
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮಾಜಿ ಆಯುಕ್ತ ಲಲಿತ್ ಮೋದಿ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರಾಟದ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಬಿಯಾಂಡ್ 23 ಪಾಡ್‌ಕ್ಯಾಸ್ಟ್‌ನಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅವರೊಂದಿಗೆ ಮಾತನಾಡಿದ 61 ವರ್ಷದ ಲಲಿತ್, ಆರ್‌ಸಿಬಿ ಸದ್ಯ ಎರಡು ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ ಮತ್ತು ಮುಂಬರುವ ವರ್ಷಗಳಲ್ಲಿ ಅದರ ಮೌಲ್ಯ ಮತ್ತಷಅಟು ಬೆಳೆಯುತ್ತದೆ ಎಂದು ಸೂಚಿಸಿದರು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಬಗ್ಗೆ ಮಾತನಾಡಿದ ಅವರು, ಇದು ದುರದೃಷ್ಟಕರ ಘಟನೆ ಎಂದರು.
'ನಾವು (ಐಪಿಎಲ್) ಕೇವಲ 18 ವರ್ಷ ವಯಸ್ಸಿನವರು. ನಾವು ಅಭಿಮಾನಿಗಳನ್ನು ಅನುಸರಿಸಲು ಪ್ರಾರಂಭಿಸಿದ್ದೇವೆ. ನಾವು ಇದೀಗ ಉನ್ಮಾದವನ್ನು ಪ್ರಾರಂಭಿಸಿದ್ದೇವೆ. ಆರ್‌ಸಿಬಿ ಕಪ್ ಗೆದ್ದ ನಂತರ ಕರ್ನಾಟಕದಲ್ಲಿ ಕಾಲ್ತುಳಿತ ಸಂಭವಿಸಿದ್ದು ದುರದೃಷ್ಟಕರ. ಆದರೆ ದೇಶಾದ್ಯಂತ, ಪ್ರಪಂಚದಾದ್ಯಂತ ಆ ಉತ್ಸಾಹ ಬೆಳೆಯುವುದನ್ನು ನೀವು ನೋಡುತ್ತೀರಿ' ಎಂದು ಲಲಿತ್ ಮೋದಿ ಹೇಳಿದರು.
'ಆರ್‌ಸಿಬಿಯನ್ನು ಮಾರಾಟ ಮಾಡಲು ಬಯಸಿದರೆ, ಅದನ್ನು 2 ಬಿಲಿಯನ್ ಡಾಲರ್‌ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವುದು ಮೂರ್ಖತನ. ಮುಂದಿನ ವರ್ಷ 2.5 ಬಿಲಿಯನ್ ಮತ್ತು ಎರಡು ವರ್ಷಗಳ ನಂತರ 3 ಬಿಲಿಯನ್ ಮತ್ತು ನಾಲ್ಕು ವರ್ಷಗಳ ನಂತರ 4 ಬಿಲಿಯನ್ ಡಾಲರ್. ಹೀಗೆ ಆರ್‌ಸಿಬಿ ಮೌಲ್ಯ ಹೆಚ್ಚುತ್ತಲೇ ಹೋಗುತ್ತದೆ. ಬೇಕಿದ್ದರೆ ನಾನು ಅದನ್ನು ಲಿಖಿತವಾಗಿ ಬರೆದುಕೊಡುತ್ತೇನೆ. ಇದು ವರ್ಷಕ್ಕೆ ಅರ್ಧ ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗುತ್ತದೆ' ಎಂದು ಅವರು ಹೇಳಿದರು.
ಜೂನ್ 4 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾದರು ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡರು. ಬರೋಬ್ಬರಿ 18 ವರ್ಷಗಳ ಭಳಿಕ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವವನ್ನು ವೀಕ್ಷಿಸಲು ಸುಮಾರು 3 ಲಕ್ಷ ಜನರು ಸೇರಿದ್ದರು. ಈ ವೇಳೆ ಉಂಟಾದ ನೂಕುನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿತ್ತು.
ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಇಬ್ಬರು ಸದಸ್ಯರ ಪೀಠವು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತಕ್ಕೆ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿದೆ.
Advertisement