

ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿದೆ. ಟಾಸ್ ಗೆದ್ದು ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಇನ್ನು ಆರಂಭಿಸಿದ ಪಾಕಿಸ್ತಾನ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 347 ರನ್ ಪೇರಿಸಿತ್ತು. ಬೃಹತ್ ಮೊತ್ತ ಬೆನ್ನಟ್ಟಿದ ಭಾರತ 156 ರನ್ ಗಳಿಗೆ ಆಲೌಟ್ ಆಗಿದ್ದು 191 ರನ್ ಗಳಿಂದ ಹೀನಾಯ ಸೋಲು ಅನುಭವಿಸಿತು.
ಭಾರತ ತಂಡ 26.1 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ವೈಭವ್ ಸೂರ್ಯವಂಶಿ ಕೇವಲ 26 ರನ್ ಗಳಿಸಲು ಸಾಧ್ಯವಾಯಿತು. ದೀಪೇಶ್ ದೇವೇಂದ್ರನ್ ಅತಿ ಹೆಚ್ಚು 36 ರನ್ ಗಳಿಸಿದರು. ಪಾಕಿಸ್ತಾನ ಪರ ಅಲಿ ರಜಾ ನಾಲ್ಕು ವಿಕೆಟ್ ಪಡೆದರು, ಮೊಹಮ್ಮದ್ ಸಯ್ಯಮ್, ಹುಜೈಫಾ ಅಹ್ಸಾನ್ ಮತ್ತು ಅಬ್ದುಲ್ ಸುಭಾನ್ ತಲಾ ಎರಡು ವಿಕೆಟ್ ಪಡೆದರು.
ಪಾಕಿಸ್ತಾನ ಪರ ಸಮೀರ್ ಮಿನ್ಹಾಸ್ ತಂಡಕ್ಕೆ ಅದ್ಭುತ ಶತಕ ಗಳಿಸಿ, 113 ಎಸೆತಗಳಲ್ಲಿ 172 ರನ್‌ಗಳ ಬಲವಾದ ಇನ್ನಿಂಗ್ಸ್ ನೀಡಿದರು. ಅಹ್ಮದ್ ಹುಸೇನ್ 56 ರನ್‌ಗಳ ಕೊಡುಗೆ ನೀಡಿದರು. ಭಾರತದ ಪರ ದೀಪೇಶ್ ದೇವೇಂದ್ರನ್ ಮೂರು ವಿಕೆಟ್ ಪಡೆದರೆ, ಖಿಲನ್ ಪಟೇಲ್ ಮತ್ತು ಹೆನಿಲ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಕನಿಷ್ಕ್ ಚೌಹಾಣ್ ಒಂದು ವಿಕೆಟ್ ಪಡೆದರು.
U-19 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ತನ್ನ ಎರಡನೇ ಅತಿದೊಡ್ಡ ಸೋಲನ್ನು ಅನುಭವಿಸಿತು. U-19 ಏಷ್ಯಾ ಕಪ್ ಫೈನಲ್‌ನ ಇತಿಹಾಸದಲ್ಲಿ ಹಿಂದಿನ ಅತಿದೊಡ್ಡ ಸೋಲು ಎಂದರೆ 2023ರ ಫೈನಲ್‌ನಲ್ಲಿ ಬಾಂಗ್ಲಾದೇಶ UAE ತಂಡವನ್ನು 195 ರನ್‌ಗಳಿಂದ ಸೋಲಿಸಿದ್ದು, ಇದು ಟೂರ್ನಿಯ ಅತಿದೊಡ್ಡ ಗೆಲುವು ಕೂಡ ಆಗಿದೆ. ಒಟ್ಟಾರೆ ಟೀಂ ಇಂಡಿಯಾ 8 ಬಾರಿ ಚಾಂಪಿಯನ್ ಆಗಿದ್ದರೆ ಪಾಕಿಸ್ತಾನ ಎರಡು ಬಾರಿ ಚಾಂಪಿಯನ್ ಆಗಿದೆ.
Advertisement