
ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಡಾರ್ವಿನ್‌ನ ಮರ್ರಾರಾ ಕ್ರಿಕೆಟ್ ಮೈದಾನದಲ್ಲಿ 41 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಬೆರಗುಗೊಳಿಸಿದ್ದಾರೆ. ಈ ಮೂಲಕ ತಮ್ಮನ್ನು ಯಾಕೆ 'ಬೇಬಿ ಎಬಿ' ಎಂದು ಕರೆಯುತ್ತಾರೆ ಎಂಬುದಕ್ಕೆ ಉತ್ತರ ನೀಡಿದ್ದಾರೆ. 22 ವರ್ಷದ ಅವರು ಮೊದಲ ಪಂದ್ಯದಲ್ಲಿ ಒಂದಂಕಿಯ ರನ್ ಪಡೆದು ನಿರ್ಗಮಿಸಿದರು. ಆದರೆ, ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ 2ನೇ ಟಿ20ಐನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿದ್ದಾರೆ.
ಪಂದ್ಯದ 5ನೇ ಓವರ್‌ನಲ್ಲಿ ಬ್ರೆವಿಸ್ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಬಂದರು. 15ನೇ ಓವರ್ ಮುಗಿಯುವ ಹೊತ್ತಿಗೆ, ಅವರು ತಮ್ಮ ಮೊದಲ T20 ಮತ್ತು ಅಂತರರಾಷ್ಟ್ರೀಯ ಶತಕ ಗಳಿಸಿದ್ದರು. ಬ್ರೆವಿಸ್ 9 ಬೌಂಡರಿಗಳು ಮತ್ತು 8 ಸಿಕ್ಸರ್‌ಗಳ ನೆರವಿನಿಂದ 41 ಎಸೆತಗಳಲ್ಲಿಯೇ ಶತಕ ಬಾರಿಸಿದರು.
ಬಾಂಗ್ಲಾದೇಶ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸಿದ ಡೇವಿಡ್ ಮಿಲ್ಲರ್ ನಂತರ ಬ್ರೆವಿಸ್ ಎರಡನೇ ಅತಿ ವೇಗದ T20 ಶತಕ ಗಳಿಸಿದ ಎರಡನೇ ದಕ್ಷಿಣ ಆಫ್ರಿಕಾದ ಆಟಗಾರರಾದರು. ಇದು ಆಸ್ಟ್ರೇಲಿಯಾ ವಿರುದ್ಧ ಯಾವುದೇ ಆಟಗಾರ ಮಾಡಿದ ಅತ್ಯಂತ ವೇಗದ ಶತಕವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಒಟ್ಟು 218 ರನ್ ಕಲೆಹಾಕಿತ್ತು. ಇದರಲ್ಲಿ ಬ್ರೆವಿಸ್ ಅವರೇ 56 ಎಸೆತಗಳಲ್ಲಿ ಅಜೇಯ 125 ರನ್ ಗಳಿಸಿದರು. ಬೆನ್ ದ್ವಾರಶುಯಿಸ್ ಮತ್ತು ಸೀನ್ ಅಬಾಟ್ ಸೇರಿದಂತೆ ಆಸ್ಟ್ರೇಲಿಯಾದ ಅತ್ಯುತ್ತಮ ಬೌಲರ್‌ಗಳಾದ ಜೋಶ್ ಹೇಜಲ್‌ವುಡ್ ಮತ್ತು ಆಡಮ್ ಜಂಪಾ ಅವರ ಬೆವರಿಳಿಸಿದರು. ಬ್ರೆವಿಸ್ ಮೊದಲ ಬೌಲರ್ ವಿರುದ್ಧ 9 ಎಸೆತಗಳಲ್ಲಿ 26 ರನ್ ಮತ್ತು ನಂತರದ ಬೌಲರ್ ವಿರುದ್ಧ 13 ಎಸೆತಗಳಲ್ಲಿ 26 ರನ್ ಗಳಿಸಿದರು.
ಶತಕ ಬಾರಿಸಿದ ಕೆಲವೇ ಕ್ಷಣಗಳಲ್ಲಿ, ಅವರ ಆರಾಧ್ಯ ದೈವ ಎಬಿ ಡಿವಿಲಿಯರ್ಸ್ ಎಕ್ಸ್‌ನಲ್ಲಿ 22 ವರ್ಷದ ಆಟಗಾರನನ್ನು ಶ್ಲಾಘಿಸಿದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಹರಾಜಿನಲ್ಲಿ ಆಯ್ಕೆಯಾಗದ ಅವರನ್ನು ಗುರ್ಜಪ್ನೀತ್ ಸಿಂಗ್ ಬದಲಿಗೆ ಋತುವಿನ ಮಧ್ಯದಲ್ಲಿ ಗಾಯದ ಬದಲಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಕರೆತಂತು.
ಎಬಿಡಿ ಈ ನಿರ್ಧಾರವನ್ನು 'ಅದೃಷ್ಟ' ಅಥವಾ 'ಅತಿದೊಡ್ಡ ಮಾಸ್ಟರ್ ಸ್ಟ್ರೋಕ್' ಎಂದು ಶ್ಲಾಘಿಸಿದರು.
'ಐಪಿಎಲ್ ತಂಡಗಳಿಗೆ ಹರಾಜಿನಲ್ಲಿ ಡೆವಾಲ್ಡ್ ಬ್ರೆವಿಸ್ ಅವರನ್ನು ಆಯ್ಕೆ ಮಾಡಿಕೊಳ್ಳಲು ಒಂದು ಸುವರ್ಣಾವಕಾಶವಿತ್ತು! ಅದು ತಪ್ಪಿಸಿಕೊಂಡಿತು. ಆದರೆ, ಸಿಎಸ್‌ಕೆ ಅದೃಷ್ಟಶಾಲಿಯಾಗಿತ್ತು ಅಥವಾ ಇದುವರೆಗಿನ ಅತಿದೊಡ್ಡ ಮಾಸ್ಟರ್ ಸ್ಟ್ರೋಕ್ ಆಗಿರಬಹುದು. ಈ ಹುಡುಗ ಉತ್ತಮವಾಗಿ ಆಡಬಲ್ಲ' ಬರೆದಿದ್ದಾರೆ.
Advertisement