
ಐಪಿಎಲ್ 2025ನೇ ಆವೃತ್ತಿಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಲು ತಂಡ ಆಕ್ರಮಣಕಾರಿಯಾಗಿ ಬಿಡ್ ಮಾಡಿದ್ದರ ಆದರೆ, ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರ ಹಿಂದಿನ ತರ್ಕವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಿರ್ದೇಶಕ ಮೊ ಬೊಬಾಟ್ ವಿವರಿಸಿದ್ದಾರೆ. ಆರ್‌ಸಿಬಿ ಬಿಡ್ಡಿಂಗ್ ಪ್ರಕ್ರಿಯೆಯಿಂದ ಹಿಂದೆ ಸರಿಯಲು ನಿರ್ಧರಿಸಿದ ನಂತರ 2024ರ ಚಾಂಪಿಯನ್ ಆಗಿದ್ದ ಕೆಕೆಆರ್ ತಂಡವು ಆಲ್‌ರೌಂಡರ್ ಅನ್ನು 23.75 ಕೋಟಿ ರೂ.ಗೆ ಖರೀದಿಸಿತು. ಆರ್‌ಸಿಬಿ ತಂಡವು ಅಯ್ಯರ್ ಅವರನ್ನು ಹಿಂಬಾಲಿಸಿದ್ದು ಏಕೆ ಮತ್ತು ಅದು ಯುಜ್ವೇಂದ್ರ ಚಾಹಲ್‌ಗೆ ಹೇಗೆ ಸಂಬಂಧಿಸಿದೆ ಎಂಬುದರ ಕುರಿತು ಆರ್‌ಸಿಬಿ ನಿರ್ದೇಶಕರು ಈಗ ವಿವರಿಸಿದ್ದಾರೆ.
ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ, ಚಾಹಲ್ ಅವರನ್ನು ಬಿಡುಗಡೆ ಮಾಡುವ ಮೂಲಕ, ತಂಡವು ತಮ್ಮ ಪರ್ಸ್‌ನಲ್ಲಿ 14 ಕೋಟಿ ರೂ.ಗಳನ್ನು ಉಳಿಸಿಕೊಂಡಿತು. ಅದನ್ನು ಎಡಗೈ ಬ್ಯಾಟ್ಸ್‌ಮನ್ ಖರೀದಿಸಲು ಬಳಸಬಹುದೆಂದು ಭಾವಿಸಿದ್ದೆವು. ಆದರೆ, ವೆಂಕಟೇಶ್ ಅಯ್ಯರ್ ಅವರ ಬೆಲೆ 23.5 ಕೋಟಿ ರೂ. ತಲುಪಿದಾಗ ಬಿಡ್ಡಿಂಗ್ ಪ್ರಕ್ರಿಯೆಯಿಂದ ಹಿಂದೆ ಸರಿಯುವ ಮೂಲಕ, ದೇವದತ್ ಪಡಿಕ್ಕಲ್ ಅವರನ್ನು ಖರೀದಿಸಿ 3ನೇ ಕ್ರಮಾಂಕದಲ್ಲಿ ಆಡಿಸಲು ಮುಂದಾಯಿತು ಮತ್ತು ಫಿಲ್ ಸಾಲ್ಟ್ ಅವರನ್ನು ಆದ್ಯತೆಯನ್ನಾಗಿ ಮಾಡಿಕೊಳ್ಳಲಾಯಿತು. ಹೀಗಾಗಿ, ಆರ್‌ಸಿಬಿಗೆ ವಿಲ್ ಜ್ಯಾಕ್ಸ್ ಅಥವಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಕೂಡ ಸೇರಿಸಿಕೊಳ್ಳಲು ಅವಕಾಶವಿರಲಿಲ್ಲ ಎಂದು ಬೊಬಾಟ್ ಹೇಳಿದರು.
'ವೆಂಕಟೇಶ್ ಅಯ್ಯರ್ ಅವರೊಂದಿಗೆ ನಾವು ಏನು ಮಾಡುತ್ತಿದ್ದೇವೆಂದು ಅರ್ಥಮಾಡಿಕೊಳ್ಳಲು, ಯುಜ್ವೇಂದ್ರ ಚಹಾಲ್ ಅವರೊಂದಿಗೆ ನಮಗೆ ಏನು ಸಾಧ್ಯವಾಗಲಿಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದರು.
ಮೊಹಮ್ಮದ್ ಸಿರಾಜ್ ಬಿಡುಗಡೆ ಮಾಡಲು ಭುವಿ ಕಾರಣ
ಮೊಹಮ್ಮದ್ ಸಿರಾಜ್ ಅವರನ್ನು ಬಿಡುಗಡೆ ಮಾಡುವ ಮೊದಲು ಆರ್‌ಸಿಬಿ ಬಹಳ ಸಮಯದಿಂದ ಚರ್ಚಿಸಿತ್ತು ಎಂದರು. ಫ್ರಾಂಚೈಸಿಯಲ್ಲಿ ಮನೆಮಾತಾಗಿರುವ ಈ ವೇಗಿ 2018 ರಲ್ಲಿ ತಂಡಕ್ಕೆ ಸೇರಿದಾಗಿನಿಂದ ತಂಡದ ಮುಂಚೂಣಿಯ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ಆದಾಗ್ಯೂ, ಮೆಗಾ ಹರಾಜಿಗೆ ಮುಂಚಿತವಾಗಿ ಅವರನ್ನು ಬಿಡುಗಡೆ ಮಾಡಲಾಯಿತು. ಇದು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿತು. ಸಿರಾಜ್ ಅವರನ್ನು ಬಿಡುಗಡೆ ಮಾಡುವುದರ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ಆರ್‌ಸಿಬಿ ನಿರ್ದೇಶಕರು, ಭುವನೇಶ್ವರ್ ಕುಮಾರ್ ಅವರನ್ನು ಪಡೆಯುವ ತಂಡದ ಯೋಜನೆಗಳು ಸಿರಾಜ್ ಅವರನ್ನು ಉಳಿಸಿಕೊಂಡಿದ್ದರೆ ಅಥವಾ ಅವರ ಹಿಂದೆ ಹೋಗಿದ್ದರೆ ಫಲ ನೀಡುತ್ತಿರಲಿಲ್ಲ ಎಂದು ಬಹಿರಂಗಪಡಿಸಿದರು.
'ನಾವು ಭುವಿಯನ್ನು ಪಡೆಯಲು ಪ್ರಯತ್ನಿಸಲು ಉತ್ಸುಕರಾಗಿದ್ದೆವು ಮತ್ತು ಸಿರಾಜ್ ಅನ್ನು ಹಿಡಿದಿಟ್ಟುಕೊಳ್ಳುವುದರಿಂದ ಭುವಿಯನ್ನು ಪಡೆಯುವುದು ಕಷ್ಟವಾಗುತ್ತದೆ ಎಂದು ನಾವು ಭಾವಿಸಿದ್ದೆವು' ಎಂದು ಅವರು ಹೇಳಿದರು.
Advertisement