ಗೌತಮ್ ಗಂಭೀರ್‌ಗೆ 'ಇಷ್ಟವಿದ್ದವರಿಗಷ್ಟೇ ತಂಡದಲ್ಲಿ ಸ್ಥಾನ', ಇಲ್ಲದಿದ್ದರೆ...: ಭಾರತದ ಮುಖ್ಯ ಕೋಚ್ ವಿರುದ್ಧ ಮಾಜಿ ಆಟಗಾರ ಆರೋಪ

ಭಾರತದ ಏಷ್ಯಾ ಕಪ್ ತಂಡವನ್ನು ಪ್ರಶ್ನಿಸಿದ ರಮೇಶ್, ಶ್ರೇಯಸ್ ಅಯ್ಯರ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಕಾಂಟಿನೆಂಟಲ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಬೇಕಿತ್ತು ಎಂದು ಹೇಳಿದರು.
Gautam Gambhir
ಗೌತಮ್ ಗಂಭೀರ್‌
Updated on

ಕಳೆದ ವರ್ಷ ಜುಲೈನಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಾಗಿನಿಂದ ಗೌತಮ್ ಗಂಭೀರ್ ಅವರು ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಅವರ ಪ್ರಯಾಣದ ಆರಂಭದಲ್ಲಿ ಹೆಚ್ಚಿನ ಕುಸಿತಗಳು ಕಂಡುಬಂದಿದ್ದರೂ, ಇತ್ತೀಚಿನ ಇಂಗ್ಲೆಂಡ್ ವಿರುದ್ಧ ಸರಣಿಯನ್ನು 2-2 ಡ್ರಾ ಮಾಡಿಕೊಂಡಿದ್ದೇ ಸಾಧನೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಭಾರತ ಸರಣಿಯನ್ನು ಸಮಬಲಗೊಳಿಸಿತು. ಮುಖ್ಯ ಕೋಚ್ ಆಗಿ ಅವರ ಪ್ರದರ್ಶನ ಮತ್ತು ಆಟಗಾರರಿಗೆ ಅವರ ಬೆಂಬಲದ ಬಗ್ಗೆ ಭಾರತದ ಮಾಜಿ ಆಟಗಾರ ಸಡಗೋಪ್ಪನ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.

'ಅವರು ಇಷ್ಟಪಡುವ ಆಟಗಾರರನ್ನು ಬೆಂಬಲಿಸುತ್ತಾರೆ ಆದರೆ, ಇಷ್ಟಪಡದ ಆಟಗಾರರನ್ನು ಸಂಪೂರ್ಣವಾಗಿ ಬಿಟ್ಟುಬಿಡುತ್ತಾರೆ' ಎಂದು ರಮೇಶ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿರುವುದಾಗಿ ಸ್ಪೋರ್ಟ್ಸ್‌ಕೀಡಾ ಉಲ್ಲೇಖಿಸಿದೆ.

ಇಂಗ್ಲೆಂಡ್ ಟೆಸ್ಟ್ ಸರಣಿ ಬಗ್ಗೆ ಮಾತನಾಡಿದ ಭಾರತದ ಮಾಜಿ ಆರಂಭಿಕ ಆಟಗಾರ, 'ಕಳೆದ ವರ್ಷ ನಾವು ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯು ಉತ್ತಮ ಸಾಧನೆಯಂತೆ ಕಾಣುತ್ತದೆ. ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ನೇತೃತ್ವದಲ್ಲಿ ವಿದೇಶಗಳಲ್ಲಿ ಸ್ಥಿರವಾಗಿ ಗೆಲ್ಲುವುದು ಬಹಳ ಹಿಂದೆಯೇ ಪ್ರಾರಂಭವಾಗಿತ್ತು. ಆದರೆ, ಈಗ ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯನ್ನು ಮಾತ್ರ ಗಂಭೀರ್ ಅವರ ಟ್ರ್ಯಾಕ್ ರೆಕಾರ್ಡ್‌ನಲ್ಲಿ ದೊಡ್ಡ ಸಾಧನೆ ಎಂದು ನೋಡಲಾಗುತ್ತಿದೆ' ಎಂದರು.

