ಒಂದೇ ಓವರ್‌ನಲ್ಲಿ 5 ವಿಕೆಟ್‌ ಕಬಳಿಸಿ ವಿಶ್ವ ದಾಖಲೆ ಬರೆದ ಇಂಡೋನೇಷ್ಯಾದ ಗೆಡೆ ಪ್ರಿಯಾಂಡನಾ; ಟಿ20ಐ ಇತಿಹಾಸದಲ್ಲಿಯೇ ಮೊದಲು!

ಬೌಲಿಂಗ್‌ನಲ್ಲಿ ಸಾಧನೆ ಮಾಡುವ ಮೊದಲು, ಪ್ರಿಯಾಂಡನಾ ಅವರು 11 ಎಸೆತಗಳಲ್ಲಿ 6 ರನ್ ಗಳಿಸಿ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಕೊಡುಗೆ ನೀಡಿದ್ದರು.
Indonesia's Gede Priandana
ಇಂಡೋನೇಷ್ಯಾದ ವೇಗಿ ಗೆಡೆ ಪ್ರಿಯಂಡಾನಾ
Updated on

ಮಂಗಳವಾರ ಬಾಲಿಯಲ್ಲಿ ಇತಿಹಾಸ ನಿರ್ಮಾಣವಾಗಿದ್ದು, ಇಂಡೋನೇಷ್ಯಾದ 28 ವರ್ಷದ ಬಲಗೈ ವೇಗಿ ಗೆಡೆ ಪ್ರಿಯಂಡಾನಾ, ಟಿ20ಐ ಇತಿಹಾಸದಲ್ಲಿಯೇ ಒಂದೇ ಓವರ್‌ನಲ್ಲಿ ಐದು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಿಯಂಡಾನಾ ಅವರು ಪುರುಷ ಮತ್ತು ಮಹಿಳಾ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲನೆಯವರು. ಲಸಿತ್ ಮಲಿಂಗ, ರಶೀದ್ ಖಾನ್ ಮತ್ತು ಜೇಸನ್ ಹೋಲ್ಡರ್ ಅವರಂತಹ ಆಟಗಾರರು ಒಂದೇ ಓವರ್‌ನಲ್ಲಿ 4 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದಕ್ಕೂ ಮೊದಲು ಯಾರೂ ಒಂದೇ ಓವರ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದಿರಲಿಲ್ಲ.

ಕಾಂಬೋಡಿಯಾ ವಿರುದ್ಧದ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾದ ಬೌಲರ್ ಈ ಸಾಧನೆ ಮಾಡಿದರು. 168 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕಾಂಬೋಡಿಯಾ 5 ವಿಕೆಟ್‌ ನಷ್ಟಕ್ಕೆ 106 ರನ್ ಗಳಿಸಿತ್ತು. ಆಗ ಪ್ರಿಯಾಂಡನಾ ತಮ್ಮ ಕ್ಲಿನಿಕಲ್ ಓವರ್ ಆರಂಭಿಸಿದರು. ಅವರು ತಮ್ಮ ಮೊದಲ ಮೂರು ಎಸೆತಗಳಲ್ಲಿ ಶಾ ಅಬ್ರಾರ್ ಹುಸೇನ್, ನಿರ್ಮಲ್‌ಜಿತ್ ಸಿಂಗ್ ಮತ್ತು ಚಾಂಥೋಯೆನ್ ರತನಕ್ ಅವರನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದರು.

ನಾಲ್ಕನೇ ಎಸೆತದಲ್ಲಿ ಡಾಟ್ ಬಾಲ್ ಆದ ನಂತರ ಮೊಂಗ್ದಾರ ಸೋಕ್ ಮತ್ತು ಪೆಲ್ ವೆನ್ನಕ್ ಅವರನ್ನು ಔಟ್ ಮಾಡಿ ಇನಿಂಗ್ಸ್ ಅನ್ನು ಪೂರ್ಣಗೊಳಿಸಿದರು. ಇನಿಂಗ್ಸ್‌ನ 16ನೇ ಓವರ್‌ನಲ್ಲಿ ಈ ಸಾಧನೆ ಮಾಡಿದರು.

