2nd ODI: ಇತಿಹಾಸ ಬರೆದ ದಕ್ಷಿಣ ಆಫ್ರಿಕಾ, ಭಾರತದಲ್ಲಿ ಬೃಹತ್ ರನ್ ಚೇಸ್, ದಾಖಲೆಗಳ ಸುರಿಮಳೆ.. ಆಸಿಸ್ ದಾಖಲೆಗೂ ಕುತ್ತು!

3 ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ವಿಶಾಖ ಪಟ್ಟಣಂನಲ್ಲಿ ನಡೆಯಲಿರುವ ಅಂತಿಮ ಪಂದ್ಯ ಇದೀಗ ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ.
South Africa Creates history
ಇತಿಹಾಸ ಬರೆದ ದಕ್ಷಿಣ ಆಫ್ರಿಕಾ
Updated on

ರಾಯ್ಪರ: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತ ಚೇಸ್ ಮಾಡಿ ಜಯಭೇರಿ ಭಾರಿಸಿದ ದಕ್ಷಿಣ ಆಫ್ರಿಕಾ ಇತಿಹಾಸ ನಿರ್ಮಿಸಿದೆ.

ರಾಯ್‌ಪುರದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ್ದ 359 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ಮಾರ್ಕ್ರಾಮ್ (110)ಶತಕ, ಬ್ರೀಟ್ಜ್ಕೆ (68), ಬ್ರೇವಿಸ್ (54 ರನ್) ಅರ್ಧಶತಕ ಮತ್ತು ನಾಯಕ ಬವುಮಾ 46 ರನ್ ಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 49.2 ನಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಕಲೆಹಾಕಿ 4 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು.

ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿದೆ. ವಿಶಾಖ ಪಟ್ಟಣಂನಲ್ಲಿ ನಡೆಯಲಿರುವ ಅಂತಿಮ ಪಂದ್ಯ ಇದೀಗ ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ.

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಈ ವರೆಗೂ 13 ಬಾರಿ 350ಕ್ಕೂ ಅಧಿಕ ರನ್ ಯಶಸ್ವಿ ಚೇಸಿಂಗ್ ನಡೆದಿದ್ದು, ಈ ಪೈಕಿ ಗರಿಷ್ಟ ಅಂದರೆ 5 ಬಾರಿ ಭಾರತದಲ್ಲೇ ನಡೆದಿದೆ. ಬೇರೆ ದೇಶಗಳಲ್ಲಿ ಗರಿಷ್ಛ 2 ಬಾರಿ ಮಾತ್ರ 350ಕ್ಕೂ ಅಧಿಕ ರನ್ ಯಶಸ್ವಿ ಚೇಸಿಂಗ್ ನಡೆದಿದೆ.

South Africa Creates history
2nd ODI: ಭಾರತಕ್ಕೆ ಆಘಾತ ನೀಡಿದ ದಕ್ಷಿಣ ಆಫ್ರಿಕಾ, ಬೃಹತ್ ರನ್ ಚೇಸ್ ಮಾಡಿ ದಾಖಲೆ! ಸರಣಿ ಸಮಬಲ

ರನ್ ಗಳ ದಾಖಲೆ

ಇನ್ನು ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ರನ್ ಗಳ ಸುರಿಮಳೆಯನ್ನೇ ಸುರಿಸಿದ್ದು, ಭಾರತ 359 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ 362 ರನ್ ಕಲೆಹಾಕಿತು. ಆ ಮೂಲಕ ಇಂದಿನ ಪಂದ್ಯದಲ್ಲಿ ಒಟ್ಟು 721 ರನ್ ಹರಿದುಬಂದಿದೆ. ಇದು ಹಾಲಿ ಟೂರ್ನಿಯಲ್ಲಿ ಒಂದೇ ಪಂದ್ಯದಲ್ಲಿ ಬಂದ ಗರಿಷ್ಠ ರನ್ ಗಳಾಗಿವೆ. ಈ ಹಿಂದೆ ರಾಂಚಿಯಲ್ಲಿ 681 ರನ್ ಹರಿದುಬಂದಿತ್ತು.

