
ನವದೆಹಲಿ: ಆಟಗಾರರ ನೋಂದಣಿಗಾಗಿ ವೆರಿಫಿಕೇಶನ್ ಸೇವೆಗಳಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಸ್ತಾವನೆಗಳನ್ನು ಆಹ್ವಾನಿಸಿದ್ದು, ದಾಖಲೆಗಳನ್ನು ಸಲ್ಲಿಸಲು ಆಗಸ್ಟ್ 22 ಕೊನೆಯ ದಿನಾಂಕ ಎಂದು ಘೋಷಿಸಿದೆ.
'ಆಟಗಾರರ ನೋಂದಣಿಗೆ ಸಂಬಂಧಿಸಿದ ಪರಿಶೀಲನಾ ಸೇವೆಗಳನ್ನು ಒದಗಿಸಲು BCCI ಕಂಪನಿ ಅಥವಾ ಸಂಸ್ಥೆಯನ್ನು ಹುಡುಕುತ್ತಿದ್ದು, ಟೆಂಡರ್ ಪ್ರಕ್ರಿಯೆಯ ಮೂಲಕ ಇದನ್ನು ಮಾಡಲಾಗುತ್ತದೆ. ಆಸಕ್ತರು ಒಪ್ಪಂದಕ್ಕಾಗಿ ಪ್ರಸ್ತಾವನೆಗಳು ಅಥವಾ ಬಿಡ್‌ಗಳನ್ನು ಸಲ್ಲಿಸಬೇಕು' ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಬಿಸಿಸಿಐ Request for Proposal (RFP) ಅನ್ನು ಹೊರಡಿಸಿದ್ದು, ಇದು ಪ್ರಸ್ತಾವನೆಗಳ ಸಲ್ಲಿಕೆ ಮತ್ತು ಮೌಲ್ಯಮಾಪನವನ್ನು ನಿಯಂತ್ರಿಸುವ ವಿವರವಾದ ನಿಯಮಗಳು ಮತ್ತು ಷರತ್ತುಗಳನ್ನು ಒಳಗೊಂಡಿದೆ.
'ಒಂದು ಲಕ್ಷ ರೂಪಾಯಿಗಳ ಮರುಪಾವತಿಸಲಾಗದ ಶುಲ್ಕ ಮತ್ತು ಅನ್ವಯವಾಗುವ ಯಾವುದೇ ಜಿಎಸ್‌ಟಿ ಪಾವತಿಸಿದ ನಂತರ RFP ಲಭ್ಯವಾಗುತ್ತದೆ' ಎಂದು ಮಂಡಳಿ ತಿಳಿಸಿದೆ.
Advertisement