ಟಿ20ಐಗಳಲ್ಲಿ ಒಂದೇ ಓವರ್‌ನಲ್ಲಿ 4 ವಿಕೆಟ್‌ ಪಡೆದ ಆಟಗಾರರು

ಲಸಿತ್ ಮಲಿಂಗ (ಶ್ರೀಲಂಕಾ) vs ನ್ಯೂಜಿಲೆಂಡ್, 2019

ರಶೀದ್ ಖಾನ್ (ಅಫ್ಗಾನಿಸ್ತಾನ) vs ಐರ್ಲೆಂಡ್, 2019

ಕರ್ಟಿಸ್ ಕ್ಯಾಂಪರ್ (ಐರ್ಲೆಂಡ್) vs ನೆದರ್ಲ್ಯಾಂಡ್ಸ್, 2021

ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್) vs ಇಂಗ್ಲೆಂಡ್, 2022

Indonesia's Gede Priandana
ನ್ಯೂಜಿಲೆಂಡ್ ವೇಗಿ ಜೇಕಬ್ ಡಫಿ ದಾಖಲೆ; RCB ನಡೆಯನ್ನು ಕೊಂಡಾಡಿದ ಭಾರತದ ಮಾಜಿ ಆಟಗಾರ ಆರ್ ಅಶ್ವಿನ್!

ಪ್ರಿಯಾಂಡನಾ ಆ ಓವರ್‌ನಲ್ಲಿ ವೈಡ್ ಬಾಲ್ ಮೂಲಕ ಒಂದೇ ಒಂದು ರನ್ ನೀಡಿದರು. ಈ ಮೂಲಕ ತಮ್ಮ ತಂಡಕ್ಕೆ 60 ರನ್‌ಗಳ ಗೆಲುವು ತಂದುಕೊಟ್ಟರು.

ಪಂದ್ಯದ ಆರಂಭದಲ್ಲಿ, ವಿಕೆಟ್ ಕೀಪರ್ ಧರ್ಮ ಕೆಸುಮಾ 68 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 110 ರನ್ ಗಳಿಸುವ ಮೂಲಕ ಇಂಡೋನೇಷ್ಯಾದ ಇನಿಂಗ್ಸ್‌ಗೆ ಆಧಾರವಾಗಿದ್ದರು.

ಬೌಲಿಂಗ್‌ನಲ್ಲಿ ಸಾಧನೆ ಮಾಡುವ ಮೊದಲು, ಪ್ರಿಯಾಂಡನಾ ಅವರು 11 ಎಸೆತಗಳಲ್ಲಿ 6 ರನ್ ಗಳಿಸಿ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಕೊಡುಗೆ ನೀಡಿದ್ದರು.

ಪ್ರಿಯಾಂಡನಾ ಅವರ ಈ ಐತಿಹಾಸಿಕ ಪ್ರದರ್ಶನಕ್ಕೂ ಮುನ್ನ, ಒಂದೇ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆಯುವ ಸಾಧನೆ ಪುರುಷರ ಟಿ20 ಕ್ರಿಕೆಟ್‌ನಲ್ಲಿ ಎರಡು ಬಾರಿ ಮಾತ್ರ ಕಂಡುಬಂದಿತ್ತು. ಆದರೆ, ಅದು ದೇಶೀಯ ಸ್ವರೂಪದಲ್ಲಿ. 2013-14ರ ವಿಕ್ಟರಿ ಡೇ ಟಿ20 ಕಪ್‌ನಲ್ಲಿ ಯುಸಿಬಿ-ಬಿಸಿಬಿ ಇಲೆವೆನ್ ಪರ ಆಡುವಾಗ ಅಲ್-ಅಮೀನ್ ಹೊಸೇನ್ ಈ ಸಾಧನೆ ಮಾಡಿದ ಮೊದಲಿಗರು. ನಿವೃತ್ತ ಭಾರತೀಯ ಕ್ರಿಕೆಟಿಗ ಅಭಿಮನ್ಯು ಮಿಥುನ್ 2019-20ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್‌ನಲ್ಲಿ ಕರ್ನಾಟಕ ಪರ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡರು.

ಪ್ರಿಯಾಂಡನಾ ಅವರ ಈ ಪ್ರದರ್ಶನವು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಬೌಲರ್‌ ಒಬ್ಬರು ಒಂದೇ ಓವರ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಮೊದಲ ಪ್ರಕರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com