Asia Cup 2025: ರಿಷಬ್ ಪಂತ್‌ಗೆ ಆಘಾತ! RCB ಸ್ಪೋಟಕ ಬ್ಯಾಟರ್‌ಗೆ ಒಲಿಯುತ್ತಾ ಅದೃಷ್ಟ?

ಪಂತ್ ಜೊತೆಗೆ ಭಾರತದ ಏಷ್ಯಾಕಪ್ ತಂಡದಲ್ಲಿ ಜೈಸ್ವಾಲ್‌ಗೆ ಸ್ಥಾನವಿಲ್ಲ. 2022ರ ನವೆಂಬರ್‌ನಿಂದ ಭಾರತ ಪರವಾಗಿ ಟಿ20 ಕ್ರಿಕೆಟ್‌ನಲ್ಲಿ ಕಾಣಿಸಿಲ್ಲದ ರಾಹುಲ್ ಕೂಡ ಆಯ್ಕೆಯಾಗುವ ಸಾಧ್ಯತೆ ಕಡಿಮೆ.
Rishabh Pant
ರಿಷಭ್ ಪಂತ್
Updated on

2025ರ ಏಷ್ಯಾ ಕಪ್ ಭಾರತ ತಂಡದ ಆಯ್ಕೆ ಕುರಿತು ಚರ್ಚೆಗಳು ತೀವ್ರಗೊಳ್ಳುತ್ತಿದ್ದಂತೆ, ಈ ಬಾರಿ ಟಿ20 ಸ್ವರೂಪದಲ್ಲಿ ನಡೆಯಲಿರುವ ಕಾಂಟಿನೆಂಟಲ್ ಪಂದ್ಯಾವಳಿಗೆ ಕೆಲವು ದೊಡ್ಡ ದೊಡ್ಡ ಹೆಸರುಗಳನ್ನು ಕೈಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ ಮತ್ತು ಬಿ ಸಾಯಿ ಸುದರ್ಶನ್ ಅವರಂತಹ ಆಟಗಾರರನ್ನು ಕೈಬಿಡುವ ಸಾಧ್ಯತೆ ಇದೆ ಎಂಬ ವರದಿಗಳ ನಂತರ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಬಿಕರಿಯಾಗಿದ್ದ ರಿಷಭ್ ಪಂತ್ ಅವರನ್ನು ಸಹ ಕೈಬಿಡುವ ಸಾಧ್ಯತೆ ಇದ್ದು, ಏಷ್ಯಾ ಕಪ್‌ಗೆ ಆಯ್ಕೆ ಮಾಡಿಲ್ಲ ಎಂದು ವರದಿಯಾಗಿದೆ.

2025ರ ಏಷ್ಯಾ ಕಪ್‌ಗೆ ಸಂಜು ಸ್ಯಾಮ್ಸನ್ ನಂಬರ್ 1 ಆಯ್ಕೆಯ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಎಂದು ಹೇಳಲಾಗಿದ್ದರೂ, ಧ್ರುವ್ ಜುರೆಲ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ ಜಿತೇಶ್ ಶರ್ಮಾ ಅವರಂತಹ ಆಟಗಾರರನ್ನು ಬ್ಯಾಕಪ್ ಆಗಿ ಇಟ್ಟುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇವರಿಬ್ಬರ ಪೈಕಿ, ಜಿತೇಶ್ ಅವರನ್ನು ಆಯ್ಕೆಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಪ್ರಕಾರ, ರಿಷಭ್ ಪಂತ್ ಅವರು ಏಷ್ಯಾ ಕಪ್‌ನಿಂದ ಹೊರಗುಳಿಯಲಿದ್ದಾರೆ.

ಪಂತ್ ಜೊತೆಗೆ ಭಾರತದ ಏಷ್ಯಾಕಪ್ ತಂಡದಲ್ಲಿ ಜೈಸ್ವಾಲ್‌ಗೆ ಸ್ಥಾನವಿಲ್ಲ. 2022ರ ನವೆಂಬರ್‌ನಿಂದ ಭಾರತ ಪರವಾಗಿ ಟಿ20 ಕ್ರಿಕೆಟ್‌ನಲ್ಲಿ ಕಾಣಿಸಿಲ್ಲದ ರಾಹುಲ್ ಕೂಡ ಆಯ್ಕೆಯಾಗುವ ಸಾಧ್ಯತೆ ಕಡಿಮೆ.

ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಪ್ರದರ್ಶನದ ಮೇಲೆ ಭಾರತೀಯ ತಂಡ ನಂಬಿಕೆ ಇಟ್ಟಿರುವಂತೆ ತೋರುತ್ತಿದೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮುಂತಾದವರ ತಂಡ ಸರಣಿಯಲ್ಲಿ ಇಂಗ್ಲೆಂಡ್ ಅನ್ನು 4-1 ಅಂತರದಿಂದ ಸೋಲಿಸಿತು.

Rishabh Pant
England vs India: ಗಾಯಗೊಂಡು ಸಂಕಷ್ಟ; ಟೆಸ್ಟ್ ಇತಿಹಾಸದಲ್ಲಿ ಯಾರು ಮಾಡಿರದ ವಿಶಿಷ್ಟ ಸಾಧನೆ ಮಾಡಿದ ರಿಷಭ್ ಪಂತ್!

ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಏಷ್ಯಾಕಪ್‌ಗಾಗಿ ತಂಡದೊಂದಿಗೆ ಯಾವುದೇ ಮಾತುಕತೆ ನಡೆಸುವ ಮನಸ್ಥಿತಿಯಲ್ಲಿಲ್ಲ ಎಂದು ವರದಿಯಾಗಿದೆ. ಈ ಪಂದ್ಯಾವಳಿಯು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ಗೆ ತಂಡವನ್ನು ರೂಪಿಸಲು ಸಹಾಯ ಮಾಡುತ್ತದೆ.

ಪಂತ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರನಾಗಿದ್ದರೂ, ಸ್ವಲ್ಪ ಸಮಯದಿಂದ ಅವರ ಟಿ20 ಪ್ರದರ್ಶನಗಳು ಉತ್ತಮವಾಗಿಲ್ಲ. ರಿಷಭ್ ಪಂತ್ ಅವರು ಕೊನೆಯದಾಗಿ 5 ಟಿ20ಐ ಪಂದ್ಯಗಳನ್ನು ಕಳೆದ ವರ್ಷ ಆಡಿದ್ದು, 17.50 ಸರಾಸರಿಯಲ್ಲಿ 70 ರನ್ ಗಳಿಸಿದ್ದಾರೆ. ಈ ಪಂದ್ಯಗಳಲ್ಲಿ ಅವರ ಸ್ಟ್ರೈಕ್ ರೇಟ್ ಕೇವಲ 127.26 ಆಗಿತ್ತು. ವಿಶ್ವದ ನಂಬರ್ ಒನ್ ಟಿ20 ಲೀಗ್ ಆಗಿರುವ ಐಪಿಎಲ್‌ನಲ್ಲಿಯೂ ಅಷ್ಟೇನು ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com