ಭಾರತದಲ್ಲಿ 2ನೇ ಜಂಟಿ ಗರಿಷ್ಠ ರನ್ ಚೇಸ್

ಇನ್ನು ಈ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಇತಿಹಾಸ ನಿರ್ಮಿಸಿದ್ದು, ಭಾರತದಲ್ಲಿ 2ನೇ ಜಂಟಿ ಗರಿಷ್ಠ ರನ್ ಚೇಸ್ ಮಾಡಿದ ತಂಡ ಇದಾಗಿದೆ. ಈ ಹಿಂದೆ 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಜೈಪುರದಲ್ಲಿ 360 ರನ್ ಗಳನ್ನು ಯಶಸ್ವಿಯಾಗಿ ಬೆನ್ನು ಹತ್ತಿತ್ತು.

ಇದು ಭಾರತದಲ್ಲಿ ನಡೆದ ಯಶಸ್ವಿ ಗರಿಷ್ಟ ರನ್ ಚೇಸ್ ಆಗಿದೆ. ಬಳಿಕ 2019ರಲ್ಲಿ ಮೊಹಾಲಿಯಲ್ಲಿ ಆಸ್ಚ್ರೇಲಿಯಾ ಭಾರತದ ವಿರುದ್ಧ 359ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದೀಗ ರಾಯ್ಪುರದಲ್ಲಿ ದಕ್ಷಿಣ ಆಫ್ರಿಕಾ ಕೂಡ 359ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಈ ಸಾಧನೆ ಮಾಡಿದ ಜಂಟಿ 2ನೇ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.

Successful 350-plus chases in ODIs in India

  • 360 - IND vs AUS, Jaipur, 2013

  • 359 - AUS vs IND, Mohali, 2019

  • 359 - SA vs IND, Raipur, 2025

  • 351 - IND vs AUS, Nagpur, 2013

  • 351 - IND vs ENG, Pune, 2017

South Africa Creates history
Virat Kohli ಸ್ಫೋಟಕ ಬ್ಯಾಟಿಂಗ್‍: ದಾಖಲೆಯ 52ನೇ ODI ಶತಕ; ಸಚಿನ್ ದಾಖಲೆ ಸೇರಿ ಹಲವು ರೆಕಾರ್ಡ್ ಉಡೀಸ್!

ವೈಯುಕ್ತಿಕ ಶತಕಗಳಲ್ಲೂ ದಾಖಲೆ

ಇನ್ನು ಇಂದಿನ ಪಂದ್ಯದಲ್ಲಿ ಒಟ್ಟು ಮೂರು ವೈಯುಕ್ತಿಕ ಶತಕಗಳು ದಾಖಲಾಗಿದ್ದು ಭಾರತದ ಪರ ರುತುರಾಜ್ ಗಾಯಕ್ವಾಡ್ ಮತ್ತು ವಿರಾಟ್ ಕೊಹ್ಲಿ ಶತಕಗಳಿಸಿದರೆ, ಅತ್ತ ದಕ್ಷಿಣ ಆಫ್ರಿಕಾ ಪರ ಏಡನ್ ಮಾರ್ಕ್ರಾಮ್ ಶತಕ ಸಿಡಿಸಿದರು. ಆ ಮೂಲಕ ಒಂದೇ ಪಂದ್ಯದಲ್ಲಿ ದಾಖಲಾದ 3ನೇ ಜಂಟಿ ಗರಿಷ್ಠ ವೈಯುಕ್ತಿಕ ಶತಕಗಳ ಸಂಖ್ಯೆಯಾಗಿದೆ. ಈ ಹಿಂದೆ 2001ರಲ್ಲಿ ಜೋಹಾನ್ಲ್ ಬರ್ಗ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಸೌರವ್ ಗಂಗೂಲಿ ಮತ್ತು ಸಚಿನ್ ತೆಂಡೂಲ್ಕರ್ ಶತಕ ಗಳಿಸಿದ್ದರು. ಅತ್ತ ದಕ್ಷಿಣ ಆಫ್ರಿಕಾ ಪರ ಗ್ಯಾರಿ ಕರ್ಸ್ಟನ್ ಶತಕ ಸಿಡಿಸಿದ್ದರು.

