

ತಿರುವುನಂತಪುರಂ: ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ 4ನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಕೇರಳದ ತಿರುವನಂತಪುರಂನಲ್ಲಿರುವ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಇಂದು ನಡೆಯುತ್ತಿರುವ 4ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು 221 ರನ್ ಗಳಿಸಿ ಶ್ರೀಲಂಕಾಗೆ ಗೆಲ್ಲಲು 222 ರನ್ ಗಳ ಬೃಹತ್ ಗುರಿ ನೀಡಿದೆ.
ಈ ಪಂದ್ಯದಲ್ಲಿ ಭಾರತದ ಆರಂಭಿಕ ಜೋಡಿ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಆರಂಭದಿಂದಲೇ ಶ್ರೀಲಂಕಾ ಬೌಲರ್ ಗಳ ಮೇಲೆ ಸವಾರಿ ಮಾಡಿತು. ಈ ಜೋಡಿ ಭಾರತಕ್ಕೆ ಸ್ಫೋಟಕ ಆರಂಭ ನೀಡಿತು. ಮೊದಲ ವಿಕೆಟ್ ಗೆ ಈ ಜೋಡಿ ದಾಖಲೆಯ 162 ರನ್ ಜೊತೆಯಾಟ ನೀಡಿತು.
ಸ್ಮೃತಿ ಮಂಧಾನ 48 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ 80 ರನ್ ಚಚ್ಚಿದರೆ, ಮತ್ತೊಂದು ತುದಿಯಲ್ಲಿ ಅವರಿಗೆ ಸ್ಪರ್ಧೆ ನೀಡುತ್ತಿದ್ದ ಶಫಾಲಿ ವರ್ಮಾ ಕೂಡ 46 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 12 ಬೌಂಡರಿಗಳ ನೆರವಿನಿಂದ 79 ರನ್ ಕಲೆಹಾಕಿದರು.
ಇತಿಹಾಸ ಬರೆದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ
ಈ ಸ್ಫೋಟಕ ಬ್ಯಾಟಿಂಗ್ ಮೂಲಕ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಈ ಜೋಡಿ ಇಂದು ಮೊದಲ ವಿಕೆಟ್ ಗೆ ಗಳಿಸಿದ 162 ರನ್ ಗಳು ಟಿ20 ಕ್ರಿಕೆಟ್ ನಲ್ಲಿ ಭಾರತದ ಪರ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ. ಇದು ಕೇವಲ ಆರಂಭಿಕ ಜೊತೆಯಾಟ ಮಾತ್ರವಲ್ಲ.. ಯಾವುದೇ ಕ್ರಮಾಂಕದಲ್ಲಿ ಭಾರತದ ದಾಖಲಾದ ಗರಿಷ್ಠ ಜೊತೆಯಾಟ ಕೂಡ ಇದಾಗಿದೆ.
2019 ರಲ್ಲಿ ಗ್ರಾಸ್ ಐಲೆಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಒಂದೇ ವಿಕೆಟ್‌ಗೆ ಅದೇ ಜೋಡಿ ಹೊಂದಿದ್ದ 143 ರನ್‌ಗಳ ದಾಖಲೆಯನ್ನು ಇದು ಮುರಿದಿದೆ. ಒಟ್ಟಾರೆಯಾಗಿ ಮಹಿಳಾ ಟಿ20ಐಗಳಲ್ಲಿಯೂ ಸಹ, ಇದು ಎರಡು ಪೂರ್ಣ ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ಪಂದ್ಯಗಳಲ್ಲಿ ಅತ್ಯಧಿಕ ಪಾಲುದಾರಿಕೆ ಸ್ಕೋರ್‌ಗಳಲ್ಲಿ ಒಂದಾಗಿದೆ.
ಆಸಿಸ್ ದಾಖಲೆಯೂ ಧ್ವಂಸ!
ಅಂತೆಯೇ ಇಂದಿನ ಇನ್ನಿಂಗ್ಸ್ ಸೇರಿದಂತೆ ಭಾರತದ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಜೋಡಿಯ ಜೊತೆಯಾಟದ ಈ ವರೆಗಿನ ರನ್ ಗಳಿಕೆ 3 ಸಾವಿರ ಗಡಿ ದಾಟಿದ್ದು, ಇದು ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಜೋಡಿಗಳ ಗರಿಷ್ಟ ರನ್ ಗಳಿಕೆಯಾಗಿದೆ. ಆ ಮೂಲಕ ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಜೋಡಿಯನ್ನು ಹಿಂದಿಕ್ಕಿದ್ದಾರೆ.
ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಜೋಡಿ ತಮ್ಮ ಜೊತೆಯಾಟದಲ್ಲಿ 2720 ರನ್ ಗಳಿಸಿದ್ದು, ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಜೋಡಿ 3107 ರನ್ ಗಳಿಸುವ ಮೂಲಕ ಈ ದಾಖಲೆಯನ್ನು ಹಿಂದಿಕ್ಕಿದೆ.
Most partnership runs in Women’s T20Is (any wicket)
3107 - Smriti Mandhana, Shafali Verma (IND-W)*
2720 - Alyssa Healy, Beth Mooney (AUS-W)
2579 - Esha Oza, Theertha Satish (UAE-W)
2556 - Suzie Bates, Sophie Devine (NZ-W)
1976 - Kavisha Egodage, Esha Oza (UAE-W)
Advertisement