'ಅತ್ಯುತ್ತಮ ಮನುಷ್ಯ, ಅತ್ಯುತ್ತಮ ಕೋಚ್'; ಗೌತಮ್ ಗಂಭೀರ್ ವಿರುದ್ಧದ ಟೀಕೆಗಳಿಗೆ ಯಾವುದೇ ಅರ್ಥವಿಲ್ಲ!

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೈಟ್‌ವಾಶ್ ಆದ ಒಂದು ವರ್ಷದ ನಂತರ ಟೀಂ ಇಂಡಿಯಾ ತವರಿನಲ್ಲಿ ಮತ್ತೊಮ್ಮೆ ಆಫ್ರಿಕಾ ವಿರುದ್ಧ 0-2 ಅಂತರದ ಸೋಲು ಕಂಡ ನಂತರ ಅವರು ಟೀಕೆಗಳನ್ನು ಎದುರಿಸುತ್ತಿದ್ದಾರೆ.
Gautam Gambhir
ಗೌತಮ್ ಗಂಭೀರ್
Updated on

ದುಬೈ: ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ಅವರ ತರಬೇತಿ ವಿಧಾನಗಳು ಭಾರತದಲ್ಲಿ ಧ್ರುವೀಕೃತ ಅಭಿಪ್ರಾಯಗಳನ್ನು ಹೊಂದಿರಬಹುದು ಆದರೆ, ಅಫ್ಗಾನಿಸ್ತಾನದ ಪ್ರತಿಭಾವಂತ ಕೀಪರ್ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್, ಗಂಭೀರ್ ಅವರು ತಾವು ಕಂಡ 'ಅತ್ಯುತ್ತಮ ಕೋಚ್' ಎಂದು ಕರೆದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೈಟ್‌ವಾಶ್ ಆದ ಒಂದು ವರ್ಷದ ನಂತರ ಟೀಂ ಇಂಡಿಯಾ ತವರಿನಲ್ಲಿ ಮತ್ತೊಮ್ಮೆ ಆಫ್ರಿಕಾ ವಿರುದ್ಧ 0-2 ಅಂತರದ ಸೋಲು ಕಂಡ ನಂತರ ಗೌತಮ್ ಗಂಭೀರ್ ಅವರು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಟೀಂ ಇಂಡಿಯಾ ಸದ್ಯ ತಮ್ಮ ಕೊನೆಯ ಏಳು ಟೆಸ್ಟ್‌ಗಳಲ್ಲಿ ಐದನ್ನು ಕಳೆದುಕೊಂಡಿದೆ.

2024ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದ ಕೆಕೆಆರ್ ತಂಡದ ಭಾಗವಾಗಿರುವ ಗುರ್ಬಾಜ್, ತಮ್ಮ 'ಗೌತಮ್ ಸರ್' ವಿರುದ್ಧ ಕೇಳಿ ಬರುತ್ತಿರವ ಈ ಆಕ್ರೋಶಕ್ಕೆ ಅರ್ಥವಿಲ್ಲ ಎಂದು ಭಾವಿಸುತ್ತಾರೆ.

'ನಿಮ್ಮ ದೇಶದಲ್ಲಿ 1.4 ಬಿಲಿಯನ್ ಜನರಿದ್ದರೆ, 2-3 ಮಿಲಿಯನ್ ಜನರು ಅವರ ವಿರುದ್ಧ ಇರುತ್ತಾರೆ ಎಂದು ನೀವು ಹೇಳಬಹುದು. ಉಳಿದವರು ಗೌತಮ್ ಸರ್ ಜೊತೆಗಿದ್ದಾರೆ ಮತ್ತು ಭಾರತ ತಂಡದ ಜೊತೆಗಿದ್ದಾರೆ. ಅವರ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದು 24 ವರ್ಷದ ಆಟಗಾರ ಇಲ್ಲಿ ಐಎಲ್‌ಟಿ 20ರ ನಾಲ್ಕನೇ ಸೀಸನ್‌ನ ಭಾಗವಾಗಿರುವ ಅವರು ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

