
ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಜೊತೆ ವಿಚ್ಛೇದನ ಪಡೆದ ತಿಂಗಳುಗಳ ನಂತರ, ಧನಶ್ರೀ ವರ್ಮಾ ಆ ಕುರಿತು ಮಾತನಾಡಿದ್ದಾರೆ. ಈ ಜೋಡಿ 2020ರ ಡಿಸೆಂಬರ್‌ನಲ್ಲಿ ವಿವಾಹವಾದರು. ಆದರೆ, ಈ ವರ್ಷದ ಮಾರ್ಚ್‌ನಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಇದಾದ ಬಳಿಕ ಇದೇ ಮೊದಲ ಬಾರಿಗೆ ಧನಶ್ರೀ ವಿಚ್ಛೇದನದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ಸಂದರ್ಶನವು ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದ್ದಂತೆ, ಚಾಹಲ್ ಒಂದು ನಿಗೂಢ ಪೋಸ್ಟ್ ಹಂಚಿಕೊಂಡಿದ್ದಾರೆ. ಆದರೆ, ಅನೇಕ ಅಭಿಮಾನಿಗಳು ಇದು ಧನಶ್ರೀಗೆ ನೀಡಿರುವ ಉತ್ತರ ಎಂದು ಊಹಿಸಿದ್ದಾರೆ.
'ನಾವು 'ವೈಯಕ್ತಿಕ ಜೀವನ' ಎಂದು ಹೇಳಲು ಒಂದು ಕಾರಣವಿದೆ. ಅದು ಖಾಸಗಿಯಾಗಿರಬೇಕು. ಮತ್ತು ನೋಡಿ, ಒಂದು ನಾಣ್ಯಕ್ಕೆ ಎರಡು ಬದಿಗಳಿವೆ. ತಾಲಿ ಏಕ್ ಹಾತ್ ಸೇ ತೋ ಬಜ್ತಿ ನಹಿ (ನೀವು ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ). ನಾನು ಮಾತನಾಡುತ್ತಿಲ್ಲ ಎಂಬ ಕಾರಣಕ್ಕೆ ಅದು ಯಾರಿಗೂ ಅದರ ಲಾಭ ಪಡೆಯುವ ಶಕ್ತಿಯನ್ನು ನೀಡುವುದಿಲ್ಲ. ಅದು ಸರಿಯಲ್ಲ. ಅದು ಯಾರೊಂದಿಗೂ ಆಗಬಾರದು ಎಂದು ನಾನು ಭಾವಿಸುತ್ತೇನೆ' ಎಂದು ಧನಶ್ರೀ ಹ್ಯೂಮನ್ಸ್ ಆಫ್ ಬಾಂಬೆ ಜೊತೆ ಮಾತನಾಡುತ್ತಾ ಹೇಳಿದರು.
'ನನ್ನ ಕಡೆಯ ಕಥೆಯು ಇದೆ ಮತ್ತು ಭವಿಷ್ಯದಲ್ಲಿ ನಾನು ಅದನ್ನು ಹಂಚಿಕೊಳ್ಳಬಹುದು. ಆದರೆ, ಸದ್ಯಕ್ಕೆ ನಾನು ನನ್ನ ವೃತ್ತಿಜೀವನದ ಮೇಲೆ ಗಮನ ಕೇಂದ್ರೀಕರಿಸಿದ್ದೇನೆ' ಎಂದು ಹೇಳಿದರು.
'ನೀವು ಉತ್ತಮ ವಿಷಯಗಳನ್ನು ಸಾಧಿಸಲು ಬಯಸಿದರೆ, ನೀವು ಅದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಅದರ ಬಗ್ಗೆ ನನಗೆ ಮಾತನಾಡಲು ಬಹಳಷ್ಟು ಇದೆ. ನನ್ನ ಕಥೆಯಲ್ಲಿ ನನ್ನ ಬದಿಯ ವಿಚಾರವೂ ಇದೆ. ನಾನು ಅದನ್ನು ಆಳವಾಗಿ ತೆಗೆದುಕೊಂಡು ಹೇಳಬೇಕೆ? ಹಾಗಿದ್ದರೆ, ಅದು ಭವಿಷ್ಯದಲ್ಲಿ ಸಂಭವಿಸುತ್ತದೆ' ಎಂದಿದ್ದಾರೆ.
ಬುಧವಾರ ಚಾಹಲ್ ತಮ್ಮ ಪ್ರವಾಸದ ಚಿತ್ರಗಳ ಸರಣಿಯನ್ನು ಪೋಸ್ಟ್ ಮಾಡಿದ್ದು, ಅದಕ್ಕೆ ನೀಡಿರುವ ಶೀರ್ಷಿಕೆ ವ್ಯಾಪಕ ಗಮನಸೆಳೆದಿದೆ.
'ಮಿಲಿಯನ್ ಭಾವನೆಗಳು, ಶೂನ್ಯ ಪದಗಳು' ಎಂದು ಚಾಹಲ್ ತಮ್ಮ ಫೋಟೊಗಳನ್ನು ಹಂಚಿಕೊಂಡು ಬರೆದಿದ್ದಾರೆ. ಅಭಿಮಾನಿಗಳು ಧನಶ್ರೀ ಅವರ ಇತ್ತೀಚಿನ ಸಂದರ್ಶನದ ಪೋಸ್ಟ್ ಅನ್ನು ಗುರಿಯಾಗಿರಿಸಿಕೊಂಡು ಚಾಹಲ್ ಇದನ್ನು ಬರೆದಿದ್ದಾರೆ ಎಂದು ಭಾವಿಸಿದ್ದಾರೆ.
'ವಾಟ್ಸಾಪ್ ಕರ್ ದೇತೆ ಟಿಶರ್ಟ್ ಪೆ ಕಿಯು ಲಿಖ್ವಾಯಾ (ನೀವು ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಬೇಕಿತ್ತು. ನೀವು ಅದನ್ನು ಟಿ-ಶರ್ಟ್‌ನಲ್ಲಿ ಏಕೆ ಬರೆದಿದ್ದೀರಿ?)' ಎಂದು ಅಭಿಮಾನಿಯೊಬ್ಬರು ಚಾಹಲ್ ಧರಿಸಿದ್ದ ಟಿ-ಶರ್ಟ್ ಮೇಲಿದ್ದ 'ಬಿ ಯುವರ್ ಓನ್ ಶುಗರ್ ಡ್ಯಾಡಿ' ಎಂಬ ಪಠ್ಯದ ಬಗ್ಗೆ ಧನಶ್ರೀ ಮಾಡಿದ ಕಾಮೆಂಟ್ ಅನ್ನು ಉಲ್ಲೇಖಿಸಿ ಬರೆದಿದ್ದಾರೆ.
Advertisement