Most individual 100s in IND-SA ODIs

  • 3 - Johannesburg, 2001 (Sourav Ganguly, Sachin Tendulkar, Gary Kirsten)

  • 3 - Mumbai WS, 2015 (Quinton de Kock, Faf du Plessis, AB de Villiers)

  • 3 - Raipur, 2025 (Virat Kohli, Ruturaj Gaikwad, Aiden Markram)

2023ರ ವಿಶ್ವಕಪ್ ಟೂರ್ನಿ ಅರ್ಹತಾ ಪಂದ್ಯದಲ್ಲಿ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 375 ರನ್‌ಗಳ ಸಮಬಲ ಸಾಧಿಸಿದ ನಂತರ ನೆದರ್ಲ್ಯಾಂಡ್ಸ್ ಸೂಪರ್ ಓವರ್ ಮೂಲಕ ಜಯ ಸಾಧಿಸಿತು.

ಅಂತೆಯೇ ಇದು ಭಾರತದ ವಿರುದ್ಧ ದಾಖಲಾದ ಜಂಟಿ ಗರಿಷ್ಛ ರನ್ ಚೇಸ್ ಆಗಿದೆ. ಈ ಹಿಂದೆ 2019ರಲ್ಲಿ ಮೊಹಾಲಿಯಲ್ಲಿ ಆಸ್ಚ್ರೇಲಿಯಾ ಭಾರತದ ವಿರುದ್ಧ 359ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದೀಗ ರಾಯ್ಪುರದಲ್ಲಿ ದಕ್ಷಿಣ ಆಫ್ರಿಕಾ ಕೂಡ 359ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಈ ಸಾಧನೆ ಮಾಡಿದ ಜಂಟಿ 2ನೇ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.

ವಿದೇಶ/ತಟಸ್ಥ ಸ್ಥಳಗಳಲ್ಲಿ ಜಂಟಿ 3ನೇ 350+ ODI ಯಶಸ್ವಿ ಚೇಸಿಂಗ್‌

ಇನ್ನು ಇಂದಿನ ಪಂದ್ಯದಲ್ಲಿ ಜಯಭೇರಿ ಭಾರಿಸಿದ ದಕ್ಷಿಣ ಆಫ್ರಿಕಾ 350 ಅಥವಾ ಅದಕ್ಕಿಂತ ಹೆಚ್ಚು ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿದ ಜಂಟಿ 3ನೇ ಪಂದ್ಯ ಇದಾಗಿದೆ. ಇದಕ್ಕೂ ಮೊದಲು 2025ರಲ್ಲಿ ನಡೆದ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ 370 ರನ್ ಚೇಸ್ ಮಾಡಿತ್ತು. ಇದಕ್ಕೂ ಮೊದಲು 2019ರಲ್ಲಿ ಬ್ರಿಡ್ಜ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 361ರನ್ ಗಳನ್ನು ಚೇಸ್ ಮಾಡಿತ್ತು.

Successful 350-plus ODI chases at away/neutral venues

  • 370 - NED vs SCOT, Dundee, 2025

  • 361 - ENG vs WI, Bridgetown, 2019

  • 359 - AUS vs IND, Mohali, 2019

  • 359 - SA vs IND, Raipur, 2025

  • 352 - AUS vs ENG, Lahore, 2025 CT

3 ಬಾರಿ 350ಕ್ಕೂ ಅಧಿಕ ರನ್ ಗಳ ಯಶಸ್ವಿ ಚೇಸಿಂಗ್

ಇನ್ನು ಇಂದಿನ ಪಂದ್ಯದ ಯಶಸ್ವಿ ಚೇಸಿಂಗ್ ನೊಂದಿಗೆ ದಕ್ಷಿಣ ಆಫ್ರಿಕಾ 3 ಬಾರಿ 350 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳನ್ನು ಮೂರು ಯಶಸ್ವಿ ಚೇಸ್ ಮಾಡಿದ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಇದಕ್ಕೂ ಮೊದಲು 2006ರಲ್ಲಿ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಚ್ರೇಲಿಯಾ ವಿರುದ್ಧ 435 ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದ ಗರಿಷ್ಛ ಯಶಸ್ವಿ ಚೇಸ್ ಆಗಿದೆ. ಬಳಿಕ ದಕ್ಷಿಣ ಆಫ್ರಿಕಾ 2016ರಲ್ಲಿ ಡರ್ಬನ್ ನಲ್ಲಿ ಇದೇ ಆಸ್ಟ್ರೇಲಿಯಾ ವಿರುದ್ಧ 372ರನ್ ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು.

Successful 350-plus run-chases for SA in ODIs

  • 435 vs AUS, Johannesburg, 2006

  • 372 vs AUS, Durban, 2016

  • 359 vs IND, Raipur, 2025

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com