತ ಗೆಲುವು; ಸಚಿನ್-ಆ್ಯಂಡರ್ಸನ್ ಟೆಸ್ಟ್ ಸರಣಿ ಸಮಬಲ!

ಹೀಗೆ ನಿರ್ಮಾಣವಾದ ದಾಖಲೆಗಳ ಪಟ್ಟಿ ಇಂತಿದೆ.

ಅತೀ ಹೆಚ್ಚು ರನ್ ಗಳಿಕೆ ಕಂಡ ಜಾಗತಿಕ 2ನೇ ಟೆಸ್ಟ್ ಸರಣಿ ಇದಾಗಿದ್ದು ಈ ಸರಣಿಯಲ್ಲಿ ಉಭಯ ತಂಡಗದಳಿಂದ ಒಟ್ಟು 7187 ರನ್ ಗಳು ಹರಿದುಬಂದಿವೆ.

ಅಂತೆಯೇ ಟೆಸ್ಟ್ ಸರಣಿಯೊಂದರಲ್ಲಿ ಅತೀ ಹೆಚ್ಚು ಬಾರಿ 300ಕ್ಕೂ ಅಧಿಕ ರನ್ ಗಳು ಹರಿದು ಬಂದಿದ್ದು, ಈ ಸರಣಿಯಲ್ಲಿ ಒಟ್ಟು 14 ಬಾರಿ ತಂಡಗಳು 300ಕ್ಕೂ ಅಧಿಕ ರನ್ ಕಲೆಹಾಕಿವೆ.

ಈ ಸರಣಿಯಲ್ಲಿ ಅತೀ ಹೆಚ್ಚು ಬ್ಯಾಟರ್ ಗಳು 400ಕ್ಕಿಂತ ಅಧಿಕ ರನ್ ಕಲೆ ಹಾಕಿದ್ದು, ಭಾರತ ಮತ್ತು ಇಂಗ್ಲೆಂಡ್ ತಂಡಗಳಿಂದ ಒಟ್ಟು 9 ಮಂದಿ 400ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ.

ಅಂತೆಯೇ ಗರಿಷ್ಠ ಅರ್ಧಶತಕಗಳು ಬಂದ ಜಂಟಿ ಸರಣಿ ಕೂಡ ಇದಾಗಿದ್ದು, ಇಲ್ಲಿ 50 ಅರ್ಧಶತಕಗಳು ದಾಖಲಾಗಿವೆ.

ಅಂತೆಯೇ ಗರಿಷ್ಠ ಶತಕಗಳು ಬಂದ ಜಂಟಿ ಸರಣಿ ಇದಾಗಿದ್ದು, ಒಟ್ಟು 21 ಶತಕಗಳು ದಾಖಲಾಗಿವೆ.

ಗರಿಷ್ಠ ಶತಕಗಳ ಜೊತೆಯಾಟ ಬಂದ ಸರಣಿ ಇದಾಗಿದ್ದು, ಇಲ್ಲಿ 19 ಶತಕದ ಜೊತೆಯಾಟಗಳು ಕಂಡುಬಂದಿವೆ.

Anderson-Tendulkar Trophy 2025

  • Second-most runs aggregate in a series (7187)

  • Joint-most 300-plus team totals in a series (14)

  • Most batters scoring 400-plus in a series (9)

  • Joint-most individual 50-plus scores (50)

  • Joint-most individual centuries' scores (21)

  • Joint-most hundred partnerships added (19)

Anderson-Tendulkar Trophy 2025 Creates Many records
ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಜಯ: WTC ಅಂಕಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಏರಿಕೆ; ಫೈನಲ್ ಆಸೆ ಜೀವಂತ..

