

ಇತ್ತೀಚೆಗಷ್ಟೇ ನಡೆದ ಮಿನಿ ಹರಾಜಿನಲ್ಲಿ ಖರೀದಿಸಿದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಹೊಸ ಆಟಗಾರ ಅಮನ್ ಖಾನ್ ಸೋಮವಾರ 2025/26 ರ ವಿಜಯ್ ಹಜಾರೆ ಟ್ರೋಫಿಯ 3ನೇ ಸುತ್ತಿನಲ್ಲಿ ಕಳಪೆ ಪ್ರದರ್ಶನ ನೀಡಿ, ಇತಿಹಾಸದಲ್ಲಿಯೇ ಮರೆಯಲಾಗದ ಕೆಟ್ಟ ದಾಖಲೆ ಬರೆದಿದ್ದಾರೆ.
ಪುದುಚೇರಿ ಕ್ರಿಕೆಟಿಗ ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಅತ್ಯಂತ ದುಬಾರಿ ಬೌಲರ್ ಆಗಿದ್ದರು ಮತ್ತು ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡರು. ಈ ವರ್ಷದ ಆರಂಭದಲ್ಲಿ ನಡೆದ IPL 2026ರ ಮಿನಿ-ಹರಾಜಿನಲ್ಲಿ ಆಲ್‌ರೌಂಡರ್ ಅನ್ನು 40 ಲಕ್ಷ ರೂ.ಗೆ ಸಿಎಸ್‌ಕೆ ಖರೀದಿಸಿತ್ತು.
10 ಓವರ್ ಕೋಟಾ ಪೂರ್ಣಗೊಳಿಸಿದ ಪುದುಚೆರಿಯ ಮೂರನೇ ಬೌಲರ್ ಆಗಿದ್ದ ಅಮನ್, 12.3 ಎಕಾನಮಿಯಲ್ಲಿ 123 ರನ್ ಬಿಟ್ಟುಕೊಟ್ಟರು. ಡಿಸೆಂಬರ್ ಆರಂಭದಲ್ಲಿ 116 ರನ್ ಗಳನ್ನು ಬಿಟ್ಟುಕೊಟ್ಟಿದ್ದ ಅರುಣಾಚಲದ ಮಿಬೊಮ್ ಮೋಸು ಅವರ ಹಿಂದಿನ ದಾಖಲೆಯನ್ನು ಮುರಿದರು.
ಪುದುಚೇರಿ ತಂಡವು 235 ರನ್‌ಗಳಿಗೆ ಆಲೌಟ್ ಆಗಿದ್ದರಿಂದ 368 ರನ್‌ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾಯಿತು. ಇದರಿಂದಾಗಿ ಜಾರ್ಖಂಡ್ ತಂಡವು ವಿಜಯ್ ಹಜಾರೆ ಟ್ರೋಫಿಯ 3ನೇ ಸುತ್ತಿನ ಪಂದ್ಯದಲ್ಲಿ 133 ರನ್‌ಗಳ ಜಯ ಸಾಧಿಸಿತು.
ಬಲಗೈ ಆಲ್‌ರೌಂಡರ್ 2022 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು ಮತ್ತು ಆರಂಭದಲ್ಲಿ ಕೆಕೆಆರ್ ಪರ 1 ಪಂದ್ಯವನ್ನು ಆಡಿದ್ದಾರೆ. 2023ರಲ್ಲಿ ಡಿಸಿ ಪರ 11 ಪಂದ್ಯಗಳನ್ನು ಆಡಿದ್ದಾರೆ. ಅವರು ಯಾವುದೇ ವಿಕೆಟ್ ಪಡೆಯದಿದ್ದರೂ, ಅವರು 110 ರನ್ ಗಳಿಸುವಲ್ಲಿ ಯಶಸ್ವಿಯಾದರು. ಅಮನ್ ಟಿ20ಗಳಲ್ಲಿ ಯೋಗ್ಯ ಅನುಭವವನ್ನು ಹೊಂದಿದ್ದಾರೆ. 32 ಪಂದ್ಯಗಳಿಂದ 20.83 ಸರಾಸರಿಯಲ್ಲಿ 500 ರನ್ ಮತ್ತು 29.80 ಸರಾಸರಿಯಲ್ಲಿ 10 ವಿಕೆಟ್ ಪಡೆದಿದ್ದಾರೆ.
Advertisement