'ನನ್ನ ವೃತ್ತಿಜೀವನದಲ್ಲಿ ಇಲ್ಲಿಯವರೆಗೆ ನಾನು ಪಡೆದಿರುವ ಕೋಚ್ ಮತ್ತು ಉತ್ತಮ ಮನುಷ್ಯ, ಮಾರ್ಗದರ್ಶಕ ಅವರು. ಅವರು ವಿಷಯಗಳನ್ನು ನಿಭಾಯಿಸುವ ರೀತಿ ನನಗೆ ತುಂಬಾ ಇಷ್ಟ. ಭಾರತ ತಂಡವು ಏಕದಿನ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು, ಟಿ20 ಮಾದರಿಯಲ್ಲಿ ಏಷ್ಯಾಕಪ್ ಗೆದ್ದಿದೆ. ಅವರು ಬಹಳಷ್ಟು ಸರಣಿಗಳನ್ನು ಗೆದ್ದಿದ್ದಾರೆ, ಆದ್ದರಿಂದ ಒಂದೇ ಸರಣಿಗೆ ಅವರನ್ನು ದೂಷಿಸಲು ಸಾಧ್ಯವಿಲ್ಲ' ಎಂದರು.

ಅವರು ಕಟ್ಟುನಿಟ್ಟಾಗಿಲ್ಲ ಆದರೆ ಶಿಸ್ತುಬದ್ಧರು. ಏನಾದರೂ ಶಿಸ್ತಿಗೆ ವಿರುದ್ಧವಾದಾಗ ಮಾತ್ರ ಅವರು ಕಟ್ಟುನಿಟ್ಟಾಗಿರುತ್ತಾರೆ. ಭಾರತೀಯ ಕ್ರಿಕೆಟಿಗರು ಸಹಾನುಭೂತಿಗೆ ಅರ್ಹರು, ಪರಿಸ್ಥಿತಿ ಹದಗೆಟ್ಟಾಗ ಕಠಿಣ ತೀರ್ಪಿಗಲ್ಲ ಎಂದು ಆಫ್ಘನ್ ಆರಂಭಿಕ ಆಟಗಾರ ಹೇಳಿದರು.

'ಗಂಭೀರ್ ಅವರ ದೊಡ್ಡ ಶಕ್ತಿ ಎಂದರೆ ಕೆಕೆಆರ್‌ನಲ್ಲಿ ಅವರು ನಿರ್ಮಿಸಿದ ನಿರಾಳ, ಒತ್ತಡ ರಹಿತ ಮತ್ತು ಶಿಸ್ತಿನಲ್ಲಿ ಬೇರೂರಿರುವ ವಾತಾವರಣ. ಇದು ತಂಡವು ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಟ್ಟಿತು. ಅವರು ತಮ್ಮ ಕೆಲಸದ ಬಗ್ಗೆ ಹೋಗುವ ರೀತಿ ನನಗೆ ತುಂಬಾ ಇಷ್ಟ. ನಿಮಗೆ ಉತ್ತಮ ವಾತಾವರಣವಿದ್ದಾಗ, ನೀವು ಯಾವಾಗಲೂ ಉನ್ನತ ಸ್ಥಾನದಲ್ಲಿರುತ್ತೀರಿ. ಅವರು ನಮಗೆ ಅಂತಹ ವಾತಾವರಣ ಸೃಷ್ಟಿಸಿದರು. ಅಲ್ಲಿ ಒತ್ತಡವಿಲ್ಲ, ಹೆಚ್ಚಿನ ಕಟ್ಟುನಿಟ್ಟಿಲ್ಲ ಮತ್ತು ಅದಕ್ಕಾಗಿಯೇ ನಾವು ಟೂರ್ನಮೆಂಟ್ ಗೆದ್ದಿದ್ದೇವೆ' ಎಂದು ಅವರು ಹೇಳಿದರು.

