

ಧರ್ಮಶಾಲಾ: ಟಿ-20 ಪಂದ್ಯದಲ್ಲಿ ನೀರಸ ಪ್ರದರ್ಶನದ ಬಗ್ಗೆ ಸೂರ್ಯ ಕುಮಾರ್ ಯಾದವ್ ಭಾನುವಾರ ಒಪ್ಪಿಕೊಂಡರು. ಆದರೆ ಫಾರ್ಮ್ ಕೊರತೆಯನ್ನು ನಿರಾಕರಿಸಿದರು.
ಧರ್ಮಶಾಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ 7 ವಿಕೆಟ್‌ಗಳಿಂದ ಸೋಲಿಸಿತು. ಭಾರತವು 15.5 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 118 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು. ಶಿವಂ ದುಬೆ ಸತತ ಎರಡು ಬೌಂಡರಿಗಳನ್ನು ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.
ನಾಯಕ ಸೂರ್ಯಕುಮಾರ್ ಯಾದವ್ 12, ಅಭಿಷೇಕ್ ಶರ್ಮಾ 35 ಮತ್ತು ಶುಭ್‌ಮನ್ ಗಿಲ್ 28 ರನ್ ಗಳಿಸಿದರು. ಅಕ್ಟೋಬರ್ 24 ರಂದು ಹೈದರಾಬಾದ್‌ನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ 75 ಮತ್ತು ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 47 ಅನ್ನು ಹೊರತುಪಡಿಸಿ, 21 ಇನ್ನಿಂಗ್‌ಗಳಲ್ಲಿ ಅವರ ಪ್ರದರ್ಶನ ನೀರಸವಾಗಿದೆ.
ಈ ಕುರಿತು ಪಂದ್ಯ ನಂತರದ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸೂರ್ಯ ಕುಮಾರ್ ಯಾದವ್, ನೆಟ್ಸ್‌ನಲ್ಲಿ ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದೇನೆ. ರನ್‌ಗಳು ಬರಬೇಕಾದಾಗ ಬರುತ್ತವೆ. ಫಾರ್ಮ್ ನಿಂದ ಹೊರಗೆ ಉಳಿದಿಲ್ಲ. ಖಂಡಿತವಾಗಿಯೂ ರನ್‌ಗಳಿಂದ ಹೊರಗಿಲ್ಲ ಎಂದರು.
ಈ ಕ್ರೀಡೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ ಎಂದು ಭಾವಿಸುತ್ತೇನೆ. ಸರಣಿಗೆ ಹೇಗೆ ಕಂಬ್ಯಾಕ್ ಆಗ್ತೀರಾ ಎಂಬುದು ಪ್ರಮುಖವಾಗಿದೆ. ನಾವು ಅದೇ ಕೆಲಸವನ್ನು ಮಾಡಿದ್ದೇವೆ. ನಾವು ಮೂಲಭೂತ ವಿಷಯಗಳಿಗೆ ಹಿಂತಿರುಗಲು ಬಯಸಿದ್ದೇವೆ. ಕಟಕ್ ನಲ್ಲಿ ಏನು ಮಾಡಿದ್ದೇವೋ ಅದನ್ನೇ ಮಾಡಿದ್ದೇವೆ ಎಂದು ತಿಳಿಸಿದರು.
ಚಂಡೀಗಢದಲ್ಲಿ ಪಂದ್ಯದಿಂದ ಬಹಳಷ್ಟು ಕಲಿಯಲಾಗಿದೆ. ಬೌಲರ್‌ಗಳು ಒಟ್ಟಿಗೆ ಕುಳಿತು ಚರ್ಚಿಸಿದ್ದಾಗಿ ಅರ್ಷದೀಪ್ ಸಿಂಗ್ ಹೇಳಿದರು.
Advertisement