ಇಂಗ್ಲೆಂಡ್ ವಿರುದ್ಧ ಗರಿಷ್ಠ ವಿಕೆಟ್, ಮಹಮದ್ ಸಿರಾಜ್ ದಾಖಲೆ

ಇನ್ನು ಅಂತಿಮ ಟೆಸ್ಟ್ ಪಂದ್ಯದ ಹೀರೋ ಮಹಮದ್ ಸಿರಾಜ್ 2ನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದು ಆ ಮೂಲಕ ಸರಣಿಯಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 23ಕ್ಕೆ ಏರಿಕೆ ಮಾಡಿಕೊಂಡರು. ಅಲ್ಲದೆ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಗರಿಷ್ಟ ವಿಕೆಟ್ ಪಡೆದ ಜಂಟಿ ಸಾಧನೆಗೆ ಸಿರಾಜ್ ಪಾತ್ರರಾದರು. 2021-22ರಲ್ಲಿ ಜಸ್ ಪ್ರೀತ್ ಬುಮ್ರಾ ಕೂಡ ಇಂಗ್ಲೆಂಡ್ ವಿರುದ್ಧ 23 ವಿಕೆಟ್ ಪಡೆದ ಸಾಧನೆ ಮಾಡಿದ್ದರು.

Most wickets for India in a Test series in England

  • 23 - Jasprit Bumrah, 2021-22

  • 23 - Mohammed Siraj, 2025*

  • 19 - Bhuvneshwar Kumar, 2014

  • ಅತ್ಯಂತ ಕಡಿಮೆ ರನ್ ಅಂತರದಲ್ಲಿ ಪಂದ್ಯ ಗೆದ್ದ 4ನೇ ಪಂದ್ಯ

ಇನ್ನು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ಕೇವಲ 6ರನ್ ಅಂತರದಲ್ಲಿ 5ನೇ ಟೆಸ್ಟ್ ಪಂದ್ಯ ಗೆದ್ದಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ರನ್ ಅಂತರದಲ್ಲಿ ಪಂದ್ಯ ಗೆದ್ದ 4ನೇ ಪಂದ್ಯ ಇದಾಗಿದೆ. ಈ ಹಿಂದೆ 2023ರಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧ ಕೇವಲ 1 ರನ್ ಅಂತರದಲ್ಲಿ ಸೋಲು ಕಂಡಿತ್ತು.

ಇದಕ್ಕೂ ಮೊದಲು 1902ರಲ್ಲಿ ಮ್ಯಾಂಚೆಸ್ಟರ್ ನಲ್ಲಿ ಆಸ್ಟ್ರೇಲಿಯಾ 3ರನ್ ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಿತ್ತು. 1885ರಲ್ಲಿ ಸಿಡ್ನಿಯಲ್ಲೂ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ 6ರನ್ ಅಂತರದಲ್ಲಿ ಗೆದ್ದಿತ್ತು. ಇದೀಗ ಭಾರತ 6ರನ್ ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಜಯಭೇರಿ ಭಾರಿಸಿದೆ.

Lowest defeat margins for England (runs)

  • 1 vs NZ, Wellington, 2023

  • 3 vs AUS, Manchester, 1902

  • 6 vs AUS, Sydney, 1885

  • 6 vs IND, The Oval, 2025*

ಅತಿ ಕಡಿಮೆ ರನ್ ಅಂತರದಲ್ಲಿ ಭಾರತ ಗೆದ್ದ ಮೊದಲ ಪಂದ್ಯ

ಇನ್ನು ಇಂದಿನ ಪಂದ್ಯವು ಭಾರತ ಅತ್ಯಂತ ಕಡಿಮೆ ರನ್ ಅಂತರದಲ್ಲಿ ಗೆದ್ದ ಮೊದಲ ಪಂದ್ಯವಾಗಿದೆ. ಈ ಹಿಂದೆ 2004ರಲ್ಲಿ ಆಸ್ಚ್ರೇಲಿಯಾ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ 13ರನ್ ಗಳ ಅಂತರದ ಜಯಗಳಿಸಿತ್ತು. ಅಂತೆಯೇ 2018ರಲ್ಲಿ ತವರಿನಲ್ಲಿ 4-1 ಅಂತರದ ಜಯ (2 ಭಾರತ, 2 ಡ್ರಾ) ನಂತರ ಇಂಗ್ಲೆಂಡ್ ಭಾರತದ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ.

Lowest win margins for India (runs)

  • 6 vs ENG, The Oval, 2025*

  • 13 vs AUS, Wankhede, 2004

  • 28 vs ENG, Kolkata, 1972

  • 31 vs AUS Adelaide, 2018

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com