Gautam Gambhir
ಗಂಭೀರ್-ಕೊಹ್ಲಿ ನಡುವೆ ಬಿರುಕು: ವದಂತಿಗೆ ಪುಷ್ಠಿ ನೀಡುವಂತೆ Video ವೈರಲ್! ಏನಿದು?

'ಒಬ್ಬ ಕ್ರಿಕೆಟಿಗನಾಗಿ, ನಾನು ಎಂದಿಗೂ ಆಟಗಾರರನ್ನು ದೂಷಿಸುವುದಿಲ್ಲ. ಏಕೆಂದರೆ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಅವರು ಸೋತರು, ಹಾಗಾದರೆ ಏನು? ಅವರು ಮನುಷ್ಯರೇ. ಕೆಲವೊಮ್ಮೆ ನೀವು ಸೋಲುತ್ತೀರಿ- ಅದು ಜೀವನದ ಒಂದು ಭಾಗ. ನೀವು ಕೆಟ್ಟ ಸಮಯವನ್ನು ಎದುರಿಸುತ್ತಿರುವಾಗ, ನಿಮಗೆ ಬೆಂಬಲ ಬೇಕಾಗುತ್ತದೆ' ಎಂದ ಅವರು, ಕೆಕೆಆರ್ ಜೊತೆಗಿನ ತಮ್ಮ ಮೂರು ವರ್ಷಗಳ ಅವಧಿ 'ತುಂಬಾ ರೋಮಾಂಚಕಾರಿ' ಎಂದು ಕರೆದರು.

3 ವರ್ಷಗಳ ಕಾಲ ಕೆಕೆಆರ್ ಜೊತೆ ಇದ್ದು ನಂತರ ಚಾಂಪಿಯನ್‌ಶಿಪ್ ಗೆದ್ದಿದ್ದು ತುಂಬಾ ಚೆನ್ನಾಗಿತ್ತು. ಗುಜರಾತ್ ಟೈಟಾನ್ಸ್‌ನ 2022ರ ವಿಜಯೋತ್ಸವ ಅಭಿಯಾನದ ಭಾಗವಾಗಿದ್ದನ್ನೂ ಅವರು ನೆನಪಿಸಿಕೊಂಡರು.

ಕೆಕೆಆರ್‌ನಿಂದ ಮುಂಬರುವ ಹರಾಜಿಗೆ ಮುಂಚಿತವಾಗಿ ಬಿಡುಗಡೆಯಾದ ಅವರು, ಈ ತಿಂಗಳ ಕೊನೆಯಲ್ಲಿ ಹರಾಜಿಗಾಗಿ ಎದುರು ನೋಡುತ್ತಿದ್ದಾರೆ. 'ನಾನು ಈಗ ಹರಾಜಿನಲ್ಲಿದ್ದೇನೆ. ಯಾರು ನನ್ನನ್ನು ಬಯಸುತ್ತಾರೆ, ನಾನು ಎಲ್ಲಿಗೆ ಹೋಗಲು ಅರ್ಹನಾಗಿದ್ದೇನೆ ಎಂದು ನೋಡುತ್ತೇನೆ. ಮುಂದೆ ಉತ್ತಮ ಆವೃತ್ತಿಯನ್ನು ಹುಡುಕುತ್ತಿದ್ದೇನೆ' ಎಂದರು.

ಭಾರತದ ರಾಷ್ಟ್ರೀಯ ರಾಜಧಾನಿ ನನ್ನ ನೆಚ್ಚಿನ ನಗರವಾದ್ದರಿಂದ, ಕೆಕೆಆರ್ ಹೊರತುಪಡಿಸಿ ಡೆಲ್ಲಿ ಕ್ಯಾಪಿಟಲ್ಸ್ ನನ್ನ ನೆಚ್ಚಿನ ತಂಡ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com