
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಗಡಿಯಾಚೆಗಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಭಾರತ-ಪಾಕಿಸ್ತಾನ ಕ್ರೀಡಾ ಸಂಬಂಧಕ್ಕೆ ಸಂಬಂಧಿಸಿದಂತೆ ರಾಷ್ಟ್ರದ ಜನರ ಅಭಿಪ್ರಾಯ ಕುರಿತು ಮೂಡ್ ಆಫ್ ದಿ ನೇಷನ್ ಸಮೀಕ್ಷೆ ನಡೆಸಿದೆ.
ಬರುವ ಏಷ್ಯಾಕಪ್‌ನಲ್ಲಿ ಭಾರತ ತನ್ನ ತಮ್ಮ ಸಾಂಪ್ರದಾಯಿಕ ಎದುರಾಳಿಗಳನ್ನು ಎದುರಿಸಲು ಸಜ್ಜಾಗುತ್ತಿರುವಾಗಲೂ, ಇಂಡಿಯಾ ಟುಡೆ-ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಶೇ.68.6 ರಷ್ಟು ಜನರು, ನೆರೆ ರಾಷ್ಟ್ರದೊಂದಿಗೆ ಕ್ರೀಡಾ ಸಂಬಂಧ ಹೊಂದಬಾರದು ಎಂದು ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ ಶೇ. 25 ರಷ್ಟು ಜನರು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯಗಳು ಸೇರಿದಂತೆ ದ್ವಿಪಕ್ಷೀಯ ಕ್ರೀಡಾ ಸಂಬಂಧಗಳನ್ನು ಮುಂದುವರೆಸುವ ಪರವಾಗಿದ್ದಾರೆ.ಶೇ. 7 ರಷ್ಟು ಮಂದಿ ಯಾವುದೇ ಸ್ಪಷ್ಟ ಅಭಿಪ್ರಾಯ ನೀಡಲಿಲ್ಲ. ಉಳಿದ ಶೇ. 68. 6 ರಷ್ಟು ಜನರು ಯಾವುದೇ ಕ್ರೀಡಾ ಸಂಬಂಧ ಹೊಂದಬಾರದು ಎಂದು ಹೇಳಿದರು.
1 ಜುಲೈ ಮತ್ತು 14 ಆಗಸ್ಟ್ 2025 ರ ನಡುವೆ ಇಂಡಿಯಾ ಟುಡೇ-ಸಿವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ 54,788 ಮಂದಿ ಭಾಗವಹಿಸಿದ್ದಾರೆ. ಅಲ್ಲದೇ CVoter ನಿಂದ 1,52,038 ಸಂದರ್ಶನಗಳನ್ನು ವಿಶ್ಲೇಷಿಸಲಾಗಿದೆ. ಒಟ್ಟಾರೆಯಾಗಿ, 2,06,826 ವ್ಯಕ್ತಿಗಳ ಅಭಿಪ್ರಾಯಗಳು ಈ ವರದಿಗೆ ಆಧಾರವಾಗಿದೆ.
ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವು ಮಂದಿ ಪಾಕಿಸ್ತಾನದ ವಿರುದ್ಧದ ಏಷ್ಯಾ ಕಪ್ ಪಂದ್ಯ ಬಹಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ. ಏಷ್ಯಾ ಕಪ್‌ನಿಂದ ಭಾರತ ಹಿಂದೆ ಸರಿಯಬಹುದೆಂಬ ಊಹಾಪೋಹಗಳಿದ್ದರೂ, ತಂಡವು ತಟಸ್ಥ ಸ್ಥಳವಾದ ಯುಎಇಯಲ್ಲಿ ಭಾಗವಹಿಸಲು ನಿರ್ಧರಿಸಿದೆ.
ಭಾರತ ಮತ್ತು ಪಾಕಿಸ್ತಾನವು ಸೆಪ್ಟೆಂಬರ್ 14 ರಂದು ಗುಂಪು ಹಂತದಲ್ಲಿ ಮುಖಾಮುಖಿಯಾಗಲಿದ್ದು, ಎರಡೂ ತಂಡಗಳು ಫೈನಲ್ ತಲುಪಿದರೆ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
Advertisement