

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ₹5.2 ಕೋಟಿಗೆ ಆಯ್ಕೆಯಾದ ನಂತರ, ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿಯಲ್ಲಿ ನಾನು ಆಡುತ್ತಿದ್ದೇನೆ ಎಂಬುದನ್ನು ನಂಬಲು ಇನ್ನೂ ಕಷ್ಟಪಡುತ್ತಿದ್ದೇನೆ ಎಂದು ಯುವ ಆಲ್‌ರೌಂಡರ್ ಮಂಗೇಶ್ ಯಾದವ್ ಹೇಳಿದ್ದಾರೆ. ಹರಾಜಿನ ದಿನದಂದು ಕೇವಲ ಒಂದು ಬಿಡ್‌ಗೆ ಮಾತ್ರ ಆಶಿಸಿದ್ದೆ ಆದರೆ, ಆರ್‌ಸಿಬಿ ತನ್ನನ್ನು ಖರೀದಿಸುವ ಮೊದಲು ನಾಲ್ಕು ಫ್ರಾಂಚೈಸಿಗಳು ಬಿಡ್ಡಿಂಗ್ ಸ್ಪರ್ಧೆಗೆ ಪ್ರವೇಶಿಸಿದಾಗ ಆಶ್ಚರ್ಯವಾಯಿತು ಎಂದು 23 ವರ್ಷದ ಮಂಗೇಶ್ ಬಹಿರಂಗಪಡಿಸಿದ್ದಾರೆ. ಗಂಟೆಗೆ 140 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯಕ್ಕೆ ಮಂಗೇಶ್ ಹೆಸರುವಾಸಿಯಾಗಿದ್ದಾರೆ. ಸ್ಲೋವರ್ ಬೌಲಿಂಗ್ ಅವರ ಶಕ್ತಿಯಾಗಿದೆ.
ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಪ್ರಕಾರ, ಆರ್‌ಸಿಬಿಯಲ್ಲಿ, ಅವರು ಯಶ್ ದಯಾಳ್ ಬದಲಿಗೆ ಆಡುವ ಸಾಧ್ಯತೆಯಿದೆ. ತಂಡದ ಸ್ಕೌಟ್‌ಗಳು ಅವರು ತಕ್ಷಣವೇ ಆಡುವ ಹನ್ನೊಂದರೊಳಗೆ ಸ್ಥಾನ ಪಡೆಯುವ ಕೌಶಲ್ಯ ಹೊಂದಿದ್ದಾರೆಂದು ನಂಬುತ್ತಾರೆ ಎನ್ನಲಾಗಿದೆ.
'ನನಗೆ ಹಿಂದೆಂದಿಗಿಂತಲೂ ಹೆಚ್ಚಿನ ಕರೆಗಳು ಬಂದಿವೆ. ಆದರೆ, ಇವುಗಳನ್ನು ನಾನು ಮುಂದೆ ನಿಭಾಯಿಸಬೇಕಾಗುತ್ತದೆ' ಎಂದು ಮಂಗೇಶ್ ಯಾದವ್ ಹೇಳಿರುವುದಾಗಿ ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.
ಮಧ್ಯಪ್ರದೇಶದ ಕ್ರಿಕೆಟಿಗ ತನ್ನ ರಾಜ್ಯದ ಹಿರಿಯ ಆಟಗಾರರಿಂದ ಪಡೆದ ಬೆಂಬಲ ಮತ್ತು ಸಲಹೆಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು. ತನ್ನ ತಂದೆಯನ್ನು ಅವಲಂಭಿಸದೆ ಆರ್ಥಿಕವಾಗಿ ಸ್ವತಂತ್ರರಾಗಿರುವುದು ಒಂದು ಪ್ರಮುಖ ವೈಯಕ್ತಿಕ ಮೈಲಿಗಲ್ಲು ಮತ್ತು ಐಪಿಎಲ್ ಬಿಡ್‌ನ ಗಾತ್ರವನ್ನು ಪ್ರಕ್ರಿಯೆಗೊಳಿಸಲು ಇನ್ನೂ ಪ್ರಯತ್ನಿಸುತ್ತಿದ್ದೇನೆ' ಎಂದರು.
'ಇದೆಲ್ಲ ಹೇಗನಿಸುತ್ತಿದೆ ಎಂದು ನನಗೆ ತಿಳಿದಿರಲಿಲ್ಲ. ಆದರೆ, ನನ್ನ ತವರಿನವರೇ ಆದ ರಜತ್ ಪಾಟೀದಾರ್, ವೆಂಕಟೇಶ್ ಅಯ್ಯರ್ ಮತ್ತು ಆನಂದ್ ರಾಜನ್ (ಮಧ್ಯಪ್ರದೇಶದ ಮಾಜಿ ಸೀಮರ್) ಸರ್ ಅವರಂತಹ ಮಾರ್ಗದರ್ಶನ ಸಿಕ್ಕಿರುವುದು ನನ್ನ ಅದೃಷ್ಟ. ಇನ್ಮುಂದೆ ನನ್ನ ತಂದೆಯಿಂದ ಹಣ ಕೇಳುವ ಅಗತ್ಯ ಇಲ್ಲದಿರುವುದು ಒಂದು ಸಾಧನೆಯಂತೆ ಭಾಸವಾಯಿತು. ಇಂದು, ಇಷ್ಟು ದೊಡ್ಡ ಬಿಡ್ ಪಡೆದ ಭಾವನೆಯನ್ನು ಹೇಗೆ ನಿಭಾಯಿಸಬೇಕೆಂದು ನನಗೆ ಇನ್ನೂ ತಿಳಿದಿಲ್ಲ. ನನ್ನ ಹೆತ್ತವರನ್ನು ಆರಾಮದಾಯಕವಾಗಿಸಲು ನಾನು ಬಯಸುತ್ತೇನೆ. ಅದಕ್ಕಾಗಿ, ನಾನು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ಇದರಿಂದ ದೂರಹೋಗಲು ಸಾಧ್ಯವಿಲ್ಲ' ಎಂದು ಹೇಳಿದರು.
ಐಪಿಎಲ್‌ನಲ್ಲಿ ಈ ಅದ್ಭುತ ಸಾಧನೆ ಮಾಡಿದರೂ, ದೇಶೀಯ ಕ್ರಿಕೆಟ್‌ನಲ್ಲಿಯೂ ಮುಂದುವರಿಯುತ್ತೇನೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ಪರ ಪ್ರದರ್ಶನ ನೀಡುವುದು ತಮ್ಮ ತಕ್ಷಣದ ಆದ್ಯತೆಯಾಗಿದೆ ಎಂದು ಅವರು ಹೇಳಿದರು.
'ಆರ್‌ಸಿಬಿ ಜೆರ್ಸಿ ಧರಿಸಿ ರನ್-ಅಪ್ ಮೇಲೆ ನಿಂತು ಆಡುವುದು ಹೇಗಿರುತ್ತದೆ ಎಂದು ನಾನು ಊಹಿಸಿದ್ದೇನೆ. ಆದರೆ, ನಾನು ವಿಕೆಟ್ ಕಿತ್ತು ಎಂಪಿ ಪರ ಪಂದ್ಯಗಳನ್ನು ಗೆಲ್ಲುವುದನ್ನು ಸಹ ಊಹಿಸಿದ್ದೇನೆ. ಅದು ನನ್ನ ಪ್ರಾಥಮಿಕ ಗುರಿ' ಎಂದು ಮಂಗೇಶ್ ಹೇಳಿದರು.
Advertisement