ಭಾರತದ ಏಷ್ಯಾ ಕಪ್ ತಂಡವನ್ನು ಪ್ರಶ್ನಿಸಿದ ರಮೇಶ್, ಶ್ರೇಯಸ್ ಅಯ್ಯರ್ ಮತ್ತು ಯಶಸ್ವಿ ಜೈಸ್ವಾಲ್ ಅವರನ್ನು ಕಾಂಟಿನೆಂಟಲ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಬೇಕಿತ್ತು ಎಂದು ಹೇಳಿದರು.

Gautam Gambhir
ಟೀಂ ಇಂಡಿಯಾ ಮೇಲೆ ಹಿಡಿತ: ಎಲ್ಲದಕ್ಕೂ ಕೋಚ್ ಗೌತಮ್ ಗಂಭೀರ್ ಕಾರಣ, ಶುಭಮನ್ ಗಿಲ್ ಅಲ್ಲವೇ ಅಲ್ಲ! - ದಿನೇಶ್ ಕಾರ್ತಿಕ್

'ಚಾಂಪಿಯನ್ಸ್ ಟ್ರೋಫಿ ಗೆಲುವು ಗಂಭೀರ್ ಅವರ ನಿಜವಾದ ದೊಡ್ಡ ಸಾಧನೆಯಾಗಿದೆ. ಆ ಫಲಿತಾಂಶಕ್ಕೆ ಶ್ರೇಯಸ್ ಅಯ್ಯರ್ ದೊಡ್ಡ ಕಾರಣ. ಆದರೂ, ಗಂಭೀರ್ ಅವರು ಶ್ರೇಯಸ್ ಅಯ್ಯರ್ ಅವರನ್ನು ಬೆಂಬಲಿಸುತ್ತಿಲ್ಲ. ಎಕ್ಸ್-ಫ್ಯಾಕ್ಟರ್ ಆಟಗಾರ ಜೈಸ್ವಾಲ್ ಅವರಂತಹವರು ಎಲ್ಲ ಸ್ವರೂಪಗಳಲ್ಲಿ ಆಡಬೇಕು. ಅವರನ್ನು ಸ್ಟ್ಯಾಂಡ್‌ಬೈನಲ್ಲಿ ಇಡುವುದು ಕಳಪೆ ನಡೆ' ಎಂದು ಅವರು ಹೇಳಿದರು.

'ಶ್ರೇಯಸ್ ಅಯ್ಯರ್ ಅದೇ ಯುಎಇಯಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು ಮತ್ತು ಅವರು ಭಾರತದ ವೈಟ್-ಬಾಲ್ ತಂಡಗಳಲ್ಲಿ ಶಾಶ್ವತ ಆಟಗಾರರಾಗಬೇಕು. ಆಟಗಾರರು ಆತ್ಮವಿಶ್ವಾಸ ಮತ್ತು ಫಾರ್ಮ್‌ನಲ್ಲಿದ್ದಾಗ ಅವರನ್ನು ಬೆಂಬಲಿಸಬೇಕೇ ಹೊರತು ಅವರು ಮಸುಕಾದಾಗ ಮತ್ತು ಆತ್ಮವಿಶ್ವಾಸದ ಕೊರತೆಯಿರುವಾಗ ಅಲ್ಲ. ಅಯ್ಯರ್ ಅವರ ಅಗಾಧವಾದ ಆತ್ಮವಿಶ್ವಾಸ ಮತ್ತು ಫಾರ್ಮ್‌ನ ಪ್ರತಿಫಲವನ್ನು ಪಡೆಯಲು ಇದು ಸೂಕ್ತ ಸಮಯ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com